ನೀತಿ ಸಂಹಿತೆ ಹಿನ್ನೆಲೆ: ತಿರುಮಲ ದರ್ಶನಕ್ಕೆ ಶಿಫಾರಸು ಸ್ವೀಕಾರವಿಲ್ಲ

KannadaprabhaNewsNetwork |  
Published : Mar 19, 2024, 12:51 AM IST
ತಿರುಪತಿ ದೇಗುಲ | Kannada Prabha

ಸಾರಾಂಶ

ತಿರುಮಲದಲ್ಲಿ ದೇವರ ದರ್ಶನ ಹಾಗೂ ವಸತಿಗಾಗಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ತೀರ್ಮಾನಿಸಿದೆ.

ಹೈದರಾಬಾದ್‌: ತಿರುಮಲದಲ್ಲಿ ದೇವರ ದರ್ಶನ ಹಾಗೂ ವಸತಿಗಾಗಿ ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ತೀರ್ಮಾನಿಸಿದೆ.ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ತಿರುಮಲ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳು ದೇವರ ದರ್ಶನ ಮತ್ತು ವಸತಿಗಾಗಿ ಯಾವುದೇ ರೀತಿಯ ಶಿಫಾರಸು ಪತ್ರಗಳನ್ನು ತಂದರೆ ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.ಚುನಾವಣೆ ಮುಗಿಯುವವರೆಗೂ ಈ ಆದೇಶ ಜಾರಿಯಲ್ಲಿ ಇರಲಿದ್ದು, ನಿಯಮಾನುಸಾರ ಬರುವ ಭಕ್ತಾದಿಗಳಿಗೆ ಮಾತ್ರ ದರ್ಶನ, ವಸತಿಯನ್ನು ಪರಿಗಣಿಸಲಾಗುತ್ತದೆ ಎಂದು ಟ್ರಸ್ಟ್‌ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌