ಸಾಲು ಸಾಲು ರಜೆ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 18 ಗಂಟೆ

KannadaprabhaNewsNetwork | Updated : Jan 28 2024, 07:18 AM IST

ಸಾರಾಂಶ

ಶುಕ್ರವಾರ ಒಂದೇ ದಿನ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ 71,000 ಜನರಿಂದ ತಿಮ್ಮಪ್ಪನ ದರ್ಶನವಾಗಿದೆ. ಜೊತೆಗೆ 3.37 ಕೋಟಿ ರು. ಹುಂಡಿ ಕಾಣಿಕೆ ಸಂಗ್ರಹವಾಗಿದೆ.

ತಿರುಪತಿ: ಗಣರಾಜ್ಯೋತ್ಸವ ಹಾಗೂ ವಾರಾಂತ್ಯದ ಸಾಲು ಸಾಲು ರಜೆ ಕಾರಣ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಭಕ್ತಸಾಗರವೇ ಹರಿದುಬದಿದೆ. ಹೀಗಾಗಿ ಸಾಮಾನ್ಯ ದರ್ಶನಕ್ಕೆ 18 ತಾಸು ಕಾಯಬೇಕಾದ ಸ್ಥಿತಿ ಸೃಷ್ಟಿಯಾಗಿದೆ.

ಶುಕ್ರವಾರ 71,664 ಭಕ್ತರು ವೆಂಕಟೇಶ್ವರನ ದರ್ಶನ ಪಡೆದುಕೊಂಡರು. ಜೊತೆಗೆ 33,330 ಕೇಶ ಮುಂಡನ ಮಾಡಿಸಿಕೊಂಡರು.

ರಜೆ ಇರುವ ಕಾರಣ ಭಕ್ತರು ಭಾರಿ ಸಂಖ್ಯೆಯಲ್ಲಿ ತಿರಮಲಕ್ಕೆ ಬಂದ ಕಾರಣ ಸಾಮಾನ್ಯ ಸಾಲಿನಲ್ಲಿ ಭಗವಂತನ ದರ್ಶನ ಪಡೆವವರು 18 ಗಂಟೆ ಕಾಯಬೇಕಾಯಿತು.

ಇನ್ನು ಟಿಕೆಟ್‌ ಪಡೆದವರು 5 ತಾಸು ಕಾದು ದರ್ಶನ ಪಡೆದರು. ಶುಕ್ರವಾರ ಒಂದೇ ದಿನ 3.37 ಹುಂಡಿ ಕಾಣಿಕೆ ಸಂಗ್ರಹವಾಗಿದೆ ಎಂದು ಟಿಟಿಡಿ ತಿಳಿಸಿದೆ.

Share this article