ಜಗತ್ತಿನ ಅತ್ಯಂತ ಮೌಲ್ಯಯುತ ಐಟಿ ಕಂಪನೀಲಿ ಟಿಸಿಎಸ್‌, ಇನ್ಫಿ

KannadaprabhaNewsNetwork |  
Published : Jan 21, 2026, 02:00 AM IST
IT

ಸಾರಾಂಶ

ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮೌಲ್ಯಯುತ ಜಾಗತಿಕ ಕಂಪನಿಗಳ ಪೈಕಿ ಟಿಸಿಎಸ್‌ ಮತ್ತು ಇನ್ಫೋಸಿಸ್‌ ವಿಶ್ವದಲ್ಲೇ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಜೊತೆಗೆ ಜಗತ್ತಿನ ಟಾಪ್‌ 25 ಕಂಪನಿಗಳಲ್ಲಿ ಭಾರತದ 8 ಕಂಪನಿಗಳು ಸ್ಥಾನ ಪಡೆದಿವೆ.

ನವದೆಹಲಿ: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ಮೌಲ್ಯಯುತ ಜಾಗತಿಕ ಕಂಪನಿಗಳ ಪೈಕಿ ಟಿಸಿಎಸ್‌ ಮತ್ತು ಇನ್ಫೋಸಿಸ್‌ ವಿಶ್ವದಲ್ಲೇ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ. ಜೊತೆಗೆ ಜಗತ್ತಿನ ಟಾಪ್‌ 25 ಕಂಪನಿಗಳಲ್ಲಿ ಭಾರತದ 8 ಕಂಪನಿಗಳು ಸ್ಥಾನ ಪಡೆದಿವೆ.

ಬ್ರ್ಯಾಂಡ್‌ ಫೈನಾನ್ಸ್‌ ಬಿಡುಗಡೆ ಮಾಡಿರುವ ‘ಐಟಿ ಸರ್ವೀಸ್‌ 25(2026) ’ ವರದಿ

ಬ್ರ್ಯಾಂಡ್‌ ಫೈನಾನ್ಸ್‌ ಬಿಡುಗಡೆ ಮಾಡಿರುವ ‘ಐಟಿ ಸರ್ವೀಸ್‌ 25(2026) ’ ವರದಿ ಅನ್ವಯ ಆ್ಯಕ್ಸೆಂಚರ್‌ 3.8 ಲಕ್ಷ ಕೋಟಿ ರು. ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು 1.93 ಲಕ್ಷ ಕೋಟಿ ರು.ನೊಂದಿಗೆ ಟಿಸಿಎಸ್‌ 2ನೇ ಸ್ಥಾನ ಮತ್ತು 1.49 ಲಕ್ಷ ಕೋಟಿ ರು.ನೊಂದಿಗೆ ಇನ್ಫೋಸಿಸ್‌ 3ನೇ ಸ್ಥಾನದಲ್ಲಿದೆ. 

ಅಗ್ರ 25ರಲ್ಲಿ ಭಾರತದ 8 ಕಂಪನಿಗಳು

ಉಳಿದಂತೆ ಹೆಚ್‌ಸಿಎಲ್‌, ವಿಪ್ರೋ, ಟೆಕ್‌ ಮಹೀಂದ್ರಾ , ಎಲ್‌ಟಿಐ ಮೈಂಡ್‌ಟ್ರೀ, ಪರ್ಸಿಸ್ಟೆಂಟ್‌ ಸಿಸ್ಟಮ್‌, ಹೆಕ್ಸಾವೇರ್‌ ಟೆಕ್ನಾಲಜಿ ಸ್ಥಾನ ಪಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಳ್ಳಿ ಬೆಲೆ ಏರಿಕೆಯ ನಾಗಲೋಟ : ಚಿನ್ನದ ಬೆಲೆಯಲ್ಲಿಯೂ ಭಾರಿ ಹೆಚ್ಚಳ
ಜ.24ರಿಂದ 4 ದಿನ ಬ್ಯಾಂಕ್‌ಸೇವೆ ಸಿಗೋದು ಡೌಟ್ - ಈಗಲೇ ಮುಗಿಸಿಕೊಳ್ಳಿ