ಗುಲ್ಮಾರ್ಗ್‌ ಹಿಮಕುಸಿತಕ್ಕೆ ರಷ್ಯಾ ಸ್ಕೀಯರ್‌ ಬಲಿ

KannadaprabhaNewsNetwork |  
Published : Feb 23, 2024, 01:46 AM IST
ಶವ | Kannada Prabha

ಸಾರಾಂಶ

ಗುಲ್ಮಾರ್ಗ್‌ನಲ್ಲಿ ಸಂಭವಿಸಿದ ಭಾರೀ ಹಿಮಕುಸಿತಕ್ಕೆ ರಷ್ಯಾದ ಚಾರಣಿಗರೊಬ್ಬರು ಮೃತಪಟ್ಟಿದ್ದು, 7 ಜನರನ್ನು ರಕ್ಷಣೆ ಮಾಡಲಾಗಿದೆ.

ಗುಲ್ಮಾರ್ಗ್‌: ಜಮ್ಮು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಗುರುವಾರ ಹಿಮಕುಸಿತ ಸಂಭವಿಸಿ ರಷ್ಯಾದ ಓರ್ವ ಚಾರಣಿಗ ಮೃತಪಟ್ಟಿದ್ದು, ಸ್ಥಳೀಯ ಗೈಡ್‌ ಸೇರಿದಂತೆ ಉಳಿದ 7 ಜನರನ್ನು ರಕ್ಷಿಸಲಾಗಿದೆ.

ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಲ್ಮಾರ್ಗ್‌ನ ಕಾಂಗ್‌ದೂರಿಯ ಇಳಿಜಾರುಗಳಲ್ಲಿ ಘಟನೆ ಸಂಭವಿಸಿದ್ದು, ಈ ವೇಳೆ ಹಲವಾರು ಸ್ಕೀಯರ್‌ಗಳು ಹಿಮದಡಿಯಲ್ಲಿ ಸಿಲುಕಿದ್ದರು.

ಈ ವೇಳೆ ರಷ್ಯಾದ 7 ಜನ ಸ್ಕೀಯರ್‌ಗಳು ಹಾಗೂ ಓರ್ವ ಸ್ಥಳೀಯನನ್ನು ರಕ್ಷಿಸಲಾಯಿತು. ಈ ವೇಳೆ ಓರ್ವರು ಮೃತಪಟ್ಟರು.

ಅದಾಗ್ಯೂ ಸದ್ಯ ಗುಲ್ಮಾರ್ಗ್‌ನಲ್ಲಿ ನಡೆಯುತ್ತಿರುವ 4ನೇ ಖೇಲೋ ಇಂಡಿಯಾ ವಿಂಟರ್‌ ಗೇಮ್ಸ್‌ಗೆ ಹಿಮಕುಸಿತದಿಂದ ಯಾವುದೇ ತೊಂದರೆಗಳಾಗಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ