ಖಾಸಗೀಕರಣ ಆತಂಕ ಬೇಡ : ಇಸ್ರೋ ನೌಕರರಿಗೆ ಅಧ್ಯಕ್ಷ ಅಭಯ

KannadaprabhaNewsNetwork |  
Published : Sep 08, 2026, 02:15 AM IST
Narayanan

ಸಾರಾಂಶ

‘ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸರ್ಕಾರಿ ಸಂಸ್ಥೆಯಾಗಿಯೇ ಉಳಿಯುತ್ತದೆ. ಅದರ ಖಾಸಗೀಕರಣ ಸಂಪೂರ್ಣ ಸುಳ್ಳು. ಈ ಬಗ್ಗೆ ನೌಕರರ ಜತೆ ಮಾತನಾಡುತ್ತೇವೆ’ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್‌ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

 ಬೆಂಗಳೂರು : ‘ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸರ್ಕಾರಿ ಸಂಸ್ಥೆಯಾಗಿಯೇ ಉಳಿಯುತ್ತದೆ. ಅದರ ಖಾಸಗೀಕರಣ ಸಂಪೂರ್ಣ ಸುಳ್ಳು. ಈ ಬಗ್ಗೆ ನೌಕರರ ಜತೆ ಮಾತನಾಡುತ್ತೇವೆ’ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್‌ ಸೋಮವಾರ ಸ್ಪಷ್ಟನೆ ನೀಡಿದ್ದಾರೆ.

ವದಂತಿಗಳಿಗೆ ಸತತ 2ನೇ ದಿನವೂ ತೆರೆ ಎಳೆಯಲು ಇಸ್ರೋ ಪ್ರಯತ್ನ

ಈ ಮೂಲಕ ಸಂಸ್ಥೆಯ ಖಾಸಗೀಕರಣದ ಕುರಿತು ಎದ್ದಿರುವ ವದಂತಿಗಳಿಗೆ ಸತತ 2ನೇ ದಿನವೂ ತೆರೆ ಎಳೆಯಲು ಇಸ್ರೋ ಪ್ರಯತ್ನ ಮಾಡಿದೆ.. ಇಸ್ರೋದ ಚಟುವಟಿಕೆಗಳನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವ ಪ್ರಸ್ತಾವನೆಯ ಕುರಿತು ಅಧಿಕೃತ ಸ್ಪಷ್ಟನೆ ಕೋರಿ, ಅಲ್ಲಿನ 9 ನೌಕರ ಸಂಘಗಳು ಸೆ.4ರಂದು ಅಧ್ಯಕ್ಷರಿಗೆ ಪತ್ರ ಬರೆದಿದ್ದವು.

ದೇಶದ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಿರುವ 56 ಉಪಗ್ರಹಗಳು ಕಕ್ಷೆಯಲ್ಲಿ

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನಾರಾಯಣನ್‌, ‘ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಸುಮಾರು 64-65 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಪ್ರಸ್ತುತ ದೇಶದ ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಿರುವ 56 ಉಪಗ್ರಹಗಳು ಕಕ್ಷೆಯಲ್ಲಿವೆ. ಆದರೆ, ಇನ್ನೂ ಹೆಚ್ಚಿನ ಉಪಗ್ರಹಗಳ ಅಗತ್ಯವಿದೆ. ಅದರನ್ವಯ ನಾವು ಖಾಸಗಿ ವಲಯ ಹಾಗೂ ಸ್ಟಾರ್ಟಪ್ ಕಂಪನಿಗಳಿಗೆ ಬೆಂಬಲ ನೀಡುವ ಮೂಲಕ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು (ಇಕೋಸಿಸ್ಟಂ) ವೃದ್ಧಿಸಬೇಕಾಗಿದೆ.

ದೇಶದ ಬಾಹ್ಯಾಕಾಶ ಆರ್ಥಿಕತೆಯೂ ಬೆಳೆಯಬೇಕಿದೆ. ಆದರೆ ಇಸ್ರೋ ಖಾಸಗೀಕರಣಗೊಳ್ಳುವುದಿಲ್ಲ. ಅದು ಸರ್ಕಾರಿ ಸಂಸ್ಥೆಯಾಗಿಯೇ ಉಳಿಯಲಿದೆ’ ಎಂದು ಸ್ಪಷ್ಟಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಪೋರ್ನೋಗ್ರಫಿಗೆ ಸಕ್ರಮಕ್ಕೆ ಉಕ್ರೇನ್‌ ಚಿಂತನೆ
ಜೈಲಲ್ಲಿದ್ರೂ ಮರಾಠಿ ಬರಲಿಲ್ಲ : ಸಂಜಯ ದತ್ ಹೇಳಿಕೆ ವಿವಾದ