ಬ್ರಿಡ್ಜ್‌ನಿಂದ ನೆಗೆದ ಬಿಎಂಡಬ್ಲ್ಯು : 3 ಜನ ದಾರುಣ ಸಾವು

KannadaprabhaNewsNetwork |  
Published : Sep 21, 2026, 01:45 AM IST
car

ಸಾರಾಂಶ

ಮುಂಬೈನ ಕರಾವಳಿ ಪ್ರದೇಶದಲ್ಲಿ ಭಾನುವಾರ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಪಲ್ಟಿಯಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾರೆ.

ಮುಂಬೈ: ಮುಂಬೈನ ಕರಾವಳಿ ಪ್ರದೇಶದಲ್ಲಿ ಭಾನುವಾರ ನಸುಕಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಸೇತುವೆಗೆ ಡಿಕ್ಕಿ ಹೊಡೆದು ಕೆಳಕ್ಕೆ ಪಲ್ಟಿಯಾಗಿದೆ.

3 ಜನ ದಾರುಣ ಸಾವು

ಪರಿಣಾಮ ಮೂವರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾರೆ.

ದಕ್ಷಿಣ ಮುಂಬೈನ ಮರೀನಾ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ನಸುಕಿನ ಜಾವ 5.20ಕ್ಕೆ ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ನಿರ್ಮಾಣ ಹಂತದ ಪಾರ್ಕಿಂಗ್‌ ಸ್ಥಳಕ್ಕೆ ಹಲವಾರು ಅಡಿಗಳಷ್ಟು ಉರುಳಿ ಬಿದ್ದಿದೆ.

ಅಪಘಾತದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆ

ಕೂಡಲೇ ಅಲ್ಲಿದ್ದ ಸ್ಥಳೀಯರು ನಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿದ್ದ ನಾಲ್ವರನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರಾದರೂ 3 ಯುವಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಪಘಾತದ ದೃಶ್ಯಗಳು ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್‌ ಎನಿಸುವಂತಿದೆ, ಇನ್ನು ಕಾರು ಬಿದ್ದ ರಭಸಕ್ಕೆ ಸೇತುವೆಯಲ್ಲಿ ನೇತು ಹಾಕಲಾಗಿದ್ದ ಸೂಚನಾ ಫಲಕಗಳೂ ಹರಿದುಹೋಗಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚು.ಆಯುಕ್ತ, ಜೈಶಂಕರ್‌,ಸೂದ್‌ಗೆ SIR ನೋಟಿಸ್‌- ದಾಖಲೇಲಿ ಗೊಂದಲ ಕಾರಣ ನೋಟಿಸ್‌
50 ಕೇಸಲ್ಲಿ ಬೇಕಿದ್ದ ಕುಖ್ಯಾತ ನಕ್ಸಲ್‌ ಕಾಶಿಯಲ್ಲಿ ಹತ್ಯೆ