ಇರಾನ್‌ ಮೇಲೆ ಅಮೆರಿಕವಾಯು ದಾಳಿ ಸನ್ನಿಹಿತ?ಆತಂಕ- ಎಚ್ಚರಿಕೆ ನಡುವೆ ಇರಾನ್‌ನತ್ತ ಸಮರನೌಕೆ- ಖಮೇನಿ ಅಧಿಕಾರ ಬಿಡಬೇಕು ಎಂದ ಟ್ರಂಪ್‌

KannadaprabhaNewsNetwork |  
Published : Feb 15, 2026, 03:00 AM IST
ಅಮೆರಿಕ ನೌಕೆ  | Kannada Prabha

ಸಾರಾಂಶ

‘ಇರಾನ್‌ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಅಧಿಕಾರದಿಂದ ನಿರ್ಗಮಿಸಬೇಕು. ಇದು ಉದ್ವಿಗ್ನತೆ ತಣಿಸಲು ಅತ್ಯುತ್ತಮ ಮಾರ್ಗ‘ ಎಂದು ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರೆ, ಇನ್ನೊಂದು ಕಡೆ ಇರಾನ್‌ ಮೇಲಿನ ದಾಳಿಯ ಸಾಧ್ಯಾಸಾಧ್ಯತೆ ಪರಿಶೀಲನೆ ಮುಂದುವರಿಸಿದ್ದಾರೆ.

ಇರಾನ್‌ನ ಸರ್ವಾಧಿಕಾರಿ ಧಾರ್ಮಿಕ ನಾಯಕ ಆಯತೊಲ್ಲಾ ಖಮೇನಿ ಪದಚ್ಯುತಿಗೆ ಟ್ರಂಪ್‌ ಪಟ್ಟು

ಇದೇ ಕಾರಣಕ್ಕೆ ಹಲವು ಬಾರಿ ಎಚ್ಚರಿಕೆ. ಇದೀಗ ಟ್ರಂಪ್‌ ಸೂಚನೆ ಅನ್ವಯ ಯುದ್ಧ ನೌಕೆ ಇರಾನ್‌ನತ್ತ

ಒಂದುವಾರ ಕಾಲ ಸತತ ದಾಳಿ ನಡೆಸಿ ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಟ್ರಂಪ್‌ ಎಲ್ಲಾ ಸಿದ್ಧತೆ

ಮಾತು ಕೇಳದ ವೆನಿಜುವೆಲಾ ಅಧ್ಯಕ್ಷ ಮಡುರೋ ಬಂಧನ ಬೆನ್ನಲ್ಲೇ ಮತ್ತೊಂದು ದೇಶದತ್ತ ಚಿತ್ತ

==

ವಾಷಿಂಗ್ಟನ್‌: ‘ಇರಾನ್‌ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ಅಧಿಕಾರದಿಂದ ನಿರ್ಗಮಿಸಬೇಕು. ಇದು ಉದ್ವಿಗ್ನತೆ ತಣಿಸಲು ಅತ್ಯುತ್ತಮ ಮಾರ್ಗ‘ ಎಂದು ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದರೆ, ಇನ್ನೊಂದು ಕಡೆ ಇರಾನ್‌ ಮೇಲಿನ ದಾಳಿಯ ಸಾಧ್ಯಾಸಾಧ್ಯತೆ ಪರಿಶೀಲನೆ ಮುಂದುವರಿಸಿದ್ದಾರೆ. ಜೊತೆಗೆ ವಿಶ್ವದ ಅತಿದೊಡ್ಡ ಮತ್ತು ಅಮೆರಿಕದ 2ನೇ ವಿಮಾನವಾಹಕ ಸಮರ ನೌಕೆಯನ್ನು ಇರಾನ್‌ನತ್ತ ಕಳಿಸಿದೆ ಎಂದು ವರದಿಯಾಗಿದೆ.

‘ಟ್ರಂಪ್‌ ಅವರ ಈ ನಡೆ ದಾಳಿಯ ಸಾಧ್ಯಾಸಾಧ್ಯತೆ ಹೆಚ್ಚಿಸಿದೆ. ಒಂದು ವೇಳೆ ಅವರು ದಾಳಿಗೆ ಆದೇಶಿಸಿದರೆ ವಾರಗಳ ಕಾಲ ಇರಾನ್‌ ಮೇಲೆ ಅಮೆರಿಕ ದಾಳಿ ನಡೆಸಬಹುದು’ ಎಂದು ಮೂಲಗಳನ್ನು ಆಧರಿಸಿ ಕೆಲವು ಮಾಧ್ಯಮ ವರದಿಗಳು ಹೇಳಿವೆ.

ಟ್ರಂಪ್‌ ಈಗ ಕಳಿಸಿರುವ ಯುದ್ಧನೌಕೆಯ ಹೆಸರು ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್. ಇದು ವಿಶ್ವದ ಅತಿದೊಡ್ಡ ವಿಮಾನವಾಹಕ ನೌಕೆಯಾಗಿದ್ದು, ಇದನ್ನು ಮಧ್ಯಪ್ರಾಚ್ಯಕ್ಕೆ ನಿಯೋಜಿಸಲಾಗಿದೆ. ಈ ನಿಯೋಜನೆಯು ಇರಾನ್ ವಿರುದ್ಧ ಸಂಭಾವ್ಯ ದಾಳಿಯನ್ನು ಸೂಚಿಸುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಟ್ರಂಪ್ ಗುಡುಗು:

ಈ ನಡುವೆ ಶುಕ್ರವಾರ ಮಾತನಾಡಿದ ಟ್ರಂಪ್‌, ‘ಸದ್ಯ ಆಡಳಿತ ಬದಲಾವಣೆ (ಖಮೇನಿ ನಿರ್ಗಮನ) ಉತ್ತಮ ಮಾರ್ಗ. 47 ವರ್ಷದಿಂದ ಅವರು (ಖಮೇನಿ) ಮಾತನಾಡುತ್ತಲೇ ಇದ್ದಾರೆ. ಈ ವೇಳೆ ಅನೇಕ ಅಮೆರಿಕನ್ನರ ಪ್ರಾಣಗಳು ಹೋಗಿವೆ’ ಎಂದು ಕಿಡಿಕಾರಿದರು. ‘ಹೊಸ ಅಧ್ಯಕ್ಷ ಯಾರಾಗಬಹುದು’ ಎಂಬ ಪ್ರಶ್ನೆಗೆ ‘ಅದರ ಬಗ್ಗೆ ನಾನು ಮಾತನಾಡಲ್ಲ. ಆದರೆ ಅನೇಕ ಜನರಿದ್ದಾರೆ’ ಎಂದಷ್ಟೇ ಉತ್ತರಿಸಿದರು.

ಆದಾಗ್ಯೂ, ಅಮೆರಿಕ-ಇರಾನ್ ಮಧ್ಯೆ 2ನೇ ಸುತ್ತಿನ ಮಾತುಕತೆ ಸಾಧ್ಯತೆ ಇದೆ. ಎರಡೂ ರಾಷ್ಟ್ರಗಳು ಒಂದು ವಾರದ ಹಿಂದೆ ಒಮಾನ್‌ನಲ್ಲಿ ಮಾತುಕತೆ ನಡೆಸಿದ್ದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಶಾನ್ಯದ ಮೊದಲ ತುರ್ತು ಭೂಸ್ಪರ್ಶ ನೆಲೆಗೆ ಚಾಲನೆಹೇವೇಲಿ ಮೋದಿ ಪ್ಲೇನ್‌ ಲ್ಯಾಡಿಂಗ್‌
ಪನ್ನು ಹತ್ಯೆಗೆ ಸಂಚು: ನಿಖಿಲ್‌ ಗುಪ್ತಾ ದಿಢೀರ್‌ ತಪ್ಪೊಪ್ಪಿಗೆ