ಜೆಎಎಸ್‌ಎಸ್‌ಎಂ-ಇಆರ್ ಕ್ಷಿಪಣಿ ಪ್ರಯೋಗ ಸಂಭವ
ಜೆಎಎಸ್‌ಎಸ್‌ಎಂ-ಇಆರ್ ಬಳಸಿದರೆ ಇರಾನ್ ಶಿಲಾಯುಗಕ್ಕೆ?
ವಿಶ್ವಾದ್ಯಂತವಿದ್ದ ಕ್ಷಿಪಣಿಗಳೀಗ ಗಲ್ಫ್‌ನತ್ತ ದೌಡು, ನಿಯೋಜನೆಸೇನಾ ಹಾನಿಯ ವೆಚ್ಚ ತಗ್ಗಿಸಲೂ ಅಮೆರಿಕಕ್ಕೆ ಈ ಕ್ರಮ ಸಹಕಾರಿಭಯಂಕರ ಮಿಸೈಲ್ ಆದ್ರೂ, ಅಮೆರಿಕದಲ್ಲಿ ಸಾಕಷ್ಟು ಸ್ಟಾಕ್ ಇಲ್ಲದಿಢೀರ್ ಉತ್ಪಾದನೆ ಹೆಚ್ಚಳವೂ ಈಗ ಅಸಾಧ್ಯ
ವಾಷಿಂಗ್ಟನ್: ಈಗಾಗಲೇ 5 ವಾರಗಳನ್ನು ಪೂರೈಸಿದ್ದರೂ ಹಳೆ ಹುಮ್ಮಸ್ಸಿನಲ್ಲಿ ಯುದ್ಧವನ್ನು ಮುಂದುವರೆಸಿದ್ದ ಅಮೆರಿಕಕ್ಕೆ, ತನ್ನ ಸೇನೆಯ ಕಿರೀಟದಂತಿದ್ದ 2 ಅತ್ಯಾಧುನಿಕ ಎಫ್-35 ಯುದ್ಧವಿಮಾನಗಳಿಗೆ ಹಾನಿಯಾದ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಹತಾಶೆ ಹಾಗೂ ಕೋಪದಿಂದ ತನ್ನ ಬತ್ತಳಿಕೆಯಲ್ಲಿರುವ ಮಾರಕ ಕ್ಷಿಪಣಿಯನ್ನು ಇರಾನ್ ಕಡೆ ತಿರುಗಿಸಿದೆ ಎಂದು ಅಲ್ಲಿನ ಪ್ರತಿಷ್ಠಿತಿ ಸಂಸ್ಥೆ ಬ್ಲೂಂಬರ್ಗ್ ವರದಿ ಮಾಡಿದೆ.
ಜೆಎಎಸ್‌ಎಸ್‌ಎಂ-ಇಆರ್ ಎಂಬುದು ಅಮೆರಿಕದ ನೌಕಾಪಡೆ ಮತ್ತು ವಾಯುಪಡೆ ಬಳಸಬಹುದಾದ ಕ್ಷಿಪಣಿಯಾಗಿದ್ದು, ಇದನ್ನು ಯುದ್ಧವಿಮಾನಗಳಿಂದ ಉಡಾವಣೆ ಮಾಡಬಹುದಾಗಿದೆ. ಹಳೆಯ ಜೆಎಎಸ್‌ಎಸ್‌ಎಂಗಿಂತ ಎರಡುಪಟ್ಟು (600 ಮೈಲಿ) ದೂರದ ವರೆಗೆ ತಲುಪುವ ಸಾಮರ್ಥ್ಯ ಇದಕ್ಕಿದೆ. 450 ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಇದು ರಾಡಾರ್ ಕಣ್ಣಿಗೂ ಬೀಳುವುದಿಲ್ಲ. ಒಂದು ಜೆಎಎಸ್‌ಎಸ್‌ಎಂ-ಇಆರ್‌ನ ಬೆಲೆ 13 ಕೋಟಿ ರು. ಆಗಿದೆ.ಬಳಸಿದರೆ ಲಾಭವೇನು?:
ಅಮೆರಿಕ ಈ ಕ್ಷಿಪಣಿಗಳನ್ನು ಈಗಾಗಲೇ ಇರಾನ್ ವಿರುದ್ಧ ಬಳಸಿದೆ. ಯುದ್ಧಾರಂಭವಾದ 4 ವಾರಗಳಲ್ಲಿ ಸುಮಾರು 1000 ಜೆಎಎಸ್‌ಎಸ್‌ಎಂ-ಇಆರ್ ಕ್ಷಿಪಣಿಗಳು ಇರಾನ್ ವಿರುದ್ಧ ಬಳಕೆಯಾಗಿವೆ. ಪರಿಣಾಮ, ಫೆ.28ಕ್ಕೂ ಮುನ್ನ 2,300 ಇದ್ದ ಇವುಗಳ ಸಂಖ್ಯೆಯೀಗ 425ಕ್ಕೆ ಕುಸಿದಿದೆ. ಇವುಗಳಲ್ಲೂ 75 ಕ್ಷಿಪಣಿಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಪರಿಣಾಮ ಅವುಗಳ ಬಳಕೆ ಸಾಧ್ಯವಾಗದು.