ಇಂದಿನಿಂದ ಅಮೆರಿಕದ ಐಟಿ ಕಂಪನಿ ಟಾರ್ಗೆಟ್‌ : ಇರಾನ್‌

KannadaprabhaNewsNetwork |  
Published : Apr 01, 2026, 01:45 AM IST
Google

ಸಾರಾಂಶ

ಈಗಾಗಲೇ ತನ್ನ ಸರ್ವೋಚ್ಚ ನಾಯಕ ಸೇರಿದಂತೆ ಸರ್ಕಾರ ಹಾಗೂ ಸೇನೆಯ ಹಲವು ಉನ್ನತ ವ್ಯಕ್ತಿಗಳನ್ನು ಕಳೆದುಕೊಂಡಿರುವ ಇರಾನ್‌, ‘ಇನ್ನು ನಮ್ಮ ನಾಯಕರನ್ನು ಗುರಿಯಾಗಿಸಿ ಉದ್ದೇಶಿತ ಹತ್ಯೆಗಳನ್ನು ನಡೆಸಿದರೆ, ನಾವು ಗಲ್ಫ್‌ನಲ್ಲಿರುವ ಅಮೆರಿಕದ ಐಟಿ ಕಂಪನಿಗಳ ಮೇಲೆ ಏ.1ರಿಂದಲೇ ದಾಳಿ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದೆ.

ಟೆಹ್ರಾನ್‌: ಈಗಾಗಲೇ ತನ್ನ ಸರ್ವೋಚ್ಚ ನಾಯಕ ಸೇರಿದಂತೆ ಸರ್ಕಾರ ಹಾಗೂ ಸೇನೆಯ ಹಲವು ಉನ್ನತ ವ್ಯಕ್ತಿಗಳನ್ನು ಕಳೆದುಕೊಂಡಿರುವ ಇರಾನ್‌, ‘ಇನ್ನು ನಮ್ಮ ನಾಯಕರನ್ನು ಗುರಿಯಾಗಿಸಿ ಉದ್ದೇಶಿತ ಹತ್ಯೆಗಳನ್ನು ನಡೆಸಿದರೆ, ನಾವು ಗಲ್ಫ್‌ನಲ್ಲಿರುವ ಅಮೆರಿಕದ ಐಟಿ ಕಂಪನಿಗಳ ಮೇಲೆ ಏ.1ರಿಂದಲೇ ದಾಳಿ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದೆ.

ಈ ಬಗ್ಗೆ ಐಆರ್‌ಜಿಸಿ ಬಿಡುಗಡೆ ಮಾಡಿರುವ ಹೇಳಿಕೆ

ಈ ಬಗ್ಗೆ ಐಆರ್‌ಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮೈಕ್ರೋಸಾಫ್ಟ್, ಗೂಗಲ್, ಆಪಲ್, ಇಂಟೆಲ್, ಐಬಿಎಂ, ಟೆಸ್ಲಾ, ಮೆಟಾ, ಬೋಯಿಂಗ್ ಸೇರಿದಂತೆ 18 ಕಂಪನಿಗಳನ್ನು ಹೆಸರಿಸಲಾಗಿದ್ದು, ‘ಇರಾನ್‌ನಲ್ಲಿ ನಡೆಸಲಾಗುವ ಉಗ್ರಕೃತ್ಯಗಳಿಗೆ ಬದಲಾಗಿ ಈ ಎಲ್ಲಾ ಕಂಪನಿಗಳು ತಮ್ಮ ಘಟಕಗಳನ್ನು ಕಳೆದುಕೊಳ್ಳಬೇಕಾಗುವುದು. 

ಈ ಷರತ್ತು ರಾತ್ರಿ 10.30ರಿಂದ(ಭಾರತೀಯ ಕಾಲಮಾನ) ಆರಂಭ

ಈ ಷರತ್ತು ರಾತ್ರಿ 10.30ರಿಂದ(ಭಾರತೀಯ ಕಾಲಮಾನ) ಆರಂಭವಾಗುತ್ತದೆ. ಜೀವ ಉಳಿಸಿಕೊಳ್ಳಬೇಕಿದ್ದರೆ ಸಿಬ್ಬಂದಿ ಈ ಕಂಪನಿಯ ಕಟ್ಟಡಗಳಿಂದ ಹೊರಹೋಗಿ’ ಎನ್ನಲಾಗಿದೆ. ಈ ಮೊದಲು ಬ್ಯಾಂಕ್‌ನಂತಹ ಆರ್ಥಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಇರಾನ್‌ ಎಚ್ಚರಿಕೆ ನೀಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

5 ದಶಕಗಳ ಬಳಿಕ ಮತ್ತೆ ಚಂದ್ರನ ಕಡೆಗೆ ಮಾನವ!
ಇರಾನ್‌ ಯುದ್ಧ ಮಧ್ಯದಲ್ಲೇ ನಿಲ್ಲಿಸಲು ಟ್ರಂಪ್‌ ನಿರ್ಧಾರ?