ಅಮೆರಿಕ ಜತೆ ಆಟ ಆಡ್ಬೇಡಿ : ಸಂಧಾನ ಸಭೆಗೂ ಮುನ್ನಇರಾನ್‌ಗೆ ವ್ಯಾನ್ಸ್ ಎಚ್ಚರಿಕೆ

KannadaprabhaNewsNetwork |  
Published : Apr 11, 2026, 01:45 AM ISTUpdated : Apr 11, 2026, 06:10 AM IST
JD Vance

ಸಾರಾಂಶ

ಅಮೆರಿಕ, ಇರಾನ್‌ ನಡುವಿನ ತಿಂಗಳ ಯುದ್ಧದ ಸಂಧಾನ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಜ್ಜಾಗಿರುವ ನಡುವೆ ಅಮೆರಿಕದ ಜತೆ ಆಟ ಆಡಬೇಡಿ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕ, ಇರಾನ್‌ ನಡುವಿನ ತಿಂಗಳ ಯುದ್ಧದ ಸಂಧಾನ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಜ್ಜಾಗಿರುವ ನಡುವೆ ಅಮೆರಿಕದ ಜತೆ ಆಟ ಆಡಬೇಡಿ ಎಂದು ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ

 ಅಮೆರಿಕ ಮತ್ತು ಇರಾನ್‌ ನಡುವೆ 2 ವಾರಗಳ ಕದನ ವಿರಾಮ ಘೋಷಣೆ ಹೊರತಾಗಿಯೂ ಕೊಲ್ಲಿ ದೇಶಗಳ ಮೇಲೆ ಶುಕ್ರವಾರವೂ ಇರಾನ್‌ ದಾಳಿ ನಡೆಸಿದ ಆರೋಪ ಕೇಳಿಬಂದಿತ್ತು. ಮತ್ತೊಂದೆಡೆ ಹೋರ್ಮಜ್‌ನಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಇರಾನ್‌ ಅಡ್ಡಿ ಮಾಡಿತ್ತು. ಈ ಬಗ್ಗೆ ಟ್ರಂಪ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ವ್ಯಾನ್ಸ್‌ ಕೂಡಾ ಎಚ್ಚರಿಕೆಯ ದಾಟಿಯ ಮಾತುಗಳನ್ನು ಆಡಿದ್ದಾರೆ.

ನಾವು ಮಾತುಕತೆಗೆ ಸಿದ್ಧರಿದ್ದೇವೆ

ಸಂಧಾನ ಮಾತುಕತೆಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ವ್ಯಾನ್ಸ್‌, ‘ನಾವು ಮಾತುಕತೆಗೆ ಸಿದ್ಧರಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ. ಇರಾನಿಯರು ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಕೈ ಚಾಚಲು ಸಿದ್ಧರಿದ್ದೇವೆ. ಅವರು ಆಟ ಆಡಿದರೆ ಅದು ಸ್ವೀಕಾರ್ಹವಲ್ಲ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕುಂಭ ಬೆಡಗಿ ಮೊನಾಲಿಸಾ ಅಪ್ರಾಪ್ತೆ : ಪತಿಯ ವಿರುದ್ಧ ಪೋಕ್ಸೋ ಕೇಸ್‌ ದಾಖಲು
ಕ್ಷೇತ್ರ ಮರುವಿಂಗಡಣೆ ವಿರುದ್ಧ ವಿಪಕ್ಷ ಜಂಟಿ ಹೋರಾಟ : ಖರ್ಗೆ