ಈ ಮೂಲಕ ಕೈದಿಗಳ ವ್ಯಕ್ತಿತ್ವ ವಿಕಸನ: ಸಚಿವಲಖನೌ: ಉತ್ತರಪ್ರದೇಶದ ಕಾರಾಗೃಹಗಳಲ್ಲಿ ಕೈದಿಗಳು ಹನುಮಾನ್ ಚಾಲೀಸಾ ಹಾಗೂ ಸುಂದರಕಾಂಡಗಳನ್ನು ಸಾಮೂಹಿಕವಾಗಿ ಪಠಿಸಲು ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಬಂದೀಖಾನೆ ಸಚಿವ ಧರ್ಮವೀರ ಪ್ರಜಾಪತಿ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ‘ಕೈದಿಗಳ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹನುಮಂತನಿಗಿಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮತ್ತೊಬ್ಬನಿಲ್ಲವಾದ್ದರಿಂದ ಆತನ ಮಂತ್ರಗಳನ್ನು ಪಠಿಸಿ ಅದರ ಒಳ್ಳೆಯ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಕೈದಿಗಳಿಗೆ ಪ್ರೇರೇಪಿಸಲಾಗುವುದು’ ಎಂದರು.
‘ಈ ಯೋಜನೆ ಮಥುರಾ ಮತ್ತು ಆಗ್ರಾ ಜೈಲುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಲಾಗಿದೆ, ಆದರೆ ಕೈದಿಗಳಿಗೆ ಪಠಣ ಕಡ್ಡಾಯವಲ್ಲ’ ಎಂದು ಸ್ಪಷ್ಟಪಡಿಸಿದರು.