ವಚನಗಳು ಸಾಮಾಜಿಕ ಕ್ರಾಂತಿಯ ಫಲ : ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆ ಮನೆ

KannadaprabhaNewsNetwork |  
Published : Dec 01, 2024, 01:32 AM ISTUpdated : Dec 01, 2024, 07:38 AM IST
 ಡಾ. ವಿಜಯ ರಾಘವೇಂದ್ರ,ಪ್ರೊ. ಬಸವರಾಜ್ ಹೊನ್ನೇಬಾಗಿ ಇದ್ದರು | Kannada Prabha

ಸಾರಾಂಶ

ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಕನ್ನಡ ನೆಲದ ವಚನ ಆಂದೋಲನ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಿತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆ ಮನೆ ನುಡಿದರು. ಚಿಕ್ಕನಾಯಕನಹಳ್ಳಿಯಲ್ಲಿ ವಚನ ದೀಪ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಚಿಕ್ಕನಾಯಕನಹಳ್ಳಿ : ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಕನ್ನಡ ನೆಲದ ವಚನ ಆಂದೋಲನ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯಿತು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆ ಮನೆ ನುಡಿದರು. 

ತೀರ್ಥಪುರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಹಳ್ಳಿಗೊಂದು ವಚನ ದೀಪ ಕಾರ್ಯಕ್ರಮದ ಅಡಿಯಲ್ಲಿ ನಡೆದ ಶರಣ ಸಾಹಿತ್ಯದ ಆಂದೋಲನ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, 12ನೇ ಶತಮಾನದ ವಚನ ಸಾಹಿತ್ಯ ಬಸವಾದಿ ಶರಣರ ಕಾಯಕ, ದಾಸೋಹ, ಭಕ್ತಿಯ ರೂಪ ಎಂದರು.

 ಬಸವಣ್ಣ ಅಂದು ನಡೆಸಿದ ವಿಲೋಮ ವಿವಾಹ ಕಲ್ಯಾಣ ಕ್ರಾಂತಿಗೆ ಕಾರಣವಾಗಿ ಬಿಜ್ಜಳ ಬಸವಣ್ಣನ ಸಂಬಂಧ ಬಿರುಕಾಗಿ ಕಲ್ಯಾಣ ಕ್ರಾಂತಿಗೆ ನಾಂದಿ ಆಯಿತು. ನಂತರ ಚೆನ್ನಬಸವಣ್ಣ, ಮಾಚಿದೇವ ಮುಂತಾದವರ ನಾಯಕತ್ವದಲ್ಲಿ ವಚನಗಳ ಸಂಗ್ರಹಣೆ ನಡೆಯಿತು. ದಿಕ್ಕು ಗೆಟ್ಟ ಶರಣರಿಗೆ ಅಲ್ಲಮ, ಸಿದ್ದರಾಮ, ಅಕ್ಕಮಹಾದೇವಿ, ಬಸವಣ್ಣ ಮುಂತಾದವರು ದಾರಿ ತೋರಿ ನಿಜ ಶರಣರು ಎನಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ. ರವಿಕುಮಾರ್, ವಚನ ಒಂದು ವಿಶಿಷ್ಟ ಕಾವ್ಯ ಪ್ರಕಾರ ವರ್ಗ ಸಂಘರ್ಷ ತುಂಬಿದ ಸಮಾಜದಲ್ಲಿ ಹೊಸ ಆಲೋಚನೆಗೆ ಮಾರ್ಗ ಆಗಿದ್ದು ವಚನಗಳು. ನಡೆ ನುಡಿ, ಒಳ್ಳೆಯ ಮಾರ್ಗಗಳಿಗೆ ಬಸವಾದಿ ಶರಣರು ಮುನ್ನುಡಿ ಬರೆದರು. ಗಾಂಧಿ, ಬುದ್ಧ, ಕುವೆಂಪು, ಅಂಬೇಡ್ಕರ್ ವಿಚಾರ ಧಾರೆಗೆ ವಚನಗಳೇ ಸ್ಫೂರ್ತಿ ಎಂದರು. 

ಸುತ್ತೂರಿನ ಶ್ರೀಗಳ ನೆನಪಿನಲ್ಲಿ ನಡೆಯುತ್ತಿರುವ ಈ ವಚನದೀಪ ಎಲ್ಲ ಹಳ್ಳಿಗೂ ತಲುಪಲು ಎಲ್ಲರ ಸಹಕಾರ ಮುಖ್ಯ ಎಂದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸಾಯಿಗಂಗಾ ಆಸ್ಪತ್ರೆಯ ಡಾ. ವಿಜಯ ರಾಘವೇಂದ್ರ ನೇತೃತ್ವದಲ್ಲಿ ಉಚಿತ ಅರೋಗ್ಯ ತಪಾಸಣೆ ನಡೆಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಬಸವರಾಜ್ ಹೊನ್ನೇಬಾಗಿ ಮಾತನಾಡಿ ಶರಣರ ಬದುಕಿನ ವಿಚಾರ ಎಲ್ಲ ಹಳ್ಳಿಗಳಲ್ಲಿ ಹಂಚಿ ಅವರ ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳಿಗೆ ವಚನಗಳ ಅರ್ಥ ತಿಳಿಸಬೇಕು. ಎಲ್ಲ ಧರ್ಮಗಳಿಗೆ ವಚನ ಧರ್ಮ ಪೋಷಕವಾಗಿದ್ದು ಅಂದಿನ ವಚನಕಾರರು ಸಮಾಜವನ್ನು ತಿದ್ದುವ ಸರಿ ದಾರಿಗೆ ಕರೆದೋಯುವ ಬೆಳಕಿನ ಕಿರಣ ಎಂದರು.

 ಸಮಾನತೆಯ ಬೀಜ ಬಿತ್ತಿ ಎಲ್ಲಾಜಾತಿ ಧರ್ಮದ ಕಿರಣವಾದ ಬಸವಣ್ಣ ಮುಂತಾದ ಶರಣರ ಬದುಕು ನಮಗೆ ಆದರ್ಶ ಎಂದರು. ಹಿರಿಯರನ್ನು ಗೌರಸ್ವಿಸಿ ನಡೆದಾಗ ಮಾತ್ರ ವಚನದ ಸಾರ ತಿಳಿಯಲು ಸಾಧ್ಯ ಎಂದರು. ಮುಂದಿನ ದಿನದಲ್ಲಿ ಮತ್ತಷ್ಟು ವಿಸ್ತರವಾಗಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಖಜಾಂಚಿ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮದ ರಮೇಶ್, ನಾಗಭೂಷಣ್, ವೀರಭದ್ರಯ್ಯ, ಮುಂತಾದವರು ಮಾತನಾಡಿ ದರು. ಶಿಕ್ಷಕರಾದ ಕುಮಾರ್ ನಿರೂಪಿಸಿ, ನಾಗಭೂಷಣ್ ಸ್ವಾಗತಿಸಿ, ಮಂಜುನಾಥ್ ವಂದಿಸಿದರು.

PREV

Recommended Stories

ಟ್ರಂಪ್‌-ಪುಟಿನ್‌ ಭೇಟಿ: ಭಾರತದ ಮೇಲಿನ ಸುಂಕ ಕಡಿತ?
ಸಿಂದೂರದಲ್ಲಿ 13 ತನ್ನ ಯೋಧರು ಸಾವು: ಪಾಕ್‌ ಒಪ್ಪಿಗೆ