ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ಪಕ್ಷಗಳು ತಮ್ಮ ಲೋಗೋ ಇರುವ ಕಾಂಡೋಮ್‌ಗಳನ್ನು ಮತದಾರರಿಗೆ ಹಂಚುತ್ತಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಅಮರಾವತಿ: ಚುನಾವಣೆ ವೇಳೆ ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ಸೀರೆ, ಕುಕ್ಕರ್, ಪಾತ್ರೆ, ಸಾರಾಯಿ ಹಂಚುವುದು ಸಾಮಾನ್ಯ. ಆದರೆ ಆಂಧ್ರದಲ್ಲಿ ಈ ಬಾರಿ ರಾಜಕೀಯ ಪಕ್ಷಗಳು ಗರ್ಭನಿರೋಧಕ ಕಾಂಡೋಂ ವಿತರಣೆ ಮಾಡುತ್ತಿವೆ.!
ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷಗಳ ಲೋಗೋ ಇರುವ ಕಾಂಡೋಮ್ ಪ್ಯಾಕ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರ ಮನೆಗೆ ನೀಡುತ್ತಿರುವ ಉಚಿತ ಉಡುಗೊರೆ ಕಿಟ್‌ನಲ್ಲಿ ಕಾಂಡೋಂ ಕೂಡಾ ಸೇರಿಕೊಂಡಿದೆ.
ಅದರ ಬೆನ್ನಲ್ಲೇ ಉಭಯ ಪಕ್ಷಗಳು ಜಾಲತಾಣದಲ್ಲಿ ಪರಸ್ಪರರನ್ನು ಟೀಕಿಸಿದ್ದು, ಇದು ಕೀಳುಮಟ್ಟದ ರಾಜಕೀಯ. ಈಗ ಕಾಂಡೋಂ, ಮುಂದೆ ಕಾಮೋತ್ತೇಜಕ ಔಷಧವಾದ ವಯಾಗ್ರಾ ನೀಡಬಹದುದು ಎಂದು ಕಿಡಿಕಾರಿವೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.