ಸಿಂದೂರ ನಿಲ್ಲಿಸಿದ್ದಕ್ಕೆ ಪಾಕ್‌ ಪಿಎಂ ಉಳ್ಕೊಂಡ್ರು : ಟ್ರಂಪ್‌

KannadaprabhaNewsNetwork |  
Published : Feb 26, 2026, 03:15 AM ISTUpdated : Feb 26, 2026, 04:59 AM IST
donald trump

ಸಾರಾಂಶ

ಭಾರತ-ಪಾಕ್‌ ಸಂಘರ್ಷವು ತನ್ನಿಂದಲೇ ನಿಂತದ್ದು ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಭಾರತ ಆಪರೇಷನ್‌ ಸಿಂದೂರದ ದಾಳಿ ನಿಲ್ಲಿಸದೇ ಇದ್ದಿದ್ದರೆ ಪಾಕಿಸ್ತಾನದ ಪ್ರಧಾನಮಂತ್ರಿಗಳು ಸತ್ತುಹೋಗುತ್ತಿದ್ದರು ಎಂದು 3.5 ಕೋಟಿ ಜನ ಹೇಳಿದರು’ ಎಂಬ ಹೊಸ ಹೇಳಿಕೆ ನೀಡಿದ್ದಾರೆ.

 ವಾಷಿಂಗ್ಟನ್‌: ಭಾರತ-ಪಾಕ್‌ ಸಂಘರ್ಷವು ತನ್ನಿಂದಲೇ ನಿಂತದ್ದು ಎಂದು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಭಾರತ ಆಪರೇಷನ್‌ ಸಿಂದೂರದ ದಾಳಿ ನಿಲ್ಲಿಸದೇ ಇದ್ದಿದ್ದರೆ ಪಾಕಿಸ್ತಾನದ ಪ್ರಧಾನಮಂತ್ರಿಗಳು ಸತ್ತುಹೋಗುತ್ತಿದ್ದರು ಎಂದು 3.5 ಕೋಟಿ ಜನ ಹೇಳಿದರು’ ಎಂಬ ಹೊಸ ಹೇಳಿಕೆ ನೀಡಿದ್ದಾರೆ.

ಶೆಹಬಾಜ್‌ ಷರೀಫ್‌ರ ಜೀವ ಉಳಿಸಿದ ಶ್ರೇಯ

ಈ ಮೂಲಕ, ತಮಗೆ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ರ ಜೀವ ಉಳಿಸಿದ ಶ್ರೇಯವನ್ನು ತಾವೇ ಕೊಟ್ಟುಕೊಂಡಿದ್ದಾರೆ.

ಅಮೆರಿಕದ ಸಂಸತ್ತಿನಲ್ಲಿ ವಾರ್ಷಿಕ ಜಂಟಿ ಅಧಿವೇಶನದಲ್ಲಿ 100 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಟ್ರಂಪ್, ‘ನಾನು ಅಧಿಕಾರಕ್ಕೇರಿದ 10 ತಿಂಗಳಲ್ಲಿ 8 ಯುದ್ಧ ನಿಲ್ಲಿಸಿದೆ. ಅದರಲ್ಲಿ ಭಾರತ-ಪಾಕ್‌ ಸಮರ ಕೂಡ ಒಂದು. ಅದು ಅಣುದಾಳಿಯ ಹಂತಕ್ಕೂ ಹೋಗುವ ಸಂಭವವಿತ್ತು. ಒಂದೊಮ್ಮೆ ನಾನು ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ಪಾಕ್‌ ಪ್ರಧಾನಿ ಸಾಯುತ್ತಿದ್ದರು ಎಂದ 3. 5 ಕೋಟಿ ಜನ ಹೇಳಿದರು’ ಎಂದು ನುಡಿದರು.

ಟ್ರಂಪ್‌ 100ಕ್ಕೂ ಅಧಿಕ ಬಾರಿ ನುಡಿದರು

ಟ್ರಂಪ್‌ 100ಕ್ಕೂ ಅಧಿಕ ಬಾರಿ, ಪಹಲ್ಗಾಂ ದಾಳಿಗೆ ಪ್ರತಿಯಾಗಿ ಪಾಕ್‌ ಮೇಲೆ ಭಾರತ ನಡೆಸಿದ ಆಪರೇಷನ್‌ ಸಿಂದೂರ ನಿಲ್ಲಿಸಿದ್ದು ತಾವೇ ಎಂದು ಘೋಷಿಸಿಕೊಳ್ಳುತ್ತಿದ್ದರೂ, ಭಾರತ ಮಾತ್ರ ಆ ವಿಷಯದಲ್ಲಿ 3ನೇ ವ್ಯಕ್ತಿ ಅಥವಾ ರಾಷ್ಟ್ರದ ಮಧ್ಯಪ್ರವೇಶವೇ ಆಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಲೇ ಬಂದಿದೆ.

ಪಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಆಪರೇಷನ್‌ ಸಿಂದೂರ ನಡೆಸಿದ್ದ ಭಾರತೀಯ ಸೇನೆ

3 ದಿನ ದಾಳಿಗೆ ಕಂಗೆಟ್ಟಿದ್ದ ಪಾಕ್‌. ಬಳಿಕ ಪಾಕ್ ಕೋರಿಕೆಯಂತೆ ದಾಳಿ ನಿಲ್ಲಿಸಿದ್ದ ಭಾರತ

ಆದರೆ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಅಧ್ಯಕ್ಷ ಟ್ರಂಪ್‌

ನಾನು ದಾಳಿ ನಿಲ್ಲಿಸದಿದ್ದರೆ ಪಾಕ್‌ ಪ್ರಧಾನಿ ಶೆಹಬಾಜ್‌ ಜೀವಕ್ಕೆ ಅಪಾಯ ಎಂಬ ವಾದ

ಹಾಗೆಂದು ಪಾಕಿಸ್ತಾನದ 3.5 ಕೋಟಿ ಜನರು ಹೇಳುತ್ತಿದ್ದಾರೆಂದು ಬಡಾಯಿ ಕೊಚ್ಚಿದ ಅಧ್ಯಕ್ಷ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಿಎಸ್ಸೆನ್ನೆಲ್‌ ನಿರ್ದೇಶಕನ ಪ್ರಯಾಗ್‌ರಾಜ್‌ಗೆ ‘ಐಷಾರಾಮಿ ಭೇಟಿ’ ವಿವಾದ!
ಎಐನಿಂದ ಕರ್ನಾಟಕ ಐಟಿ ಕಂಪನಿಗಳಿಗೆ ಭಾರೀ ಕುತ್ತು-ಟಿಸಿಎಸ್‌, ವಿಪ್ರೋ, ಇನ್ಫೋಸಿಸ್‌ ಸೇವೆ ಎಐನಿಂದಲೇ ಸಾಧ್ಯ