ಕರ್ನಾಟಕ ಕಾಂಗ್ರೆಸ್‌ ಗೆಲುವಿನ ತಂತ್ರ ಹೆಣೆದ ಸುನಿಲ್‌ಗೆ ತೆಲಂಗಾಣದ ಗಾಳ

KannadaprabhaNewsNetwork |  
Published : May 29, 2026, 03:00 AM IST
Sunil

ಸಾರಾಂಶ

2023ರ ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಜ್ಞ ಸುನೀಲ್ ಕನುಗೋಲು ಅವರನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ತಮ್ಮ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ನೇಮಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹೈದರಾಬಾದ್‌: 2023ರ ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಜ್ಞ ಸುನೀಲ್ ಕನುಗೋಲು ಅವರನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ತಮ್ಮ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ನೇಮಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಗುಂಪುಗಾರಿಕೆ ಮತ್ತು ಒಗ್ಗಟ್ಟಿನ ಕೊರತೆ ಎದುರಾಗಿದೆ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಅರ್ಧ ಅವಧಿ ತುಂಬುತ್ತಿರುವಾಗ ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಒಗ್ಗಟ್ಟಿನ ಕೊರತೆ ಎದುರಾಗಿದೆ. ಇದನ್ನು ಸರಿಪಡಿಸಲು ರೇವಂತ್, ಕನುಗೋಲು ಅವರನ್ನು ಸಾರ್ವಜನಿಕ ವ್ಯವಹಾರಗಳ ಸಲಹೆಗಾರ ಅಥವಾ ಇನ್ನೊಂದು ಪ್ರಮುಖ ಹುದ್ದೆಗೆ ನೇಮಿಸುವ ಯೋಜನೆಯಲ್ಲಿದ್ದಾರೆ. ನೇಮಕಾತಿ ಜೂನ್ ಮೊದಲ ವಾರ ಅಥವಾ ಕರ್ನಾಟಕ ರಾಜ್ಯಸಭಾ ಚುನಾವಣೆ ನಂತರ ಆಗುವ ಸಾಧ್ಯತೆ ಇದೆ.

ತಂತ್ರಗಾರಿಕೆಯಲ್ಲಿ ಭಾರೀ ಜನಪ್ರಿಯರಾಗಿರುವ ಕನುಗೋಲು

ರಾಜಕೀಯ ತಂತ್ರಗಾರಿಕೆಯಲ್ಲಿ ಭಾರೀ ಜನಪ್ರಿಯರಾಗಿರುವ ಕನುಗೋಲು ಕರ್ನಾಟಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

₹34 ಕೋಟಿ ಬ್ಲಡ್‌ ಮನಿ ಕೊಟ್ಟು ಬಚಾವ್‌ ಆದ ಕೇರಳಿಗ ಮನೆಗೆ
ತ್ವಿಶಾ ಶರ್ಮಾ ಆತ್ಮ*ತ್ಯೆ ಕೇಸ್‌ : ಸಿಬಿಐನಿಂದ ಅತ್ತೆ ನ್ಯಾ.ಗಿರಿಬಾಲಾ ಬಂಧನ