ಜಡ್ಜ್ ಆಗಲು 3 ವರ್ಷ ವಕೀಲಿಕೆ ಕಡ್ಡಾಯ ಪೂರ್ವಾನ್ವಯವಿಲ್ಲ : ಸುಪ್ರೀಂ

KannadaprabhaNewsNetwork |  
Published : Jul 29, 2025, 01:01 AM ISTUpdated : Jul 29, 2025, 01:32 AM IST
Supreme Court of India (File Photo/ANI)

ಸಾರಾಂಶ

‘ಪ್ರವೇಶ ಮಟ್ಟದ ನ್ಯಾಯಾಂಗ ಸೇವೆಗಳ ಪರೀಕ್ಷೆ (ಜಡ್ಜ್‌ ಆಗಲು) ಬರೆಯುವವರು ಕಡ್ಡಾಯವಾಗಿ 3 ವರ್ಷ ವಕೀಲಿಕೆ ಮಾಡಿರಬೇಕು’ ಎಂಬ ನಿಯಮವು, ಆದೇಶ ಹೊರಡಿಸಲಾದ ಮೇ 20ರ ಬಳಿಕ ನೇಮಕವಾಗುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ನವದೆಹಲಿ: ‘ಪ್ರವೇಶ ಮಟ್ಟದ ನ್ಯಾಯಾಂಗ ಸೇವೆಗಳ ಪರೀಕ್ಷೆ (ಜಡ್ಜ್‌ ಆಗಲು) ಬರೆಯುವವರು ಕಡ್ಡಾಯವಾಗಿ 3 ವರ್ಷ ವಕೀಲಿಕೆ ಮಾಡಿರಬೇಕು’ ಎಂಬ ನಿಯಮವು, ಆದೇಶ ಹೊರಡಿಸಲಾದ ಮೇ 20ರ ಬಳಿಕ ನೇಮಕವಾಗುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. 

ಮೇ 14ರಂದು ನಡೆದ ನೇಮಕಾತಿ ವೇಳೆ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸೇವಾ ಆಯೋಗವು 3 ವರ್ಷಗಳ ಅಭ್ಯಾಸವನ್ನು ಕಡ್ಡಾಯಗೊಳಿಸಿರಲಿಲ್ಲ. ಇದನ್ನು ಪ್ರಶ್ನಿಸಿ ನವೀದ್‌ ಬುಖ್ತಿಯಾ ಸೇರಿ 5 ವಕೀಲರು ಅರ್ಜಿ ಸಲ್ಲಿಸಿದ್ದರು.  

ಇದನ್ನು ತಿರಸ್ಕರಿಸಿದ ನ್ಯಾ। ಕೆ. ವಿನೋದ್‌ ಚಂದ್ರನ್ಮ ಎನ್‌.ವಿ. ಅಂಜಾರಿಯಾ ಅವರ ಪೀಠ, ‘ಅವರು ತೀರ್ಪನ್ನು ಉಲ್ಲಂಘಿಸಿದರು ಎಂದು ಹೇಳುತ್ತಿದ್ದೀರಾ? ಇದರರ್ಥ, ಮೇ 20ರಂದು ಸಿಜೆಐ ಏನು ತೀರ್ಪು ಕೊಡುತ್ತಾರೆಂದು ಇಡೀ ಕೋರ್ಟ್‌ಗೆ ತಿಳಿದಿತ್ತು ಎಂದು ನೀವು ಹೇಳುತ್ತಿದ್ದೀರಾ?’ ಎಂದು ಖಾರವಾಗಿ ಪ್ರಶ್ನಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ
ಆನೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ರೈಲು, 7 ಗಜ ಬಲಿ