ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮುಖ್ಯಸ್ಥ ವಿಜಯ್‌ ರಾಜೀನಾಮೆ

KannadaprabhaNewsNetwork |  
Published : Feb 27, 2024, 01:30 AM IST
ವಿಜಯ್‌ ಶೇಖರ್‌ ಶರ್ಮಾ | Kannada Prabha

ಸಾರಾಂಶ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಮುಖ್ಯಸ್ಥರ ಹುದ್ದೆಗೆ ವಿಜಯ್‌ ಶೇಖರ್‌ ಶರ್ಮಾ ರಾಜೀನಾಮೆ ನೀಡಿದ್ದಾರೆ.

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ನಿರ್ಬಂಧಕ್ಕೊಳಪಟ್ಟಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (ಪಿಪಿಬಿಎಲ್)ನ ಕಾರ್ಯನಿರ್ವಾಹಕೇತರ ಮುಖ್ಯಸ್ಥ ಸ್ಥಾನಕ್ಕೆ ವಿಜಯ್‌ ಶೇಖರ್‌ ಶರ್ಮಾ ರಾಜೀನಾಮೆ ಸಲ್ಲಿಸಿದ್ದಾರೆ.

ಅಕ್ರಮ ನಡೆಸಿದ ಆರೋಪ ಹೊರಿಸಿ ಮಾ.15ರಿಂದ ಪೇಟಿಎಂ ಬ್ಯಾಂಕ್‌ ಠೇವಣಿ ಸ್ವೀಕರಿಸುವುದು ಮತ್ತು ಸಾಲ ನೀಡುವುದನ್ನು ಆರ್‌ಬಿಐ ನಿಷೇಧಿಸಿತ್ತು. ಹೀಗಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್ ಮತ್ತು ಮಾಜಿ ಐಎಎಸ್ ಅಧಿಕಾರಿ ರಜನಿ ಸೆಖ್ರಿ ಸಿಬಲ್ ಅವರನ್ನು ನೇಮಕ ಮಾಡುವ ಮೂಲಕ ಪಿಪಿಬಿಎಲ್ ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್ ರಚಿಸಿದೆ ಎಂದು ಪೇಟಿಎಂ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಎತ್ತ ಸಾಗುತ್ತಿದೆ ರಾಷ್ಟ್ರದ ವಿಪಕ್ಷಗಳ ಮನೋಸ್ಥಿತಿ..?
ಅಂತರ್ಜಾತಿ ಮದ್ವೆ, ಮತಾಂತರ ಆದ್ರೂ ಜಾತಿ ಬದಲಿಲ್ಲ: ಹೈಕೋರ್ಟ್‌