ಯುಪಿ ಪೊಲೀಸ್‌ ಬೇಟೆ: 6 ರಾಜ್ಯದ 10 ಅಕ್ರಮ ಮತಾಂತರಿಗಳ ಸೆರೆ

KannadaprabhaNewsNetwork |  
Published : Jul 20, 2025, 01:15 AM ISTUpdated : Jul 20, 2025, 06:20 AM IST
ಮತಾಂತರ | Kannada Prabha

ಸಾರಾಂಶ

ಗಲ್ಫ್‌ ರಾಷ್ಟ್ರಗಳಿಂದ ಹಣ ಪಡೆದು ಸಾವಿರಾರು ಜನರನ್ನು ಇಸ್ಲಾಂಗೆ ಮತಾಂತರಿಸಿದ್ದ ಛಂಗುರ್‌ ಬಾಬಾ ಬಂಧನದ ಬೆನ್ನಲ್ಲೇ, ಉತ್ತರಪ್ರದೇಶ ಪೊಲೀಸರು ಅಕ್ರಮ ಮತಾಂತರದಲ್ಲಿ ತೊಡಗಿದ್ದ ಜಾಲವೊಂದನ್ನು ಭೇದಿಸಿ 6 ರಾಜ್ಯಗಳಲ್ಲಿ 10 ಜನರನ್ನು ಬಂಧಿಸಿದ್ದಾರೆ.

 ಲಖನೌ: ಗಲ್ಫ್‌ ರಾಷ್ಟ್ರಗಳಿಂದ ಹಣ ಪಡೆದು ಸಾವಿರಾರು ಜನರನ್ನು ಇಸ್ಲಾಂಗೆ ಮತಾಂತರಿಸಿದ್ದ ಛಂಗುರ್‌ ಬಾಬಾ ಬಂಧನದ ಬೆನ್ನಲ್ಲೇ, ಉತ್ತರಪ್ರದೇಶ ಪೊಲೀಸರು ಅಕ್ರಮ ಮತಾಂತರದಲ್ಲಿ ತೊಡಗಿದ್ದ ಜಾಲವೊಂದನ್ನು ಭೇದಿಸಿ 6 ರಾಜ್ಯಗಳಲ್ಲಿ 10 ಜನರನ್ನು ಬಂಧಿಸಿದ್ದಾರೆ.

ಬಂಧಿತರು ಅಕ್ರಮ ಹಣ ವ್ಯವಹಾರ, ರಹಸ್ಯ ಕಾರ್ಯಾಚರಣೆಗಳಿಗೆ ಸುರಕ್ಷಿತ ಮನೆ ಒದಗಿಸುವುದು, ಕಾನೂನು ಸಲಹೆ ನೀಡುವುದು, ಮತಾಂತರ ಮತ್ತು ಆಮೂಲಾಗ್ರೀಕರಣಕ್ಕೆ ನೆರವು ನೀಡುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಿದ್ದರು ಎಂದು ಆಗ್ರಾ ಪೊಲೀಸ್ ಆಯುಕ್ತ ದೀಪಕ್ ಕುಮಾರ್ ಹೇಳಿದ್ದಾರೆ.

 ಪತ್ತೆ ಹೇಗೆ?:

ಮಾರ್ಚ್‌ನಲ್ಲಿ 18 ಮತ್ತು 33 ವರ್ಷದ ಸಹೋದರಿಯರಿಬ್ಬರು ನಾಪತ್ತೆಯಾಗಿದ್ದರು. ಅವರ ಶೋಧದ ವೇಳೆ, ಇಬ್ಬರನ್ನೂ ಬಲವಂತವಾಗಿ ಮತಾಂತರ ಮಾಡಿರುವ ಶಂಕೆ ವ್ಯಕ್ತವಾಯಿತು. ಇದಕ್ಕೆ ಪೂರಕವಾಗಿ, ಒಬ್ಬಳ ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಎಕೆ47 ಬಂದೂಕು ಹಿಡಿದ ಹುಡುಗಿಯ ಚಿತ್ರ ಹಾಕಿಕೊಂಡಿದ್ದಳು.

ಪ್ರಾಥಮಿಕ ತನಿಖೆಯಿಂದ, ಇಬ್ಬರನ್ನು ಲವ್‌ ಜಿಹಾದ್‌ ಜಾಲಕ್ಕೆ ಸಿಲುಕಿಸಲಾಗಿದ್ದು, ಇದಕ್ಕೆ ಅಮೆರಿಕ ಮತ್ತು ಕೆನಡಾದಿಂದ ಹಣ ಹರಿದುಬರುತ್ತಿರುವುದು ಪತ್ತೆಯಾಯಿತು. ಅಕ್ರ ಮತಾಂತರದಲ್ಲಿ ತೊಡಗಿದ್ದ ಈ ಗ್ಯಾಂಗ್‌ನ ಹಿಂದೆ ಐಸಿಸ್‌ ಇರುವುದೂ ತಿಳಿದುಬಂತು.

ಬಳಿಕ ಆಗ್ರಾ ಪೊಲೀಸರು ರಾಜಸ್ಥಾನದಿಂದ 3, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 2, ಗೋವಾ, ಉತ್ತರಾಖಂಡ, ದೆಹಲಿಯಿಂದ ತಲಾ ಒಬ್ಬರನ್ನು ಬಂಧಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!