ಸಿಂಧೂರ ಅಳಿಸಿದ ಪಾಕಿಗಳಿಗೆ ಅದೇ ಹೆಸರಿನ ಕಾರ್ಯಾಚರಣೆ ಮೂಲಕ ಉತ್ತರ

ಸಾರಾಂಶ

ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಉಗ್ರ ನೆಲೆಗಳನ್ನು ಪುಡಿಗಟ್ಟಿದ ಕ್ರಮಕ್ಕೆ, ಪಹಲ್ಗಾಂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ‘

ನವದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಉಗ್ರ ನೆಲೆಗಳನ್ನು ಪುಡಿಗಟ್ಟಿದ ಕ್ರಮಕ್ಕೆ, ಪಹಲ್ಗಾಂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ‘ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ ಪಾಕಿಗಳಿಗೆ ಅದೇ ಹೆಸರಿನ ಕಾರ್ಯಾಚರಣೆ ಮೂಲಕ ಉತ್ತರ ನೀಡಿದ್ದಕ್ಕೆ ಭಾರತೀಯ ಸೇನೆ ಮತ್ತು ನರೇಂದ್ರ ಮೋದಿಯವರಿಗೆ ಧನ್ಯವಾದಗಳು’ ಎಂದು ಸಂತ್ರಸ್ತರು ಹೇಳಿದ್ದಾರೆ.

ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಪುಣೆಯ ಸಂತೋಷ್ ಜಗದಾಲೆ ಅವರ ಪತ್ನಿ ಪ್ರಗತಿ ಮಾತನಾಡಿದ್ದು, ‘ಉಗ್ರರು ನಮ್ಮ ಸಿಂಧೂರವನ್ನು ಅಳಿಸಿಹಾಕಿದರು. ಆದರೆ ಆಪರೇಷನ್ ಸಿಂಧೂರ್ ಮೂಲಕ ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನದ ಉಗ್ರರ ನೆಲೆಗಳನ್ನು ನಾಶಪಡಿಸಿವೆ. ನಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಕೃತಜ್ಞಳಾಗಿದ್ದೇನೆ’ ಎಂದರು.

ಬೆಂಗಳೂರಿನ ಮೃತ ಭರತ್ ಭೂಷಣ್ ಅವರ ತಂದೆ ಚನ್ನವೀರಪ್ಪ ಮಾತನಾಡಿ, ‘ಆಪರೇಷನ್ ಸಿಂಧೂರ್ ಎಂಬ ಹೆಸರು ಸೂಕ್ತವಾಗಿದೆ. ಉಗ್ರರು ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿಹಾಕಿದರು. ಅವರಿಗೆ ಸರ್ಕಾರ ಸರಿಯಾದ ಉತ್ತರ ನೀಡಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ದಾಳಿ ಸಂತ್ರಸ್ತ ವಿನಯ್‌ ನರ್ವಾಲ್‌ ಕುಟುಂಬಸ್ಥರು ಮಾತನಾಡಿ, ‘ಇನ್ನು ಪಾಕ್‌ ಉಗ್ರರು ಭಾರತದ ಮೇಲೆ ದಾಳಿ ಮಾಡಬೇಕು ಎಂದರೆ 100 ಸಲ ಯೋಚಿಸುತ್ತಾರೆ’ ಎಂದರು.

 

Share this article