ಟ್ರಂಪ್‌ ರಷ್ಯಾ ಟ್ಯಾಕ್ಸ್‌ ನಾಟಕ ತೆರೆದಿಟ್ಟ ಅಮೆರಿಕದ ಸಚಿವ!

Published : Aug 19, 2025, 06:08 AM IST
US Secretary of State Marco Rubio

ಸಾರಾಂಶ

ರಷ್ಯಾದಿಂದ ತೈಲ ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಮೇಲೆ ಶೇ.25ರಷ್ಟು ದಂಡವನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ವಿಧಿಸಿರುವ ಅಮೆರಿಕ, ಚೀನಾದ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ

ವಾಷಿಂಗ್ಟನ್‌: ರಷ್ಯಾದಿಂದ ತೈಲ ತರಿಸಿಕೊಳ್ಳುತ್ತಿರುವ ಕಾರಣಕ್ಕೆ ಭಾರತದ ಮೇಲೆ ಶೇ.25ರಷ್ಟು ದಂಡವನ್ನು ಹೆಚ್ಚುವರಿ ತೆರಿಗೆ ರೂಪದಲ್ಲಿ ವಿಧಿಸಿರುವ ಅಮೆರಿಕ, ಚೀನಾದ ವಿರುದ್ಧ ಇಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ, ಅವರೊಂದಿಗೆ ವ್ಯಾಪಾರ ಮಾತುಕತೆಗೆ ಮುಂದಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ವಿವರಿಸಿದ್ದಾರೆ. ಅವರ ಈ ವಿವರಣೆ ಅಮೆರಿಕದ ಕಪಟ ನಾಟಕ ಬಯಲು ಮಾಡಿದೆ.

‘ಚೀನಾ ರಷ್ಯಾದಿಂದ ತೈಲವನ್ನು ತರಿಸಿಕೊಳ್ಳುತ್ತದಾದರೂ, ಅದನ್ನು ಸಂಸ್ಕರಿಸಿ ಯುರೋಪ್‌ಗೆ ಮಾರುತ್ತದೆ. ಹೀಗಿರುವಾಗ, ಚೀನಾ ಮೇಲೆ ನಿರ್ಬಂಧ ಹೇರಿದರೆ ಜಾಗತಿಕವಾಗಿ ಇಂಧನ ದರ ಏರಿಕೆಯಾಗುತ್ತದೆ. ಇದಕ್ಕೆ ಹಲವು ಐರೋಪ್ಯ ದೇಶಗಳು ಚೀನಾದ ಮೇಲೆ ವಿರೋಧ ವ್ಯಕ್ತಪಡಿಸುತ್ತಿವೆ. ಅದನ್ನು ತಪ್ಪಿಸಲು ಚೀನಾವನ್ನು ತೆರಿಗೆಯಿಂದ ಹೊರಗಿಟ್ಟಿದ್ದೇವೆ. ಈ ವಿಷಯದಲ್ಲಿ ಯುರೋಪಿಯನ್ನರ ದ್ವೇಷ ನಮಗೆ ಬೇಡ’ ಎಂದು ರುಬಿಯೋ ಹೇಳಿದ್ದಾರೆ. ಈ ಮೂಲಕ, ತನ್ನ ಮಿತ್ರರಾಷ್ಟ್ರಗಳೂ ರಷ್ಯಾದ ತೈಲವನ್ನು ತರಿಸಿಕೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ ಹಾಗೂ ತಮ್ಮ ಪಕ್ಷಪಾತಿ ಧೋರಣೆಯನ್ನು ಮತ್ತೊಮ್ಮೆ ತೋರಿದ್ದಾರೆ.

ಅತ್ತ ಭಾರತ ಕೂಡ, ರಷ್ಯಾದ ತೈಲ ಆಮದಿಂದಾಗಿಯೇ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ, ನಮ್ಮ ಜನರ ಬೇಡಿಕೆ ಈಡೇರಿಸಲು ರಷ್ಯಾ ತೈಲ ಖರೀದಿ ಅನಿವಾರ್ಯ ಎಂದು ಹೇಳಿತ್ತು. ಆದರೂ ಟ್ರಂಪ್‌ ಭಾರತಕ್ಕೆ ದಂಡ ಘೋಷಿಸಿದ್ದರು.

PREV
Read more Articles on

Recommended Stories

ಜೈಶಂಕರ್‌ ಜತೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಮಾತುಕತೆ
10 ವರ್ಷದ ಕೇಂದ್ರ ಸರ್ಕಾರದಿಂದ ₹ 130 ಲಕ್ಷ ಕೋಟಿ ಸಾಲ: ಸಚಿವೆ