ರಸಗೊಬ್ಬರ, ಸಿಎನ್‌ಜಿ, ಪಿಎನ್‌ಜಿಗೂ ದರ ಬಿಸಿ

KannadaprabhaNewsNetwork |  
Published : Apr 01, 2026, 01:45 AM ISTUpdated : Apr 01, 2026, 04:47 AM IST
ONGC

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದಿಂದ ಜಾಗತಿಕವಾಗಿ ತೈಲಾನಿಲ ಬೆಲೆ ಏರಿಕೆಯಾಗಿರುವ ಹೊತ್ತಿನಲ್ಲೂ ಭಾರತದಲ್ಲಿ ಅಂತಹ ಕ್ರಮ ಕೈಗೊಳ್ಳದಿದ್ದರೂ, ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಒಡೆತನದ ತೈಲ ಉತ್ಪಾದಕ ಕಂಪನಿಗಳಿಂದ ಕೈಗಾರಿಕೆಗಳಿಗೆ ಸರಬರಾಜಾಗುವ ತೈಲದ ಬೆಲೆಯನ್ನು ಏರಿಕೆ ಮಾಡಿದೆ.

 ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಜಾಗತಿಕವಾಗಿ ತೈಲಾನಿಲ ಬೆಲೆ ಏರಿಕೆಯಾಗಿರುವ ಹೊತ್ತಿನಲ್ಲೂ ಭಾರತದಲ್ಲಿ ಅಂತಹ ಕ್ರಮ ಕೈಗೊಳ್ಳದಿದ್ದರೂ, ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಒಡೆತನದ ತೈಲ ಉತ್ಪಾದಕ ಕಂಪನಿಗಳಿಂದ ಕೈಗಾರಿಕೆಗಳಿಗೆ ಸರಬರಾಜಾಗುವ ತೈಲದ ಬೆಲೆಯನ್ನು ಏರಿಕೆ ಮಾಡಿದೆ. ಹೊಸ ದರ ಏ.1ರಿಂದಲೇ ಜಾರಿಗೆ ಬರಲಿದೆ. ಒಎನ್‌ಜಿಸಿ ಮತ್ತು ಆಯಿಲ್‌ ಇಂಡಿಯಾದ ಪ್ರತಿ ಎಂಎಂಬಿಟಿಯು(10 ಲಕ್ಷ ಬ್ರಿಟಿಷ್ ಥರ್ಮಲ್ ಊನಿಟ್‌) ಅನಿಲದ ಬೆಲೆಯಲ್ಲಿ 23.48 ರು. ಏರಿಕೆ ಮಾಡಲಾಗಿದೆ. ಇದರಿಂದಾಗಿ 634.05 ರು. ಇದ್ದ ದರವೀಗ 657.53 ರು. ಆಗಿದೆ. ಇದು, ಈವರೆಗೆ ಮಾಡಲಾದ ಅತಿ ಗರಿಷ್ಠ ಏರಿಕೆಯಾಗಿದೆ.

ಈ ಅನಿಲವನ್ನು ರಸಗೊಬ್ಬರ, ಸಿಎನ್‌ಜಿ, ಪಿಎನ್‌ಜಿ ಉತ್ಪಾದನೆಗೆ ಬಳಸುವ ಕಾರಣ, ಅವುಗಳ ಉತ್ಪಾದಕ ಕಂಪನಿಗಳ ಮೇಲಿನ ಹೊರೆ ಹೆಚ್ಚಲಿದೆ.

 ಇರಾನ್‌ನಿಂದಲೂ ಈಗ ಭಾರತ ತೈಲ ಖರೀದಿ, ಶೀಘ್ರ ಆಗಮನ

ನವದೆಹಲಿ: ತೈಲ ಖರೀದಿಗೆ ವಿಧಿಸಿದ್ದ ನಿಯಮಗಳಿಗೆ ಅಮೆರಿಕ 30 ದಿನಗಳ ವಿನಾಯ್ತಿ ನೀಡಿದ ಬೆನ್ನಲ್ಲೇ ಇರಾನಿ ಕಚ್ಚಾ ತೈಲ ಸರಕು ಹೊತ್ತಿರುವ ಪಿಂಗ್ ಶುನ್ ಹಡಗು 2019ರ ಬಳಿಕ ಇದೇ ಮೊದಲ ಗುಜರಾತ್‌ ಕಡೆಗೆ ಪ್ರಯಾಣ ಬೆಳೆಸಿದೆ.

ಈ ಬಗ್ಗೆ ವಿಶ್ಲೇಷಣಾತ್ಮಕ ಸಂಸ್ಥೆ ಕೆಪ್ಲರ್‌ನ ಸಂಶೋಧನಾ ವಿಶ್ಲೇಷಕ ಸುಮಿತ್‌ ರಿಟೋಲಿಯಾ ಮಾತನಾಡಿದ್ದು, ‘ಭಾರತ- ಇರಾನಿನ ತೈಲ ವ್ಯಾಪಾರವು ಮತ್ತೆ ಚೇತರಿಸಿಕೊಂಡಿದೆ. ಪಿಂಗ್ ಶುನ್ ಹಡಗು ಈಗ 600,000 ಬ್ಯಾರೆಲ್ ಕಚ್ಚಾ ತೈಲದೊಂದಿಗೆ (ಗುಜರಾತ್‌ನ ವಾಡಿನಾರ್‌ಗೆ) ತೆರಳುತ್ತಿದೆ. ಮೇ 2019ರ ನಂತರ ಮೊದಲ ಬಾರಿಗೆ ಯುದ್ಧದಂತಹ ನಿರ್ಣಾಯಕ ಸಂದರ್ಭದಲ್ಲಿ ಭಾರತಕ್ಕೆ ಬರುತ್ತಿದೆ’ ಎಂದಿದ್ದಾರೆ. ಆದರೆ ಖರೀದಾರರು ಯಾವುದು ಎನ್ನುವುದು ತಿಳಿದು ಬಂದಿಲ್ಲ.

ಮಾರ್ಚ್‌ನಲ್ಲಿ 3.1 ಲಕ್ಷ ಹೊಸ ಪಿಎನ್‌ಜಿ ಸಂಪರ್ಕ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೇ ಭಾರತದಲ್ಲಿ ಪಿಎನ್‌ಜಿ (ಪೈಪ್ಡ್‌ ನ್ಯಾಚುರಲ್‌ ಗ್ಯಾಸ್‌) ಬೇಡಿಕೆ ಹೆಚ್ಚಾಗಿದೆ. ಮಾರ್ಚ್ ತಿಂಗಳೊಂದರಲ್ಲೇ 3.1ಲಕ್ಷ ಹೊಸ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದ್ದರೆ, ಇನ್ನೂ 2.7 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಬೇಡಿಕೆ ಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇರಾನ್‌ ಯುದ್ಧ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್‌ಪಿಪಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪಿಎನ್‌ಜಿ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲು ಆರಂಭಿಸಿತ್ತು. ಪಿಎನ್‌ಜಿ ಸಂಪರ್ಕ ಪಡೆಯಲು ಅವಕಾಶವಿರುವವರು ಎಲ್‌ಪಿಜಿ ಸಿಲಿಂಡರ್‌ ಬಳಸುತ್ತಿದ್ದರೆ ಮೂರು ತಿಂಗಳ ಬಳಿಕ ಅಂಥವರ ಎಲ್‌ಪಿಜಿ ಪೂರೈಕೆ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಸರ್ಕಾರ ನೀಡಿತ್ತು. ಇದರ ಬೆನ್ನಲ್ಲೇ ದೇಶಾದ್ಯಂತ ಪಿಎನ್‌ಜಿ ಸಂಪರ್ಕಕ್ಕೆ ಬೇಡಿಕೆ ಬಂದಿದೆ.ಮಾರ್ಚ್‌ ತಿಂಗಳಲ್ಲಿ ಮನೆಗಳು, ಹೋಟೆಲ್‌ಗಳು, ಪಿಜಿಗಳು, ವಾಣಿಜ್ಯ ಕೇಂದ್ರಗಳು, ಕ್ಯಾಂಟೀನ್‌ಗಳು ಸೇರಿ 3.1 ಲಕ್ಷ ಹೊಸ ಗ್ರಾಹಕರಿಗೆ ಪಿಎನ್‌ಜಿ ಸಂಪರ್ಕ ಗ್ಯಾಸ್‌ ಕಲ್ಪಿಸಲಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಫೆಬ್ರವರಿ ಅಂತ್ಯದಲ್ಲಿ ಭಾರತದಲ್ಲಿ 1.64 ಕೋಟಿ ಮನೆಗಳಿಗೆ ಹಾಗೂ 48,568 ವಾಣಿಜ್ಯ ಹಾಗೂ 21,512 ಕೈಗಾರಿಕೆಗಳಿಗೆ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ. ಇದೀಗ ಹೊಸದಾಗಿ ಸೇರ್ಪಡೆಯಾಗಿರುವ 3.1 ಲಕ್ಷ ಮಂದಿ ಈ ಹಿಂದಿನ ತಿಂಗಳುಗಳಲ್ಲಿ ಗ್ಯಾಸ್‌ಗಾಗಿ ಅರ್ಜಿ ಸಲ್ಲಿಸಿದವರಾಗಿದ್ದು, ಅವರಿಗೆ ಮಾರ್ಚ್‌ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಮಾರ್ಚ್‌ ತಿಂಗಳಲ್ಲಿ 2.7 ಲಕ್ಷ ಮಂದಿ ಹೊಸದಾಗಿ ಪಿಎನ್‌ಜಿ ಸಂಪರ್ಕಕ್ಕಾಗಿ ಮನವಿ ಸಲ್ಲಿಸಿದ್ದು, ಅವರಿಗೆ ಗ್ಯಾಸ್‌ ಮೂಲಕ ಅಡುಗೆ ಅನಿಲ ಪೂರೈಸುವ ಪ್ರಕ್ರಿಯೆ ನಡೆಯುತ್ತಿದೆ. 

ಹೋರ್ಮುಜ್‌ನಲ್ಲಿ ಹಡಗಿಗೆ ಸುಂಕ, ಅಮೆರಿಕ, ಇಸ್ರೇಲ್‌ ಶಿಪ್‌ಗೆ ನಿಷೇಧ

ಟೆಹ್ರಾನ್‌: ಹೋರ್ಮುಜ್‌ ಜಲಸಂಧಿ ಹಾಯ್ದು ಹೋಗುವ ಹಡಗುಗಳಿಗೆ ಸುಂಕ ವಿಧಿಸುವ ಹೊಸ ನಿರ್ವಹಣಾ ಯೋಜನೆಯೊಂದನ್ನು ಇರಾನ್‌ ಸಂಸತ್‌ ಮಂಗಳವಾರ ಅನುಮೋದಿಸಿದೆ. ಇದರನ್ವಯ ಇಲ್ಲಿ ಸಂಚರಿಸುವ ಹಡಗುಗಳು ರಿಯಾಲ್‌ ಮೂಲಕ ಇರಾನ್‌ಗೆ ಸುಂಕ ಪಾವತಿಸಬೇಕು. ಈ ಹಣವನ್ನು ಹೋರ್ಮಜ್‌ ಕರಾವಳಿ ರಕ್ಷಣೆ, ಹಡಗುಗಳ ಭದ್ರತೆ, ಹೋರ್ಮಜ್ ನಿರ್ವಹಣೆಗೆ ಬಳಸಲಾಗುವುದು ಎಂದು ಇರಾನ್‌ ಹೇಳಿದೆ. ಆದರೆ ಈ ಹೊಸ ಯೋಜನೆಯು ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ಮೇಲೆ ಏಕಪಕ್ಷೀಯ ನಿರ್ಬಂಧ ಹೇರುವ ದೇಶಗಳ ಹಡಗುಗಳಿಗೆ ಹೋರ್ಮಜ್‌ನಲ್ಲಿ ಸಂಪೂರ್ಣ ನಿಷೇಧ ಹೇರಿದೆ. ಜೊತೆಗೆ ಜಲಸಂಧಿ ಮೇಲೆ ತನ್ನ ಸಾರ್ವಭೌಮತ್ವವನ್ನು ಪುನರುಚ್ಚರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

5 ದಶಕಗಳ ಬಳಿಕ ಮತ್ತೆ ಚಂದ್ರನ ಕಡೆಗೆ ಮಾನವ!
ಇರಾನ್‌ ಯುದ್ಧ ಮಧ್ಯದಲ್ಲೇ ನಿಲ್ಲಿಸಲು ಟ್ರಂಪ್‌ ನಿರ್ಧಾರ?