ಇರಾನ್‌ ಫಿನಿಶ್‌ ಮಾಡ್ತೇವೆ : ಟ್ರಂಪ್‌

KannadaprabhaNewsNetwork |  
Published : Apr 13, 2026, 01:30 AM IST
Donald Trump

ಸಾರಾಂಶ

ಪಾಕಿಸ್ತಾನದ ನಡೆದ ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಇರಾನ್‌ ವಿರುದ್ಧ ಮತ್ತೆ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಅಣ್ವಸ್ತ್ರ ಹೊಂದುವುದರಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಆದ್ದರಿಂದ ಅಳಿದುಳಿರುವ ಇರಾನ್‌ ಅನ್ನು ನಮ್ಮ ಸೇನೆ ನಾಶ ಮಾಡಲಿದೆ’ ಎಂದು ಎಚ್ಚರಿಸಿದ್ದಾರೆ.

 ವಾಷಿಂಗ್ಟನ್‌: ಪಾಕಿಸ್ತಾನದ ನಡೆದ ಇರಾನ್‌-ಅಮೆರಿಕ ಸಂಧಾನ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಇರಾನ್‌ ವಿರುದ್ಧ ಮತ್ತೆ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇರಾನ್‌ ಅಣ್ವಸ್ತ್ರ ಹೊಂದುವುದರಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಆದ್ದರಿಂದ ಅಳಿದುಳಿರುವ ಇರಾನ್‌ ಅನ್ನು ನಮ್ಮ ಸೇನೆ ನಾಶ ಮಾಡಲಿದೆ’ ಎಂದು ಎಚ್ಚರಿಸಿದ್ದಾರೆ.

ಅಲ್ಲದೆ ಇರಾನ್‌ನ ಪಾಲಿಗೆ ಸಂಪತ್ತು ಸೃಷ್ಟಿಯ ಹೊಸ ಮೂಲವಾಗಿ ಹೊರಹೊಮ್ಮಿರುವ ಮತ್ತು ಜಗತ್ತನ್ನು ಬೆದರಿಸಲು ಇರಾನ್‌ ಅಸ್ತ್ರವಾಗಿ ಬಳಸುತ್ತಿರುವ ಹೋರ್ಮಜ್‌ ಜಲಸಂಧಿ ಬಂದ್‌ ಮಾಡಿ ಅಲ್ಲಿ ಇರಾನ್‌ಗೆ ಹಫ್ತಾ ನೀಡಿ ಸಂಚಾರ ನಡೆಸುತ್ತಿರುವ ಎಲ್ಲಾ ದೇಶಗಳ ಹಡಗುಗಳನ್ನು ತಡೆಯುವ ಘೋಷಣೆ ಮಾಡಿದ್ದಾರೆ. ಈ ಮೂಲಕ ವೆನಿಜುವೆಲಾವನ್ನು ಆರ್ಥಿಕವಾಗಿ ಕಟ್ಟಿಹಾಕಿದಂತೆ ಇರಾನ್‌ ಅನ್ನೂ ಆರ್ಥಿಕವಾಗಿ ಕಟ್ಟಿಹಾಕುವ ಸುಳಿವು ನೀಡಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ಇರಾನ್‌, ‘ಶತ್ರುಗಳು ಹೋರ್ಮುಜ್‌ನ ಮಾರಕ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದೆ. ಜತೆಗೆ ಹಮಾಜ್‌, ಹೆಜ್ಬುಲ್ಲಾ, ಹೌತಿಯಂತಹ ಉಗ್ರಸಂಘಟನೆಗಳೊಂದಿಗೆ ಸೇರಿಕೊಂಡು ರಚಿಸಿರುವ ಆಕ್ಸಿಸ್‌ ಆಫ್‌ ರೆಸಿಸ್ಟೆನ್ಸ್‌ ಇನ್ನೂ ಬಲಶಾಲಿಯಾಗಿದೆ ಎಂದೂ ಹೇಳಿದೆ.

ಟ್ರಂಪ್‌ ಹೇಳಿದ್ದೇನು?:

ಈ ಬಗ್ಗೆ ಟ್ರುತ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಮಾತುಕತೆ ವೇಳೆ ಪ್ರಸ್ತಾಪವಾದ ಅನೇಕ ವಿಷಯಗಳಿಗೆ ನಾವು ಒಪ್ಪಿದ್ದೆವು. ಅಮೆರಿಕದ ಪ್ರತಿನಿಧಿಯಾಗಿ ಹೋಗಿದ್ದವರು, ಇರಾನ್‌ ಪ್ರತಿನಿಧಿಗಳ ಜತೆ ಸ್ನೇಹ ಪರವಾಗಿರಲು ಯತ್ನಿಸಿದರು. ಆದರೆ ಅಂತಹ ಅಸ್ಥಿರ, ಅನಿರೀಕ್ಷಿತ ಜನರ ಕೈಗೆ ಅಣ್ವಸ್ತ್ರ ಸಿಗುವುದರ ಮುಂದೆ ಇವುಗಳಿಗೆ ಬೆಲೆ ಇರುವುದಿಲ್ಲ. ಏನೇ ಆಗಲಿ, ಇರಾನ್‌ ಎಂದೂ ಅಣ್ವಸ್ತ್ರ ಹೊಂದಲು ಸಾಧ್ಯವಿಲ್ಲ’ ಎಂದು ಬರೆದಿದ್ದಾರೆ.

ಹೋರ್ಮುಜ್‌ ಬಂದ್‌:

ಹೋರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಮೂಲಕ ಜಗತ್ತಿನಲ್ಲೇ ತಲ್ಲಣ ಸೃಷ್ಟಿಸಿದ್ದ ಇರಾನ್‌ ಕಪಿಮುಷ್ಟಿಯಿಂದ ಅದನ್ನು ಬಿಡಿಸುವುದಾಗಿ ಹೇಳಿರುವ ಟ್ರಂಪ್‌, ‘ಇರಾನ್‌ ಹೋರ್ಮುಜ್‌ಅನ್ನು ಮುಕ್ತ ಮಾಡುವಲ್ಲಿ ಸೋತ ಕಾರಣ ಅನೇಕ ದೇಶಗಳು ಕಷ್ಟಪಡುವಂತಾಯಿತು. ಅದರೆ ಈಗ ಅದರ ಮೇಲೆ ನಮ್ಮ ನೌಕಾಪಡೆ ಹಿಡಿತ ಸಾಧಿಸಲಿದೆ. ಇನ್ನು ಮುಂದೆ ಇರಾನ್‌ಗೆ ಶುಲ್ಕ ಕಟ್ಟುವ ಯಾವುದೇ ಹಡಗಗಿಗೆ ಆ ಮಾರ್ಗದಲ್ಲಿ ಸಾಗಲು ಬಿಡುವುದಿಲ್ಲ. ಈ ನಿರ್ಬಂಧ ಶೀಘ್ರವೇ ಆರಂಭವಾಗಲಿದೆ’ ಎಂದಿದ್ದಾರೆ.‘ಹೋರ್ಮುಜ್‌ ಮೇಲೆ ನಾವು ವಿಧಿಸಲಿರುವ ನಿರ್ಬಂಧದಲ್ಲಿ ಎಲ್ಲಾ ರಾಷ್ಟ್ರಗಳನ್ನು ತೊಡಗಿಸಿಕೊಳ್ಳಲಿದ್ದೇವೆ. ಆ ಮೂಲಕ, ಶುಲ್ಕ ವಸೂಲಿ ಮಾಡಿ ಜಗತ್ತಿನ ಸುಲಿಗೆಯಲ್ಲಿ ತೊಡಗಿದ್ದ ಇರಾನ್‌ ಯೋಜನೆ ಫಲಿಸಲು ಬಿಡುವುದಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ. ಜತೆಗೆ, ಇರಾನ್‌ ಆ ಭಾಗದಲ್ಲಿ ಅಳವಡಿಸಿರುವ ಜಲಸ್ಫೋಟಕಗಳೆಲ್ಲವನ್ನೂ ತೆರವುಗೊಳಿಸುವುದಾಗಿ ಅವರು ತಿಳಿಸಿದರು. ಇದೇ ವೇಳೆ, ನಮ್ಮ ಹಡುಗಗಳ ಮೇಲೆ ದಾಳಿಗೆ ಯತ್ನಿಸುವವರನ್ನು ನರಕಕ್ಕೆ ಕಳಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಅವರ ಈ ನಿರ್ಧಾರದ ಹಿಂದೆ, ಇರಾನ್‌ನ ಆದಾಯದ ಪ್ರಮುಖ ಮೂಲವಾಗಿರುವ ತೈಲ ವ್ಯಾಪಾರಕ್ಕೂ ಕೊಕ್ಕೆ ಹಾಕಿ ಆರ್ಥಿಕವಾಗಿ ದೊಡ್ಡ ಪೆಟ್ಟು ಕೊಡುವ ಉದ್ದೇಶವೂ ಇದೆ. ಈ ಹಿಂದೆ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೋರನ್ನು ಅಪಹರಿಸುವುದಕ್ಕೂ ಮುನ್ನ ಆ ದೇಶವನ್ನೂ ಇದೇ ರೀತಿ ಆರ್ಥಿಕವಾಗಿ ಉಸಿರುಗಟ್ಟಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಹಾ ಐಟಿ ಕಂಪನಿಯಲ್ಲಿ ಕಾರ್ಪೊರೆಟ್‌ ಜಿಹಾದ್‌ ಸದ್ದು!
ಹಾಡು ನಿಲ್ಲಿಸಿದ ಕ್ವೀನ್‌ ಆಫ್‌ ಇಂಡಿಪಾಪ್‌