ಶಾಲೆಗಳಲ್ಲೇ ಮಕ್ಕಳ ಆಧಾರ್‌ ಬಯೋಮೆಟ್ರಿಕ್‌ ಅಪ್‌ಡೇಟ್‌!

KannadaprabhaNewsNetwork |  
Published : Jul 21, 2025, 12:00 AM ISTUpdated : Jul 21, 2025, 05:41 AM IST
ಬಯೋಮೆಟ್ರಿಕ್ | Kannada Prabha

ಸಾರಾಂಶ

5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್‌ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್‌ ಅಪ್‌ಡೇಟ್‌ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.

ನವದೆಹಲಿ: 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್‌ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್‌ ಅಪ್‌ಡೇಟ್‌ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.

ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸಿಇಒ ಭುವನೇಶ್‌ ಕುಮಾರ್‌ ಮಾಹಿತಿ ನೀಡಿದ್ದು, ‘5 ವರ್ಷದ ದಾಟಿದ ಸುಮಾರು 7 ಕೋಟಿ ಮಕ್ಕಳು ಇದುವರೆಗೆ ಆಧಾರ್‌ನ್ನು ಬಯೋಮೆಟ್ರಿಕ್‌ ಮಾಡಿಸಿಕೊಂಡಿಲ್ಲ. ಹೀಗಾಗಿ ಪ್ರಾಧಿಕಾರ ಪೋಷಕರ ಒಪ್ಪಿಗೆಯೊಂದಿಗೆ ಮಕ್ಕಳ ಆಧಾರ್‌ಕಾರ್ಡ್‌ನ್ನು ಶಾಲೆಗಳಲ್ಲಿಯೇ ನವೀಕರಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ತಂತ್ರಜ್ಞಾನ ರೂಪುಗೊಳ್ಳುತ್ತಿದ್ದು, 45-60 ದಿನಗಳಲ್ಲಿ ಸಿದ್ಧವಾಗಲಿದೆ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ
ಟ್ರಂಪ್‌ ಬಳಿ ಇಲ್ಲ ಯುದ್ಧದ ಸೂಕ್ತ ಎಕ್ಸಿಟ್‌ ಪ್ಲ್ಯಾನ್‌!