ವ್ಯಾಪಾರಿಯೋರ್ವ ಸಮೋಸಾ ನೀಡಲು ವಾಚ್‌ ಕಿತ್ಕೊಂಡ

KannadaprabhaNewsNetwork |  
Published : Oct 20, 2025, 01:02 AM IST
ಸಮೋಸಾ | Kannada Prabha

ಸಾರಾಂಶ

ಇಲ್ಲಿನ ರೈಲು ನಿಲ್ದಾಣದಲ್ಲಿ ಸಮೋಸಾ ವ್ಯಾಪಾರಿಯೋರ್ವ, ಗ್ರಾಹಕನ ಆನ್ಲೈನ್‌ ಪೇಮೆಂಟ್‌ ಸರಿಹೋಗದ್ದಕ್ಕೆ ಆತನ ವಾಚ್‌ ಕಿತ್ತುಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬಳಿಕ ರೈಲ್ವೆ ಪೊಲೀಸರು ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ 

  ಜಬಲ್ಪುರ (ಮಧ್ಯ ಪ್ರದೇಶ) : ಇಲ್ಲಿನ ರೈಲು ನಿಲ್ದಾಣದಲ್ಲಿ ಸಮೋಸಾ ವ್ಯಾಪಾರಿಯೋರ್ವ, ಗ್ರಾಹಕನ ಆನ್ಲೈನ್‌ ಪೇಮೆಂಟ್‌ ಸರಿಹೋಗದ್ದಕ್ಕೆ ಆತನ ವಾಚ್‌ ಕಿತ್ತುಕೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬಳಿಕ ರೈಲ್ವೆ ಪೊಲೀಸರು ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಹಾಗೂ ಆ ವ್ಯಾಪಾರಿಯ ಲೈಸೆನ್ಸ್ ರದ್ದು ಮಾಡುವುದಾಗಿ ರೈಲ್ವೆ ಹೇಳಿದೆ.

ಶುಕ್ರವಾರ ಸಂಜೆ ವೇಳೆ ರೈಲು ನಿಂತಿದ್ದ ಕಾರಣ ಪ್ರಯಾಣಿಕನೊಬ್ಬ ರೈಲಿಂದ ಇಳಿದು ಸಮೋಸಾ ಖರೀದಿಗಾಗಿ ವ್ಯಾಪಾರಿ ಬಳಿ ಬಂದಿದ್ದ ಹಾಗೂ 2 ಸಮೋಸಾ ಖರೀದಿ ಮಾಡಿದ್ದ. ಈ ವೇಳೆ ಯುಪಿಐ ಪಾವತಿಯು ಸರ್ವರ್‌ ಸಮಸ್ಯೆಯಿಂದ ವಿಫಲಗೊಂಡಿತ್ತು. ಇದೇ ಸಮಯಕ್ಕೆ ರೈಲು ಸಹ ಹೊರಡಲು ಆರಂಭಿಸಿತ್ತು.

ಆಗ ವ್ಯಾಪಾರಿಯು ಆತನ ಅಂಗಿ ಹಿಡಿದು ಪೇಮೆಂಟ್‌ ಮಾಡು ಎಂದು ಜೋರು ಮಾಡಿದ್ದಾನೆ ಹಾಗೂ ಕೊನೆಗೆ ಆತನಿಂದ ವಾಚ್‌ ಪಡೆದು, ಕೈಗೆ 2 ಸಮೋಸಾ ಕೊಟ್ಟು ಕಳಿಸಿದ್ದಾನೆ.

ಇದರ ವಿಡಿಯೋ ವೈರಲ್‌ ಆಗಿದ್ದು, ವ್ಯಾಪಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ಪರವಾನಗಿ ರದ್ದುಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮರ್ಯಾದಾ ಹತ್ಯೆ : ಯುವ ಜೋಡಿ ಕೊಂದು ದೇವಸ್ಥಾನದ ಬಳಿ ಹೂತ ಸಹೋದರರು
ಉತ್ತರ ಕನ್ನಡ ಜಿಲ್ಲೆಯ ಉಗ್ರಗೆ ಬಂಗಾಳದಲ್ಲಿ 10 ವರ್ಷ ಜೈಲು