ಇರಾನ್‌ ಯುದ್ಧ ಮಧ್ಯದಲ್ಲೇ ನಿಲ್ಲಿಸಲು ಟ್ರಂಪ್‌ ನಿರ್ಧಾರ?

KannadaprabhaNewsNetwork |  
Published : Apr 01, 2026, 03:00 AM ISTUpdated : Apr 01, 2026, 04:39 AM IST
America

ಸಾರಾಂಶ

ಹೋರ್ಮುಜ್‌ ಜಲಸಂಧಿಯು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳ್ಳದಿದ್ದರೂ ಇರಾನ್‌ ಮೇಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಆತ್ಮೀಯರ ಮುಂದೆ ತಿಳಿಸಿದ್ದಾರೆ ಎಂದು ‘ವಾಲ್‌ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

 ನವದೆಹಲಿ : ಹೋರ್ಮುಜ್‌ ಜಲಸಂಧಿಯು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳ್ಳದಿದ್ದರೂ ಇರಾನ್‌ ಮೇಲಿನ ಸಂಘರ್ಷಕ್ಕೆ ಅಂತ್ಯ ಹಾಡಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಆತ್ಮೀಯರ ಮುಂದೆ ತಿಳಿಸಿದ್ದಾರೆ ಎಂದು ‘ವಾಲ್‌ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ.

ಹೋರ್ಮುಜ್‌ ಜಲಾಶಯವನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯದಿದ್ದರೆ ಇರಾನ್‌ನ ವಿದ್ಯುತ್‌ ಘಟಕಗಳ ಮೇಲೆ ಭಾರೀ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ ಹೊರತಾಗಿಯೂ ಟ್ರಂಪ್‌ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿದೆ.

ಹೋರ್ಮುಜ್‌ ಜಲಸಂಧಿಯನ್ನು ತೆರೆಯುವ ಸಂಕೀರ್ಣ ಕಾರ್ಯಾಚರಣೆಯನ್ನು ಮುಂದುವರಿಸಿದರೆ ಯುದ್ಧ ಇನ್ನಷ್ಟು ದಿನ ಮುಂದುವರಿಯಬಹುದು. ಸದ್ಯ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ನಾಲ್ಕುರಿಂದ ಆರು ವಾರಗಳ ಯುದ್ಧದ ಯೋಜನೆ ಹಾಕಿಕೊಂಡಿವೆ. ಇದೇ ರೀತಿ ಸಂಘರ್ಷ ಮುಂದುವರಿದರೆ ವಿಶ್ವ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇರಾನ್‌ ನೌಕಾಪಡೆ ಮತ್ತು ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸಿ, ಆ ಬಳಿಕ ರಾಜತಾಂತ್ರಿಕ ಒತ್ತಡದ ಮೂಲಕ ಹೊರ್ಮುಜ್ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸಲು ಪ್ರಯತ್ನಿಸುವ ಉದ್ದೇಶ ಅಮೆರಿಕಕ್ಕಿದೆ.

ಒಂದು ವೇಳೆ ಈ ಪ್ರಯತ್ನ ಫಲ ನೀಡಿದದಿದ್ದರೆ ಹೋರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸುವ ಅಧಿಕಾರ ಯುರೋಪ್‌, ಕೊಲ್ಲಿ ರಾಷ್ಟ್ರಗಳಿಗೆ ವಹಿಸುವ ಉದ್ದೇಶ ಟ್ರಂಪ್‌ ಅವರಿಗಿದೆ ಎಂದು ಹೇಳಲಾಗಿದೆ.

ಆರು ವಾರಗಳ ಯುದ್ಧದ ಗಡುವು ಹಾಕಿಕೊಂಡಿದ್ದ ಯುಎಸ್‌

ಈ ಅವಧಿ ಮೀರಿ ಯುದ್ಧ ಮುಂದುವರಿಸದಿರಲು ತೀರ್ಮಾನ

ಹೋರ್ಮುಜ್‌ ಜಲಸಂಧಿ ಮುಚ್ಚಿದ್ದರೂ ಯುದ್ಧಕ್ಕೆ ಸದ್ಯ ಬ್ರೇಕ್‌?

ಬಳಿಕ ರಾಜತಾಂತ್ರಿಕ ಮಾರ್ಗ ಮೂಲಕ ಇರಾನ್‌ ಮೇಲೆ ಒತ್ತಡ

ಇರಾನ್‌ ಬಗ್ಗದಿದ್ದರೆ ಮಿತ್ರ ರಾಷ್ಟ್ರಗಳಿಗೆ ಜಲಸಂಧಿ ತೆರೆಸುವ ಹೊಣೆ

ಹೌತಿ ಬಳಿಕ ಯುದ್ಧಕ್ಕೆ ಚೆಚೆನ್‌ ಪಡೆ ಪ್ರವೇಶ?

ಟೆಹ್ರಾನ್‌: ಕೊಲ್ಲಿ ಯುದ್ಧಕ್ಕೆ ಇರಾನ್‌ ಬೆಂಬಲಿತ ಉಗ್ರರು ಧುಮುಕಿ ಇಸ್ರೇಲ್‌ ಮೇಲೆ ದಾಳಿ ಶುರು ಮಾಡಿದ ಬೆನ್ನಲ್ಲೇ ಇದೀಗ ರಷ್ಯಾ ಬೆಂಬಲಿತ ಚೆಚೆನ್‌ ಸೇನೆ ಕೂಡಾ ಇರಾನ್‌ ಬೆಂಬಲಕ್ಕೆ ಮುಂದಾಗಿದೆ ಎನ್ನಲಾಗಿದೆ.

ಒಂದು ವೇಳೆ ಇರಾನ್‌ನ ದ್ವೀಪಗಳನ್ನು ವಶಪಡಿಸಿಕೊಳ್ಳಲು ಒಂದು ವೇಳೆ ಅಮೆರಿಕ ಭೂದಾಳಿ ಏನಾದರೂ ನಡೆಸಿದಲ್ಲಿ ಅವರನ್ನು ಎದುರಿಸಲು ನಾವು ಯುದ್ಧ ಕಣಕ್ಕೆ ಇಳಿಯಲು ಸಿದ್ಧ ಎಂಬ ಸಂದೇಶ ಚೆಚೆನ್‌ ಸೇನೆ ಕಡೆಯಿಂದ ರವಾನೆಯಾಗಿದೆ ಎಂದು ಇರಾನ್‌ನ ರಾಷ್ಟ್ರೀಯ ಸುದ್ದಿ ವಾಹಿನಿ ವರದಿ ಮಾಡಿದೆ.ಕಾಲು ಕತ್ತರಿಸ್ತೇವೆ: ಈ ನಡುವೆ ಅಮೆರಿಕದ ದಾಳಿ ಎಚ್ಚರಿಕೆಗೆ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ ವಕ್ತಾರ ಇಬ್ರಾಹಿಂ ಝೋಲ್ಫಾಘರಿ ಪ್ರತಿಕ್ರಿಯಿಸಿದ್ದು, ‘ದೇಶದ ಸಶಸ್ತ್ರ ಪಡೆಗಳು ಯಾವುದೇ ಆಕ್ರಮಣವನ್ನೂ ಸಮರ್ಥವಾಗಿ ಎದುರಿಸಲಿದೆ. ದೇಶವನ್ನು ಆಕ್ರಮಿಸುವ ಯಾವುದೇ ಆಕ್ರಮಣಕಾರರ ಕಾಲುಗಳನ್ನು ಕತ್ತರಿಸುತ್ತೇವೆ’ ಎಂದಿದ್ದಾರೆ,

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

5 ದಶಕಗಳ ಬಳಿಕ ಮತ್ತೆ ಚಂದ್ರನ ಕಡೆಗೆ ಮಾನವ!
ಮಹಿಳೆಯರಿಗೆ ₹3000 ಸೇರಿ ಬಿಜೆಪಿ ಕೆಲ ಗ್ಯಾರಂಟಿ!