10.6 ಲಕ್ಷ ಕೋಟಿ ನೇರತೆರಿಗೆ ಸಂಗ್ರಹ: ಕಳೆದ ಬಾರಿಗಿಂತ ಶೇ.22ರಷ್ಟು ಏರಿಕೆ

KannadaprabhaNewsNetwork | Published : Nov 11, 2023 1:15 AM

ಸಾರಾಂಶ

2023-24 ಆರ್ಥಿಕ ವರ್ಷದಲ್ಲಿ ಈವರೆಗೆ ಸುಮಾರು 10.6 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.22ರಷ್ಟು ಹೆಚ್ಚಿದೆ

ನವದೆಹಲಿ: 2023-24 ಆರ್ಥಿಕ ವರ್ಷದಲ್ಲಿ ಈವರೆಗೆ ಸುಮಾರು 10.6 ಲಕ್ಷ ಕೋಟಿ ರು. ನೇರ ತೆರಿಗೆ ಸಂಗ್ರಹವಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ.22ರಷ್ಟು ಹೆಚ್ಚಿದೆ. ಅಲ್ಲದೇ ಬಜೆಟ್‌ನ ವಾರ್ಷಿಕ ಅಂದಾಜಿನ ಶೇ.58ರಷ್ಟನ್ನು ಮೀರಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ಹೇಳಿದೆ. ನಿವ್ವಳ ಕಾರ್ಪೋರೆಟ್‌ ತೆರಿಗೆ ಪ್ರಮಾಣ ಶೇ,12.48ರಷ್ಟು ಹೆಚ್ಚಿದ್ದು, ವೈಯಕ್ತಿಕ ಆದಾಯ ತೆರಿಗೆ ಶೇ.31.77ರಷ್ಟು ಹೆಚ್ಚಿದೆ. ಏ.1ರಿಂದ ನ.9ರವರೆಗೆ 1.77 ಲಕ್ಷ ಕೋಟಿ ರು. ಮರುಪಾವತಿ ಮಾಡಲಾಗಿದೆ. ಅಲ್ಲದೇ ಕಾರ್ಪೊರೆಟ್‌ ಆದಾಯ ತೆರಿಗೆಯಲ್ಲಿ ಶೇ.7.13ರಷ್ಟು ಪ್ರಗತಿ ದರ ಇದೆ ಎಂದು ಇಲಾಖೆ ಹೇಳಿದೆ.

Share this article