ಸೋನಿಯಾಗೆ ಪೌರತ್ವಕ್ಕೂ ಮುನ್ನವೇ ಮತದಾನ ಹಕ್ಕು!

Published : Nov 29, 2026, 07:56 AM IST
Sonia Gandhi

ಸಾರಾಂಶ

‘ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು 1980ರಲ್ಲಿ ಭಾರತೀಯ ಪೌರರಾಗಿರಲಿಲ್ಲ. 1983ರಲ್ಲಿ ಪೌರತ್ವ ಪಡೆದಿದ್ದರು. ಆದರೂ ಅವರ ಹೆಸರು 1980ರಿಂದ 1983ರವರೆಗೆ ಮತದಾರರ ಪಟ್ಟಿಯಲ್ಲಿ ಇತ್ತು’ ಎಂಬುದನ್ನು ದೆಹಲಿಯ ತುಘಲಕ್ ರೋಡ್‌ ಠಾಣಾ ಪೊಲೀಸರು ಶನಿವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ ದೃಢಪಡಿಸಿದ್ದಾರೆ.

ನವದೆಹಲಿ : ‘ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು 1980ರಲ್ಲಿ ಭಾರತೀಯ ಪೌರರಾಗಿರಲಿಲ್ಲ. 1983ರಲ್ಲಿ ಪೌರತ್ವ ಪಡೆದಿದ್ದರು. ಆದರೂ ಅವರ ಹೆಸರು 1980ರಿಂದ 1983ರವರೆಗೆ ಮತದಾರರ ಪಟ್ಟಿಯಲ್ಲಿ ಇತ್ತು’ ಎಂಬುದನ್ನು ದೆಹಲಿಯ ತುಘಲಕ್ ರೋಡ್‌ ಠಾಣಾ ಪೊಲೀಸರು ಶನಿವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ ‘ಕ್ರಮ ಕೈಗೊಂಡ ವರದಿ’ಯಲ್ಲಿ (ಎಟಿಆರ್‌) ದೃಢಪಡಿಸಿದ್ದಾರೆ. ಇದರಿಂದಾಗಿ ಸೋನಿಯಾ ಅವರಿಗೆ ಸಂಕಷ್ಟ ಎದುರಾದಂತಾಗಿದೆ.

1980ರಲ್ಲಿ ಭಾರತೀಯ ಪೌರತ್ವ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ಬಂತು ಎಂಬುದರ ಕುರಿತು ತನಿಖೆ ಮತ್ತು ಎಫ್‌ಐಆರ್‌ ದಾಖಲು ಕೋರಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ದೆಹಲಿಯ ರೋಸ್ ಅವೆನ್ಯೂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ವಿನೋದ್ ಜೋಶಿ ನಡೆಸುತ್ತಿದ್ದಾರೆ. ಅವರ ಮುಂದೆ ದಿಲ್ಲಿಯ ತುಘಲಕ್‌ ರೋಡ್‌ ಪೊಲೀಸರು ಎಟಿಆರ್‌ ಸಲ್ಲಿಸಿದ್ದು, ಅದರಲ್ಲಿ ಈ ಅಂಶವಿದೆ.

ಪೊಲೀಸರು ಹೇಳಿದ್ದೇನು?:

‘ಗೃಹ ಸಚಿವಾಲಯದ ವರದಿಯ ಪ್ರಕಾರ, ಸೋನಿಯಾ ಗಾಂಧಿ ಅವರು 1983ರ ಏಪ್ರಿಲ್ 30ರಂದು ಭಾರತೀಯ ಪೌರತ್ವವನ್ನು ಪಡೆದರು; ಅದಕ್ಕೂ ಮೊದಲು ಅವರು ಇಟಲಿಯ ಪೌರರಾಗಿದ್ದರು. ಈ ನಡುವೆ, 1980, 1981, 1982 ಮತ್ತು 1983ರ ಮತದಾರರ ಪಟ್ಟಿಗಳಲ್ಲಿ ಸೋನಿಯಾ ಅವರ ಹೆಸರು ಸೇರ್ಪಡೆಯಾಗಿತ್ತು ಎಂದು ಜಿಲ್ಲಾಧಿಕಾರಿಗಳಿಂದ ಪಡೆದ ದಾಖಲೆಗಳಲ್ಲಿ ಕಂಡುಬಂದಿದೆ. ಆದರೆ ಮತದಾರರಾಗಲು ಸೋನಿಯಾ ಸಲ್ಲಿಸಿದ್ದ ಫಾರಂ 6 ಈವರೆಗೂ ಪತ್ತೆ ಆಗಿಲ್ಲ’ ಎಂದು ಪೊಲೀಸರ ವರದಿ ಹೇಳಿದೆ.

ಇದರ ನಡುವೆ, ತನಿಖೆಯನ್ನು ಪೂರ್ಣಗೊಳಿಸಲು ನ್ಯಾಯಾಲಯವು ದೆಹಲಿ ಪೊಲೀಸರಿಗೆ ಹೆಚ್ಚಿನ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಡಿ.14ಕ್ಕೆ ನಿಗದಿಪಡಿಸಿದೆ.

ಏನಿದು ಪ್ರಕರಣ?

- ದೇಶದ ಪೌರತ್ವ ಪಡೆವ ಮುನ್ನವೇ ಸೋನಿಯಾ ಗಾಂಧಿ ಹೆಸರು ಮತಪಟ್ಟಿಯಲ್ಲಿತ್ತು ಎಂದು ಕೋರ್ಟ್‌ಗೆ ಅರ್ಜಿ

- ಈ ಬಗ್ಗೆ ತನಿಖೆಗೆ ಸೂಚಿಸಿದ್ದ ದೆಹಲಿ ನ್ಯಾಯಾಲಯ. ಇದೀಗ ತುಘಲಕ್‌ ರಸ್ತೆ ಪೊಲೀಸರಿಂದ ಕೋರ್ಟ್‌ಗೆ ವರದಿ

- 1980ರಿಂದ 1983ರವರೆಗೆ ಸೋನಿಯಾ ಅವರ ಹೆಸರು ದೆಹಲಿ ಮತದಾರರ ಪಟ್ಟಿಯಲ್ಲಿ ಇತ್ತು ಎಂಬುದು ಪತ್ತೆ

- 1980, 1981, 1982, 1983ರ ಮತದಾರರ ಪಟ್ಟಿಯಲ್ಲಿ ಅವರು ಹೆಸರಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ದೃಢೀಕರಣ

- ಆದರೆ ಸೋನಿಯಾ ಅವರು ದೇಶದ ಪೌರತ್ವ ಪಡೆದಿದ್ದೇ 1983ರಲ್ಲಿ. ಅದಕ್ಕೂ ಮುಂಚೆಯೇ ಮತಪಟ್ಟಿಯಲ್ಲಿತ್ತು ಹೆಸರು

- ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡುವಂತೆ ಸೋನಿಯಾ ಸಲ್ಲಿಸಿದ್ದ ಫಾರ್ಮ್ 6 ಇನ್ನೂ ಸಿಕ್ಕಿಲ್ಲ ಎಂದ ಪೊಲೀಸರು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕ್ಷೇತ್ರ ಮರುವಿಂಗಡಣೆ ಮಸೂದೆಗೆ ವಿಪಕ್ಷ ವಿರೋಧ
ಕ್ಷೇತ್ರ ಮರುವಿಂಗಡಣೆ ಮಸೂದೆ ಪರ 2/3 ಬಹುಮತ ಗಳಿಸುವತ್ತ ಎನ್‌ಡಿಎ