ಬಿ-2 ಬಾಂಬರ್‌ನಲ್ಲಿತ್ತು ಆಹಾರ, ಶೌಚಾಲಯ, ವಿಶ್ರಾಂತಿ ಕೊಠಡಿ

KannadaprabhaNewsNetwork |  
Published : Jun 23, 2025, 11:49 PM ISTUpdated : Jun 24, 2025, 04:36 AM IST
ಬಿ-2 | Kannada Prabha

ಸಾರಾಂಶ

ಇರಾನ್‌ನ ಫೊರ್ಡೋ ಸೇರಿದಂತೆ 3 ಅಣು ಕ್ರೇಂದ್ರಗಳ ಮೇಲಿನ ದಾಳಿಗೆ ಅಮೆರಿಕದಿಂದ ಹೊರಟಿದ್ದ ಬಿ-2 ಸ್ಟೆಲ್ತ್‌ ಬಾಂಬರ್‌ಗಳಲ್ಲಿ, ಆಹಾರ, ಆರಾಮದಿಂದ ಹಿಡಿದು ಶೌಚದವರೆಗೆ ಪೈಲಟ್‌ಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದವು ಎಂದು ತಿಳಿದುಬಂದಿದೆ.

 ವಾಷಿಂಗ್ಟನ್‌: ಇರಾನ್‌ನ ಫೊರ್ಡೋ ಸೇರಿದಂತೆ 3 ಅಣು ಕ್ರೇಂದ್ರಗಳ ಮೇಲಿನ ದಾಳಿಗೆ ಅಮೆರಿಕದಿಂದ ಹೊರಟಿದ್ದ ಬಿ-2 ಸ್ಟೆಲ್ತ್‌ ಬಾಂಬರ್‌ಗಳಲ್ಲಿ, ಆಹಾರ, ಆರಾಮದಿಂದ ಹಿಡಿದು ಶೌಚದವರೆಗೆ ಪೈಲಟ್‌ಗಳಿಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳು ಇದ್ದವು ಎಂದು ತಿಳಿದುಬಂದಿದೆ.

ಅಮೆರಿಕದ ಮಿಸೌರಿ ನೆಲೆಯಿಂದ ಇರಾನ್‌ನತ್ತ ರವಾನೆಯಾಗಿ, ಮತ್ತೆ ಮರಳಬೇಕಿದ್ದ 14 ಬಾಂಬರ್‌ಗಳು ನಿರಂತರ 37 ತಾಸುಗಳ ಕಾಲ ಹಾರಾಟ ನಡೆಸಬೇಕಿದ್ದ ಕಾರಣ, ಆ ಅವಧಿಯಲ್ಲಿ ಪೈಲಟ್‌ಗಳ ಅನುಕೂಲಕ್ಕಾಗಿ ವಿಮಾನಗಳೊಳಗೇ ಆಹಾರವನ್ನು ಬಿಸಿ ಮಾಡಿಕೊಳ್ಳಲು ಮೈಕ್ರೋವೇವ್‌, ಅದನ್ನು ಶೇಖರಿಸಿಡಲು ರೆಫ್ರಿಜರೇಟರ್, ವಿಶ್ರಾಂತಿ ಕೊಠಡಿಗಳು, ಶೌಚಾಲಯ ಇತ್ಯಾದಿ ಸೌಕರ್ಯಗಳನ್ನು ಒದಗಿಸಲಾಗಿತ್ತು. ಅಂತೆಯೇ, ಹಾರಾಟದ ವೇಳೆಯೇ ಹಲವು ಬಾರಿ ಇವುಗಳಿಗೆ ಇಂಧನವನ್ನೂ ಮಾರ್ಗಮಧ್ಯವೇ ತುಂಬಿಸಲಾಗಿತ್ತು. 

ಬಿ-2ಗಳ ಸುದೀರ್ಘ ಕಾರ್ಯಾಚರಣೆ:

ಇರಾನ್‌ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ಕಾರ್ಯಾಚರಣೆಯನ್ನು, ಇದುವರೆಗಿನ ಬಿ-2 ಬಾಂಬರ್‌ಗಳ ಸುದೀರ್ಘಕಾಪರೇಷನ್‌ ಎನ್ನಲಾಗಿದೆ. ಈ ಮೊದಲು, 2001ರ 9/11 ಉಗ್ರದಾಳಿಯ ಬಳಿಕ ಇವುಗಳನ್ನು ಆಫ್ಘಾನಿಸ್ತಾನದ ವಿರುದ್ಧ ಬಳಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಲ್ಪಿಜಿ ದರ ಭಾರತದಲ್ಲೇ ಕಡಿಮೆ : ಕೇಂದ್ರ ಸರ್ಕಾರ
3,000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ!