ಡಿ.5ರಂದು ಬೆಂಗಳೂರಿನಲ್ಲಿಮಿಡ್‌ನೈಟ್ ಮ್ಯಾರಥಾನ್

KannadaprabhaNewsNetwork |  
Published : Nov 13, 2026, 01:15 AM IST
ಮ್ಯಾರಾಥಾನ್  | Kannada Prabha

ಸಾರಾಂಶ

ಸುಮಧುರ ಭಾರತ್ ಮಿಡ್‌ನೈಟ್ ಮ್ಯಾರಥಾನ್ ಎಂಬ ಹೆಸರಿನೊಂದಿಗೆ 19ನೇ ಆವೃತ್ತಿಯ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ (ಬಿಎಂಎಂ) ಡಿ.5 ಶನಿವಾರ ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ಆಯೋಜನೆಗೊಳ್ಳಲಿದೆ.

ಬೆಂಗಳೂರು: ಸುಮಧುರ ಭಾರತ್ ಮಿಡ್‌ನೈಟ್ ಮ್ಯಾರಥಾನ್ ಎಂಬ ಹೆಸರಿನೊಂದಿಗೆ 19ನೇ ಆವೃತ್ತಿಯ ಬೆಂಗಳೂರು ಮಿಡ್‌ನೈಟ್ ಮ್ಯಾರಥಾನ್ (ಬಿಎಂಎಂ) ಡಿ.5 ಶನಿವಾರ ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ಆಯೋಜನೆಗೊಳ್ಳಲಿದೆ. ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆಯೋಜಿಸುವ ಈ ಸ್ಪರ್ಧೆಯ ಘೋಷವಾಕ್ಯ ‘ರನ್ ಫಾರ್ ಸ್ವಸ್ಥ ಭಾರತ್’ ಮತ್ತು ಅಧಿಕೃತ ಟೀಶರ್ಟ್‌ಅನ್ನು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅನಾವರಣಗೊಳಿಸಲಾಯಿತು. ಇದನ್ನು ಕರ್ನಾಟಕ ಮತ್ತು ಕೇರಳ ಉಪ ವಲಯದ ಜಿಒಸಿ ಮೇಜರ್ ಜನರಲ್ ಭರತ್ ಮೆಹ್ತಾನಿ ಮತ್ತು ಬಿಎಂಎಂ ಅಧಿಕೃತ ಫಿಟ್ನೆಸ್ ಮೆಂಟರ್, ಖ್ಯಾತ ಚಿತ್ರನಟಿ, ಫಿಟ್ ಇಂಡಿಯಾ ರಾಯಭಾರಿ ರಾಗಿಣಿ ದ್ವಿವೇದಿ ಅವರು ಬಿಡುಗಡೆ ಮಾಡಿದರು. ಈ ವರ್ಷದ ಓಟದಲ್ಲಿ 12000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಅದರಲ್ಲಿ ವೃತ್ತಿಪರ ಓಟಗಾರರು, ಅಥ್ಲೀಟ್ಗಳು, ಸಶಸ್ತ್ರ ಪಡೆಗಳ ಸಿಬ್ಬಂದಿ, ಕಾರ್ಪೊರೇಟ್ ನೌಕರರು, ಎನ್ಜಿಒಗಳು, ಅಂತಾರಾಷ್ಟ್ರೀಯ ಓಟಗಾರರು ಸೇರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜಿಲ್ಲೆಯಲ್ಲಿ 1,757 ಕರುಳುಬೇನೆ ಪ್ರಕರಣ ಪತ್ತೆ: ಡಾ.ಎನ್. ತಿಪ್ಪೇಸ್ವಾಮಿ
ಸೋನಿಯಾ ರಹಸ್ಯಗಳು - ಆತ್ಮಕತೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್‌ ಲವ್’