ಬಾಹ್ಯಾಕಾಶ ಕೇಂದ್ರದಲ್ಲೂ ವೈರಸ್‌: ಸುನಿತಾ ಸೇರಿ ಹಲವರಿಗೆ ಆತಂಕ!

KannadaprabhaNewsNetwork |  
Published : Jun 12, 2024, 12:37 AM ISTUpdated : Jun 12, 2024, 08:34 AM IST
ಸುನಿತಾ ವಿಲಿಯಮ್ಸನ್‌ | Kannada Prabha

ಸಾರಾಂಶ

ಭೂಪ್ರದೇಶದಲ್ಲಿ ಕಂಡುಬರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೂ ಬ್ಯಾಕ್ಟೀರಿಯಾ ವೈರಸ್‌ಗಳು ಬೆಳವಣಿಗೆಯಾಗಿದ್ದು, ಭಾರತೀಯ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರೂ ಸೇರಿದಂತೆ ಅಧ್ಯಯನ ನಡೆಸುತ್ತಿರುವ ಇತರ ನಾಸಾ ಗಗನಯಾತ್ರಿಗಳ ಆರೋಗ್ಯದ ಕುರಿತು ತೀವ್ರ ಆತಂಕ ಎದುರಾಗಿದೆ.

ನವದೆಹಲಿ: ಭೂಪ್ರದೇಶದಲ್ಲಿ ಕಂಡುಬರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೂ ಬ್ಯಾಕ್ಟೀರಿಯಾ ವೈರಸ್‌ಗಳು ಬೆಳವಣಿಗೆಯಾಗಿದ್ದು, ಭಾರತೀಯ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರೂ ಸೇರಿದಂತೆ ಅಧ್ಯಯನ ನಡೆಸುತ್ತಿರುವ ಇತರ ನಾಸಾ ಗಗನಯಾತ್ರಿಗಳ ಆರೋಗ್ಯದ ಕುರಿತು ತೀವ್ರ ಆತಂಕ ಎದುರಾಗಿದೆ.

ಅಮೆರಿಕನ್‌ ಬಾಹ್ಯಾಕಾಾಸಾ ಈ ಕುರಿತು ಮಾಹಿತಿ ನೀಡಿದ್ದು, ವಿವಿಧ ರೀತಿಯ ಔಷಧಕ್ಕೂ ಬಗ್ಗದ ಈ ವೈರಸ್‌ಗೆ ಎಂಟೆರೊಬ್ಯಾಕ್ಟರ್‌ ಬುಗಾಂಡೆನ್ಸಿಸ್‌ ಎಂದು ನಾಮಕರಣ ಮಾಡಲಾಗಿದೆ. ಅಧ್ಯಯನದಲ್ಲಿ ಈ ಬ್ಯಾಕ್ಟೀರಿಯಾದಿಂದ ಉಸಿರಾಟ ತೊಂದರೆಗಳೂ ಕಾಣಿಸಿಕೊಳ್ಳಬಹುದು ಎಂಬುದಾಗಿ ತಿಳಿದುಬಂದಿದ್ದು, ಭೂಮಿಯಿಂದಲೇ ತೆರಳುವಾಗ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ತೆರಳಿ ಅಲ್ಲಿ ಕ್ರಮೇಣ ಬೆಳವಣಿಗೆಯಾಗಿರಬಹುದು ಎಂದು ನಾಸಾ ತಿಳಿಸಿದೆ. ಜೊತೆಗೆ ಇದು ವಿವಿಧ ರೀತಿಯ ಔಷಧಗಳಿಗೂ ನಾಶವಾಗದ ಕಾರಣ ಇದಕ್ಕೆ ಸೂಪರ್‌ಬಗ್‌ ಎಂದೂ ಕರೆಯಲಾಗುತ್ತದೆ.

ಸದ್ಯಕ್ಕೆ ಬ್ಯಾಕ್ಟೀರಿಯಾವನ್ನು ವಾತಾವರಣದಿಂದ ಪ್ರತ್ಯೇಕ ಮಾಡಲಾಗಿದ್ದು, ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಲಾಗಿದೆ. ಇನ್ನು ಮುಂದೆ ಮತ್ತಷ್ಟು ಅಧ್ಯಯನ ಮಾಡಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧ್ಯಯನ ನಡೆಸಲಾಗುತ್ತಿದೆ.

ಭಾರತೀಯ ಮೂಲದ ವಿಜ್ಞಾನಿ ಅಧ್ಯಯನ: ಬಾಹ್ಯಾಕಾಶ ಕೇಂದ್ರದಲ್ಲಿ ತೊಡಕಾಗಿರುವ ಬ್ಯಾಕ್ಟೀರಿಯಾ ಸಮಸ್ಯೆಯನ್ನು ಪರಿಸರಿಸಲು ಭಾರತೀಯ ಮೂಲದ ನಾಸಾ ವಿಜ್ಞಾನಿ ಕಸ್ತೂರಿ ವೆಂಕಟೇಶ್ವರನ್‌ ನೇತೃತ್ವದ ತಂಡ ಅಧ್ಯಯನದಲ್ಲಿ ನಿರತವಾಗಿದೆ. ಈ ಕಾರ್ಯದಲ್ಲಿ ಐಐಟಿ ಮದ್ರಾಸ್‌ ತಜ್ಞ ಪ್ರಾಧ್ಯಾಪಕರ ತಂಡವೂ ಕೈಜೋಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ