ಇಂದು ಟಿಡಿಪಿ ಶಾಸಕಾಂಗ ಪಕ್ಷದ ಸಭೆ: ನಾಳೆ ಆಂಧ್ರ ಹೊಸ ಸರ್ಕಾರ ರಚನೆ

KannadaprabhaNewsNetwork |  
Published : Jun 11, 2024, 01:34 AM ISTUpdated : Jun 11, 2024, 09:28 AM IST
ಟಿಡಿಪಿ | Kannada Prabha

ಸಾರಾಂಶ

ಟಿಡಿಪಿ ಸಭೆ ಸೇರಿ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರಪ್ರದೇಶದ ಟಿಡಿಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆರಿಸಲಿದೆ.

ಅಮರಾವತಿ: ಸಭೆಯ ಬಳಿಕ ಟಿಡಿಪಿ, ಜನಸೇನಾ ಹಾಗೂ ಬಿಜೆಪಿಯನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟ ರಾಜಭವನಕ್ಕೆ ತೆರಳಿ ರಾಜ್ಯಪಾಲ ಅಬ್ದುಲ್‌ ನಜೀ಼ರ್‌ರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.

ಮೂಲಗಳ ಪ್ರಕಾರ ಮಂಗಳವಾರ ರಾತ್ರಿಯೇ ಸಂಪುಟವನ್ನು ಅಂತಿಮಗೊಳಿಸಲಿದ್ದು, ಬುಧವಾರ ಬೆಳಗ್ಗೆ 11:27ಕ್ಕೆ ಚಂದ್ರಬಾಬು ನಾಯ್ಡು ನಗರದ ಗನ್ನಾವರಂ ವಿಮಾನ ನಿಲ್ದಾಣ ಬಳಿಯ ಕೇಸರಪಳ್ಳಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಆಂಧ್ರಪ್ರದೇಶದ 175 ಕ್ಷೇತ್ರಗಳ ವಿಧಾನಸಭೆಯಲ್ಲಿ ಟಿಡಿಪಿ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಮೈತ್ರಿಕೂಟ 164 ಕ್ಷೇತ್ರಗಳಲ್ಲಿ ಜಯ ಕಂಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ :ಹೊಸ ನಿಯಮದಲ್ಲೇನಿದೆ?
ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್‌ ಜಾಲ ಭೇದಿಸಿದ ಕರಾವಳಿ ಪಡೆ