ಕಾಡಾನೆ ಜೊತೆ ಓಡಿಹೋದ ಕರ್ನಾಟಕದ 2 ಹೆಣ್ಣಾನೆಗಳು!

KannadaprabhaNewsNetwork |  
Published : May 30, 2026, 01:45 AM IST
Elephant

ಸಾರಾಂಶ

ಕರ್ನಾಟಕದ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ದಿದ್ದ 2 ಕುಮ್ಕಿ ಆನೆಗಳು ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂದಿನ ಜೊತೆ ನಾಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.

ಡೆಹ್ರಾಡೂನ್‌: ಕರ್ನಾಟಕದ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ದಿದ್ದ 2 ಕುಮ್ಕಿ ಆನೆಗಳು ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂದಿನ ಜೊತೆ ನಾಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.

ತುಂಗಾ ಮತ್ತು ಕಪಿಲಾ ಓಡಿಹೋದ ಆನೆಗಳು

ತುಂಗಾ ಮತ್ತು ಕಪಿಲಾ ಓಡಿಹೋದ ಆನೆಗಳು. ಇವು ತರಬೇತಿ ಪಡೆದ ಕುಮ್ಕಿ ಆನೆಗಳಾಗಿದ್ದು, ಅರಣ್ಯ ಪಡೆಯ ಗಸ್ತು ಕೆಲಸಕ್ಕೆ ಬಳಸಲಾಗುತ್ತಿತ್ತು. 2017ರಲ್ಲಿ ಕರ್ನಾಟಕ ಸರ್ಕಾರ ಇವುಗಳನ್ನು ಉತ್ತರಾಖಂಡಕ್ಕೆ ಕಳಿಸಿಕೊಟ್ಟಿತ್ತು. ಕೆಲವು ದಿನಗಳ ಹಿಂದೆ ರಾತ್ರಿ ಸಮಯದಲ್ಲಿ ಕಾಡು ಆನೆಗಳ ಗುಂಪು ಬಂದಾಗ ಅವುಗಳ ಜೊತೆ ಸೇರಿ ತಮ್ಮ ಶಿಬಿರದಿಂದ ಕಣ್ಮರೆಯಾಗಿವೆ.

ಅರಣ್ಯ ಅಧಿಕಾರಿಗಳು ಆನೆಗಳನ್ನು ಹುಡುಕುತ್ತಿದ್ದಾರೆ.

ಅರಣ್ಯ ಅಧಿಕಾರಿಗಳು ಆನೆಗಳನ್ನು ಹುಡುಕುತ್ತಿದ್ದಾರೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವು. ತರಬೇತಿ ಪಡೆದ ಹೆಣ್ಣು ಆನೆಗಳು ಕಾಡು ಆನೆಗಳ ಜೊತೆಗೆ ಸ್ವಲ್ಪ ದಿನಗಳ ಕಾಲ ಹೋಗಿ ನಂತರ ತಿರುಗಿ ಬರುತ್ತವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ತರಹೇವಾರಿ ಕಾಮೆಂಟ್‌ಗಳನ್ನು ಆಕರ್ಷಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪಾಕ್‌ನ ದಾದುನಲ್ಲಿ ದಾಖಲೆಯ 51.5° ಸೆ. ಉಷ್ಣ
₹200 ಕೋಟಿ ಅಕ್ರಮ ವರ್ಗ ಕೇಸ್‌: ನಟಿ ಜಾಕ್ವೆಲಿನ್‌ ವಿರುದ್ಧಜಾರ್ಜ್‌ಶೀಟ್‌ಗೆ ಕೋರ್ಟ್‌ ಅಸ್ತು