ರೈಲ್ವೆ ಟಿಕೆಟ್‌ ಬುಕಿಂಗ್‌ ಅವಧಿ 60 ದಿನಕ್ಕೆ ಇಳಿಕೆ : 120 ದಿನ ಇದ್ದ ಸಮಯದಲ್ಲಿ ಕಡಿತ

Published : Oct 18, 2024, 08:50 AM IST
Chhath Puja Special Train

ಸಾರಾಂಶ

120 ದಿನಗಳ ಅವಧಿಯವರೆಗೂ ಟಿಕೆಟ್‌ ಮುಂಗಡವಾಗಿ ಟಿಕೆಟ್ ಕಾದಿರಿಸಲು ಇದ್ದ ಅವಕಾಶದಿಂದಾಗಿ, ಸಾಕಷ್ಟು ಜನ ಟಿಕೆಟ್‌ ಖರೀದಿಸಿ ಬಳಿಕ ಅದನ್ನು ರದ್ದು ಮಾಡುತ್ತಿದ್ದರು. ಇಲ್ಲವೇ ಟಿಕೆಟ್‌ ರದ್ದುಪಡಿಸದೇ ಪ್ರಯಾಣದಿಂದ ಹಿಂದೆ ಸರಿಯುತ್ತಿದ್ದರು.

ನವದೆಹಲಿ : ರೈಲ್ವೆ ಪ್ರಯಾಣಕ್ಕೆ ಮುಂಗಡವಾಗಿ ಟಿಕೆಟ್‌ ಕಾದಿರಿಸಲು ಇದ್ದ 120 ದಿನಗಳ ಅವಧಿಯನ್ನು 60 ದಿನಗಳಿಗೆ ಇಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಮುಂದಿನ ನ.1ರಿಂದಲೇ ಹೊಸ ನೀತಿ ಜಾರಿಗೆ ಬರಲಿದೆ. ಪ್ರಯಾಣದ ದಿನ ಹೊರತುಪಡಿಸಿ 60 ದಿನಗಳ ಅವಧಿಗೆ ಇನ್ನು ಮುಂಗಡ ಟಿಕೆಟ್‌ ಬುಕ್‌ ಮಾಡಬಹುದಾಗಿದೆ.

120 ದಿನಗಳ ಅವಧಿಯವರೆಗೂ ಟಿಕೆಟ್‌ ಮುಂಗಡವಾಗಿ ಟಿಕೆಟ್ ಕಾದಿರಿಸಲು ಇದ್ದ ಅವಕಾಶದಿಂದಾಗಿ, ಸಾಕಷ್ಟು ಜನ ಟಿಕೆಟ್‌ ಖರೀದಿಸಿ ಬಳಿಕ ಅದನ್ನು ರದ್ದು ಮಾಡುತ್ತಿದ್ದರು. ಇಲ್ಲವೇ ಟಿಕೆಟ್‌ ರದ್ದುಪಡಿಸದೇ ಪ್ರಯಾಣದಿಂದ ಹಿಂದೆ ಸರಿಯುತ್ತಿದ್ದರು. ಇಂಥ ಪ್ರಕರಣಗಳಲ್ಲಿ ಅವರ ಹೆಸರಲ್ಲಿ ಬೇರೆಯವರು ಪ್ರಯಾಣ ಮಾಡುವ ಇಲ್ಲವೇ ರೈಲ್ವೆ ಸಿಬ್ಬಂದಿ ಅಕ್ರಮವಾಗಿ ಹಣ ಸ್ವೀಕಾರ ಮಾಡುವುದು ಮೊದಲಾದ ಘಟನೆಗಳು ನಡೆಯುತ್ತಿತ್ತು.

ಹೀಗೆ ಮುಂಗಡವಾಗಿ ಟಿಕೆಟ್‌ ಕಾದಿರಿಸಿ ಕೊನೆಗೆ ಅದನ್ನು ರದ್ದು ಮಾಡುವವರ ಪ್ರಮಾಣ ಶೇ.21ರಷ್ಟು ಇದ್ದರೆ, ಟಿಕೆಟ್‌ ಖರೀದಿಸಿಯೂ ಪ್ರಯಾಣಕ್ಕೆ ಹಾಜರಾಗದೇ ಇರುವವರ ಪ್ರಮಾಣ ಶೇ.4-5ರಷ್ಟಿದೆ. ಹೀಗಾಗಿ ಅಗತ್ಯವಿದ್ದವರು ಟಿಕೆಟ್‌ ಲಭ್ಯವಿದ್ದರೂ ಟಿಕೆಟ್ ಖರೀದಿಯಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಹೇಳಿದೆ.

ಆದರೆ ಈಗಾಗಲೇ ಮುಂದಿನ 120 ದಿನಗಳ ಅವಧಿಗೆ ಟಿಕೆಟ್‌ ಖರೀದಿ ಮಾಡಿದವರಿಗೆ ಯಾವುದೇ ತೊಂದರೆ ಇರುವುದಿಲ್ಲ. ಜೊತೆಗೆ ಮುಂದಿನ 120 ದಿನಗಳ ಅವಧಿಗೆ ಟಿಕೆಟ್‌ ಖರೀದಿ ಮಾಡಿದವರಿಗೆ ರದ್ದತಿಗೂ ಅವಕಾಶ ಇರಲಿದೆ. ಜೊತೆಗೆ ವಿದೇಶಿ ಪ್ರಯಾಣಿಕರು 365 ದಿನಗಳ ಮೊದಲೇ ಟಿಕೆಟ್‌ ಖರೀದಿಗೆ ಹೊಂದಿದ್ದ ಅವಕಾಶವೂ ಹಿಂದಿನಂತೆಯೂ ಮುಂದುವರೆಯಲಿದೆ. ಅಂತೆಯೇ, ಪ್ರಸ್ತುತ ಕಾಯ್ದಿರಿಸುವಿಕೆಗೆ ಕಡಿಮೆ ಸಮಯ ಮಿತಿ ಹೊಂದಿರುವ ಹಗಲು ಹೊತ್ತು ಸಂಚರಿಸುವ ಎಕ್ಸ್‌ಪ್ರೆಸ್‌ ರೈಲುಗಳ ನಿಯಮಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!