ತಮಿಳು ನಾಯಕರೇಕೆ ತಮಿಳಿನಲ್ಲಿ ಸಹಿ ಮಾಡಲ್ಲ : ಸ್ಟಾಲಿನ್‌ಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು

KannadaprabhaNewsNetwork |  
Published : Apr 07, 2025, 12:30 AM ISTUpdated : Apr 07, 2025, 05:24 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

‘ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ನೀಟ್‌ ಪರೀಕ್ಷೆಯನ್ನು ಬಲವಂತವಾಗಿ ಹೇರುತ್ತಿದೆ’ ಎಂದು ಕೂಗೆಬ್ಬಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ

ರಾಮೇಶ್ವರಂ :  ‘ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. ನೀಟ್‌ ಪರೀಕ್ಷೆಯನ್ನು ಬಲವಂತವಾಗಿ ಹೇರುತ್ತಿದೆ’ ಎಂದು ಕೂಗೆಬ್ಬಿಸಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ಡಿಎಂಕೆ ಜನಪ್ರತಿನಿಧಿಗಳು ಕನಿಷ್ಠ ಪಕ್ಷ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ’ ಎಂದು ತಿವಿದಿದ್ದಾರೆ. ಅಲ್ಲದೆ, ‘ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಿ’ ಎಂದು ಸ್ಟಾಲಿನ್‌ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ರಾಮನವಮಿಯ ಸಂದರ್ಭದಲ್ಲಿ ತಮಿಳುನಾಡಿನ ಒಟ್ಟು 8,300 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಪಾಂಬನ್‌ ಸೇತುವೆಯನ್ನು ರಾಷ್ಟ್ರಕ್ಕೆ ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಮೋದಿ,

ಭಾನುವಾರ ತಮಿಳು ಭಾಷೆ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ‘ತಮಿಳು ಭಾಷೆ, ಪರಂಪರೆಯನ್ನು ಜಗತ್ತಿನ ಮೂಲೆ ಮೂಲೆಗಳಿಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದರು.

ಇದೇ ವೇಳೆ ಡಿಎಂಕೆ ಜನಪ್ರತಿನಿಧಿಗಳನ್ನು ಅವರ ಹೆಸರೆತ್ತದೇ ತರಾಟೆಗೆ ತೆಗೆದುಕೊಂಡ ಮೋದಿ, ‘ನನಗೆ ತಮಿಳುನಾಡಿನ ನಾಯಕರ ಪತ್ರಗಳು ಬರುತ್ತವೆ. ಆದರೆ ಅವುಗಳಲ್ಲಿನ ಸಹಿ ತಮಿಳಿನಲ್ಲಿ ಇರುವುದಿಲ್ಲ. ಕನಿಷ್ಠ ಪಕ್ಷ ನಿಮ್ಮ ಸಹಿಯನ್ನಾದರೂ ತಮಿಳಿನಲ್ಲಿ ಮಾಡಿ’ ಎಂದು ಕಿಚಾಯಿಸಿದರು.

ಇದಲ್ಲದೆ, ‘ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ತಮಿಳು ಮಾಧ್ಯಮದಲ್ಲಿ ವೈದ್ಯಕೀಯ ಬೋಧನೆ ಮಾಡಬೇಕು’ಎಂದು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದರು.

ಇಂಗ್ಲಿಷಲ್ಲೂ ಮೋದಿ ಭಾಷಣ!:

ಸಾಮಾನ್ಯವಾಗಿ ಹಿಂದಿಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದಿ ಹೇರಿಕೆ ವಿವಾದದ ನಡುವೆ ರಾಮೇಶ್ವರದಲ್ಲಿ ಭಾನುವಾರ ಹಿಂದಿ ಜತೆಗೆ ಇಂಗ್ಲಿಷ್‌ನಲ್ಲೂ ಭಾಷಣ ಮಾಡಿ ಗಮನ ಸೆಳೆದರು. ಅವರ ಭಾಷಣವನ್ನು ತಮಿಳಿಗೆ ತರ್ಜುಮೆಯನ್ನೂ ಮಾಡಲಾಯಿತು.

ಇತ್ತೀಚೆಗೆ ತಮಿಳುನಾಡಿನ ಡಿಎಂಕೆ ಸರ್ಕಾರ. ‘ಕೇಂದ್ರ ಸರ್ಕಾರ ಶಿಕ್ಷಣ ಹಾಗೂ ಆಡಳಿತದಲ್ಲಿ ಹಿಂದಿ ಹೇರಿಕೆ ಮಾಡುತ್ತಿದೆ’ ಎಂದು ರಾಜ್ಯದಲ್ಲಿ ದೊಡ್ಡ ಆಂದೋಲನವನ್ನೇ ನಡೆಸುತ್ತಿದೆ.

ಕೇಂದ್ರ ಸರ್ಕಾರ ತಮಿಳುನಾಡಿನ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದ ಸ್ಟಾಲಿನ್‌

ಇದಕ್ಕೆ ತಿರುಗೇಟು ಎಂಬಂತೆ ಭಾನುವಾರ ಕಾರ್ಯಕ್ರಮದ ವೇಳೆ ಹಿಂದಿ-ಇಂಗ್ಲೀಷ್‌ನಲ್ಲಿ ಮೋದಿ ಮಾತು

ತನಗೆ ತಮಿಳ್ನಾಡಿಂದ ಬರುವ ಯಾವುದೇ ಪತ್ರದಲ್ಲೂ ನಾಯಕರ ಸಹಿ ತಮಿಳಲ್ಲಿ ಇರಲ್ಲ ಎಂದು ಚಾಟಿ

ಬಡ ಮಕ್ಕಳಿಗೆ ಅನುಕೂಲ ಮಾಡಲು ತಮಿಳಲ್ಲೇ ವೈದ್ಯಕೀಯ ಶಿಕ್ಷಣ ನೀಡುವಂತೆ ಡಿಎಂಕೆಗೆ ಸವಾಲ್‌

ತಮಿಳು ಭಾಷೆ, ಪರಂಪರೆ ಜಗತ್ತಿನ ಮೂಲೆ ಮೂಲೆಗೆ ಕೊಂಡೊಯ್ಯುವ ಕೇಂದ್ರದ ಪ್ರಯತ್ನ ಎಂದು ಮಾಹಿತಿ

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ