ದೇಗುಲ ಮಹತ್ವ ಅರಿಯಲು ಹಿಂದಿನವರು ವಿಫಲ: ಪ್ರಧಾನಿ ಮೋದಿ

KannadaprabhaNewsNetwork |  
Published : Feb 05, 2024, 01:45 AM ISTUpdated : Feb 05, 2024, 11:57 AM IST
Modi

ಸಾರಾಂಶ

ಸ್ವಾತಂತ್ರ್ಯಾ ನಂತರ ಅಧಿಕಾರದಲ್ಲಿರುವವರು ಭಾರತದ ಧಾರ್ಮಿಕ ಸ್ಥಳಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟೀಕಿಸಿದ್ದಾರೆ.

ಪಿಟಿಐ ಗುವಾಹಟಿ

ಸ್ವಾತಂತ್ರ್ಯಾ ನಂತರ ಅಧಿಕಾರದಲ್ಲಿರುವವರು ಭಾರತದ ಧಾರ್ಮಿಕ ಸ್ಥಳಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು ಮತ್ತು ರಾಜಕೀಯ ಕಾರಣಗಳಿಗಾಗಿ ತಮ್ಮದೇ ಸಂಸ್ಕೃತಿಯ ಬಗ್ಗೆ ನಾಚಿಕೆಪಡುವ ಪ್ರವೃತ್ತಿಯನ್ನು ಅವರು ಬೆಳೆಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟೀಕಿಸಿದ್ದಾರೆ.

ಈ ಮೂಲಕ ರಾಮಮಂದಿರ ವಿವಾದ ಬಗೆಹರಿಸಲು ವಿಫಲವಾದ ಆರೋಪ ಹೊತ್ತಿರುವ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಅಸ್ಸಾಂನಲ್ಲಿ 11,600 ಕೋಟಿ ರು.ಗಳ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಿದ ನಂತರ ಗುವಾಹಟಿಯಲ್ಲಿ ಬೃಹತ್‌ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಯಾವುದೇ ದೇಶವು ತನ್ನ ಗತವನ್ನು ಅಳಿಸಿಹಾಕುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ.

ನಮ್ಮ ಸರ್ಕಾರ ಬಂದ ನಂತರ ಪಾರಂಪರಿಕ ತಾಣಗಳ ಪುನರುತ್ಥಾನ ನಡೆಯಿತು. ಕಳೆದ 1 ವರ್ಷದಲ್ಲಿ ಕಾಶಿಗೆ 8.5 ಕೋಟಿ ಜನರು ಭೇಟಿ ನೀಡಿದ್ದಾರೆ. 5 ಕೋಟಿ ಜನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದಿದ್ದಾರೆ. 

19 ಲಕ್ಷ ಜನರು ಕೇದಾರಧಾಮಕ್ಕೆ ಹಾಗೂ ಕೇವಲ 12 ದಿನದಲ್ಲಿ 24 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪಾರಂಪರಿಕ ಕ್ಷೇತ್ರಗಳ ಪುನರುತ್ಥಾನದಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಿದೆ’ ಎಂದು ಹೇಳಿಕೊಂಡರು.

ಇದೇ ವೇಳೆ, ‘ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ನಾವು ಅನಾವರಣಗೊಳಿಸಿದ ಯೋಜನೆಗಳು ಈಶಾನ್ಯ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಇತರ ಭಾಗಗಳಲ್ಲಿ ಸಂಪರ್ಕವನ್ನು ಬಲಪಡಿಸುತ್ತವೆ. 

ಕಳೆದ 10 ವರ್ಷಗಳಲ್ಲಿ ಅಸ್ಸಾಂನಲ್ಲಿ ಶಾಂತಿ ನೆಲೆಸಿದೆ ಮತ್ತು 7,000 ಕ್ಕೂ ಹೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಮರಳಿದ್ದಾರೆ. ಕಳೆದ ದಶಕದಲ್ಲಿ ಈ ಪ್ರದೇಶಕ್ಕೆ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದು ಅವರು ಹೇಳಿದರು.

ಧಾರ್ಮಿಕ ಕ್ಷೇತ್ರಗಳಿಂದ ಸಾಕಷ್ಟು ಉದ್ಯೋಗ ಸೃಷ್ಟಿ: ಕಳೆದ 1 ವರ್ಷದಲ್ಲಿ ಕಾಶಿಗೆ 8.5 ಕೋಟಿ ಜನರು ಭೇಟಿ ನೀಡಿದ್ದಾರೆ. 5 ಕೋಟಿ ಜನ ಉಜ್ಜಯಿನಿ ಮಹಾಕಾಲನ ದರ್ಶನ ಪಡೆದಿದ್ದಾರೆ. 

19 ಲಕ್ಷ ಜನರು ಕೇದಾರಧಾಮಕ್ಕೆ ಹಾಗೂ ಕೇವಲ 12 ದಿನದಲ್ಲಿ 24 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಪಾರಂಪರಿಕ ಕ್ಷೇತ್ರಗಳ ಪುನರುತ್ಥಾನದಿಂದ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ