ಇಂದು ರಾಜ್ಯದಲ್ಲಿ ನಿಗದಿಯಂತೆ ನಡೆಯಲಿದೆ ಕಾಮೆಡ್‌ಕೆ ಪರೀಕ್ಷೆ

Sujatha NRPublished : May 10, 2025 5:49 AM

ಕರ್ನಾಟಕ ಸೇರಿ 18 ರಾಜ್ಯಗಳ ವಿವಿಧ ನಗರಗಳಲ್ಲಿ ಶನಿವಾರ ನಿಗದಿಯಂತೆ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಪರೀಕ್ಷೆ ನಡೆಯಲಿದೆ.

  ಬೆಂಗಳೂರು :  ಕರ್ನಾಟಕ ಸೇರಿ 18 ರಾಜ್ಯಗಳ ವಿವಿಧ ನಗರಗಳಲ್ಲಿ ಶನಿವಾರ ನಿಗದಿಯಂತೆ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಪರೀಕ್ಷೆ ನಡೆಯಲಿದೆ. ಆದರೆ, ಆಪರೇಷನ್‌ ಸಿಂದೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗುಜರಾತ್‌ ಸೇರಿ ನಾಲ್ಕು ರಾಜ್ಯಗಳ ವಿವಿಧ ನಗರಗಳಲ್ಲಿ ಪರೀಕ್ಷೆ ಮುಂದೂಡಲಾಗಿದೆ.

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್‌-ಕೆ ಯುಜಿಇಟಿ ಮತ್ತು ಯೂನಿಗೇಜ್‌ ಸಂಯೋಜಿತ ಪರೀಕ್ಷೆಗಳು ಮೇ 10ರ ಶನಿವಾರ ದೇಶಾದ್ಯಂತ 28 ರಾಜ್ಯಗಳ 179 ನಗರಗಳ 248 ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ ಒಟ್ಟು 1.31, 937 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ ಎಂದು ಕಾಮೆಡ್‌-ಕೆ ತಿಳಿಸಿತ್ತು.

ಆದರೆ, ಆಪರೇಷನ್‌ ಸಿಂದೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗುಜರಾತ್‌ನ ಜಮ್ನಾನಗರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು, ಪಂಜಾಬ್‌ನ ಲುದಿಯಾನಾ, ಜಲಂದರ್‌, ಮೊಹಾಲಿ, ಪಟಿಯಾಲ, ಅಮೃತಸರ್‌, ಬಥಿಂದಾ ಮತ್ತು ರಾಜಸ್ಥಾನದ ಜೋಧಪುರ, ಬಿಕನೇರ್‌, ಶ್ರೀಗಂಗಾ ನಗರದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿಕೆ. ಉಳಿದಂತೆ ಕರ್ನಾಟಕ ಸೇರಿದಂತೆ ಇತರೆ 18 ರಾಜ್ಯಗಳಲ್ಲಿ ನಿಗದಿತ ಕೇಂದ್ರಗಳಲ್ಲಿ ಶನಿವಾರ ಪರೀಕ್ಷೆ ನಡೆಯಲಿದೆ ಎಂದು ಕಾಮೆಡ್‌-ಕೆ ತಿಳಿಸಿದೆ.