ಕದನವಿರಾಮ ಉಲ್ಲಂಘಿಸಿ ಗಲ್ಫ್‌ ಮೇಲೆ ಇರಾನ್‌ ದಾಳಿ?

KannadaprabhaNewsNetwork |  
Published : Apr 11, 2026, 01:45 AM ISTUpdated : Apr 11, 2026, 06:16 AM IST
Iran

ಸಾರಾಂಶ

ಕದನವಿರಾಮದ ಬೆನ್ನಲ್ಲೇ ಕೆಲ ಗಂಟೆಗಳ ಕಾಲ ಮಧ್ಯಪ್ರಾಚ್ಯ ಶಾಂತವಾಗಿದ್ದರೂ, ತನ್ನ ಮೇಲೆ ಇರಾನ್‌ ಹಾಗೂ ಅದರ ಬೆಂಬಲಿತ ಪಡೆಗಳು ಡ್ರೋನ್‌ ದಾಳಿ ನಡೆಸಿರುವುದಾಗಿ ಕುವೈತ್‌ ಆರೋಪಿಸಿದೆ. ಆದರೆ ಇದನ್ನು ಐಆರ್‌ಜಿಸಿ ಅಲ್ಲಗಳೆದಿದೆ.

 ದುಬೈ: ಕದನವಿರಾಮದ ಬೆನ್ನಲ್ಲೇ ಕೆಲ ಗಂಟೆಗಳ ಕಾಲ ಮಧ್ಯಪ್ರಾಚ್ಯ ಶಾಂತವಾಗಿದ್ದರೂ, ತನ್ನ ಮೇಲೆ ಇರಾನ್‌ ಹಾಗೂ ಅದರ ಬೆಂಬಲಿತ ಪಡೆಗಳು ಡ್ರೋನ್‌ ದಾಳಿ ನಡೆಸಿರುವುದಾಗಿ ಕುವೈತ್‌ ಆರೋಪಿಸಿದೆ. ಆದರೆ ಇದನ್ನು ಐಆರ್‌ಜಿಸಿ ಅಲ್ಲಗಳೆದಿದೆ. ಅತ್ತ ಸೌದಿ ಅರೇಬಿಯಾ ಕೂಡ, ಕೆಂಪು ಸಮುದ್ರಕ್ಕೆ ತೈಲವನ್ನು ರವಾನಿಸುತ್ತಿದ್ದ ತನ್ನ ಈಸ್ಟ್‌-ವೆಸ್ಟ್‌ ಪೈಪ್‌ ಮೇಲೆ ದಾಳಿ ನಡೆದಿದ್ದು, ಅದಕ್ಕೆ ಹಾನಿಯಾಗಿದೆ ಎಂದು ಆರೋಪ ಮಾಡಿದೆ.

ಇರಾನ್‌ ಜನ ಶುಕ್ರವಾರ ಬೆಳಗ್ಗೆ ಸ್ಫೋಟದ ಸದ್ದು ಕೇಳಿಸಿದ್ದಾಗಿ ಹೇಳಿದ್ದಾರೆ.

ಅತ್ತ ಇರಾನ್‌ ಜನ ಶುಕ್ರವಾರ ಬೆಳಗ್ಗೆ ಸ್ಫೋಟದ ಸದ್ದು ಕೇಳಿಸಿದ್ದಾಗಿ ಹೇಳಿದ್ದಾರೆ. ಆದರೆ ಇರಾನ್‌ ಸರ್ಕಾರ ಇದನ್ನು ಅಲ್ಲಗಳೆದಿದೆ. ಇರಾನ್‌ ಮೇಲೆ ಅಮೆರಿಕ ಅಥವಾ ಇಸ್ರೇಲ್‌ ಕಡೆಯಿಂದ ಒಂದೂ ದಾಳಿ ವರದಿಯಾಗಿಲ್ಲ.

ಇನ್ನೊಂದು ಕಡೆ ದಕ್ಷಿಣ ಲೆಬನಾನ್‌ನಲ್ಲಿರುವ ಇರಾನ್‌ ಬೆಂಬಲಿತ ಹಿಜ್ಬುಲ್ಲಾಗಳನ್ನು ಪುಡಿಗಟ್ಟುವುದನ್ನು ಇಸ್ರೇಲ್‌ ಸೇನೆ ಮುಂದುವರೆಸಿದೆ. ಇದರ ಭಾಗವಾಗಿ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾಗಿ ಸೇನೆಯೇ ಹೇಳಿದೆ. ಅತ್ತ ಲೆಬನಾನ್‌ ಕೂಡ ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸುತ್ತಿದೆ.

ಏ.14ಕ್ಕೆ ಇಸ್ರೇಲ್‌- ಲೆಬನಾನ್‌ ಶಾಂತಿ ಮಾತುಕತೆ?

ಟೆಲ್‌ ಅವೀವ್‌: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಆಗಿರುವ ಸಮರವಿರಾಮ ಒಪ್ಪಂದವು ಲೆಬನಾನ್‌ ಮೇಲಿನ ದಾಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಮತ್ತು ಇಸ್ರೇಲ್‌ ವಾದಿಸುತ್ತಿರುವ ಹೊತ್ತಿನಲ್ಲೇ ನೆತನ್ಯಾಹು ಅವರು ಲೆಬನಾನ್‌ ಸರ್ಕಾರದ ಜತೆಗಿನ ಮಾತುಕತೆಗೆ ಒಪ್ಪಿದ್ದು, ಈ ಸಭೆ ಏ.14ರಂದು ವಾಷಿಂಗ್ಟನ್‌ನಲ್ಲಿ ನಡೆಯಬಹುದು ಎನ್ನಲಾಗಿದೆ. ಅಮೆರಿಕದ ಪರವಾಗಿ ಲೆಬನಾನ್‌ನಲ್ಲಿರುವ ರಾಯಭಾರಿ, ಇಸ್ರೇಲ್‌ ಪರವಾಗಿ ಅಮೆರಿಕದಲ್ಲಿರುವ ದೂತ ಭಾಗವಹಿಸಬಹುದು ಎನ್ನಲಾಗಿದ್ದು, ಲೆಬನಾನ್‌ ಸರ್ಕಾರ ಯಾರಿಗೆ ಈ ಜವಾಬ್ದಾರಿ ವಹಿಸಲಿದೆ ಎಂಬುದು ಇನ್ನೂ ತಿಳಿದಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕುಂಭ ಬೆಡಗಿ ಮೊನಾಲಿಸಾ ಅಪ್ರಾಪ್ತೆ : ಪತಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲು
ಕ್ಷೇತ್ರ ಮರುವಿಂಗಡಣೆ ವಿರುದ್ಧ ವಿಪಕ್ಷ ಜಂಟಿ ಹೋರಾಟ : ಖರ್ಗೆ