ಉಕ್ರೇನ್‌ ಯುದ್ಧ: ಆ.15ಕ್ಕೆ ಟ್ರಂಪ್‌-ಪುಟಿನ್‌ ಮಾತುಕತೆ

KannadaprabhaNewsNetwork |  
Published : Aug 10, 2025, 01:30 AM ISTUpdated : Aug 10, 2025, 05:12 AM IST
ಟ್ರಂಪ್  | Kannada Prabha

ಸಾರಾಂಶ

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಆ.15ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನಡುವೆ ಅಲಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.

 ವಾಷಿಂಗ್ಟನ್‌: ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಆ.15ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನಡುವೆ ಅಲಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.  ಈ ಮಾತುಕತೆ ವೇಳೆ ಭೂಭಾಗ ಮತ್ತು ಕೈದಿಗಳ ಹಸ್ತಾಂತರ ವಿಚಾರವೂ ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.

 ಟ್ರಂಪ್‌ ಭೇಟಿಗಾಗಿ ಪುಟಿನ್‌ ಅ‍ವರು ದಶಕದ ಬಳಿಕ ಅಮೆರಿಕಕ್ಕೆ ತೆರಳುತ್ತಿದ್ದು, ಉಕ್ರೇನ್‌ ಹೊರಗಿಟ್ಟು ನಡೆಯುತ್ತಿರುವ ಈ ಶಾಂತಿ ಮಾತುಕತೆ ಇದೀಗ ವಿಶ್ವದ ಗಮನಸೆಳೆದಿದೆ. ಅಮೆರಿಕವು ತ್ರಿಪಕ್ಷೀಯ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿತ್ತಾದರೂ ರಷ್ಯಾವು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್‌ಸ್ಕಿ ಹೊರಗಿಟ್ಟರಷ್ಟೇ ಸಭೆಗೆ ಸಿದ್ಧ ಎಂದು ಸಂದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗಿದೆ.

ಟ್ರಂಪ್-ಪುಟಿನ್‌ ಮಾತುಕತೆಗೆ ಭಾರತ ಸ್ವಾಗತ

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ, ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಮುಂದಿನ ವಾರ ಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ನಡುವೆ ನಡೆಯಲಿರುವ ಮಾತುಕತೆಯನ್ನು ಭಾರತ ಸ್ವಾಗತಿಸಿದೆ. 

ಈ ಕುರಿತು ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಆ.15ರಂದು ಅಲಾಸ್ಕಾದಲ್ಲಿ ಅಮೆರಿಕ ಮತ್ತು ರಷ್ಯಾ ಒಕ್ಕೂಟದ ನಡುವೆ ನಡೆಯಲಿರುವ ಮಾತುಕತೆಯನ್ನು ಭಾರತ ಸ್ವಾಗತಿಸುತ್ತದೆ. ಈ ಚರ್ಚೆಯು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಭರವಸೆಯಿದೆ. ಪ್ರಧಾನಿ ಮೋದಿಯವರು ಹಲವಾರು ಬಾರಿ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ಹಾಗಾಗಿ, ಭಾರತವು ಮುಂಬರುವ ಸಭೆಯನ್ನು ಅನುಮೋದಿಸುತ್ತದೆ ಮತ್ತು ಈ ಪ್ರಯತ್ನಗಳಿಗೆ ಬೆಂಬಲವಾಗಿ ನಿಲ್ಲುತ್ತದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ