ತಿರುಮಲ: ಭಕ್ತರು ನಿಂತಲ್ಲೇ ಬರುತ್ತೆ ಪ್ರಸಾದ

KannadaprabhaNewsNetwork |  
Published : Aug 08, 2026, 03:00 AM IST
TTD

ಸಾರಾಂಶ

ಪ್ರತಿದಿನ ಲಕ್ಷಾಂತರ ಭಕ್ತರು ತಿರುಮಲಕ್ಕೆ ದರ್ಶನ ಪಡೆಯಲು ಆಗಮಿಸುತ್ತಿರುವುದರಿಂದ, ದರ್ಶನಕ್ಕೆ ಸರದಿ ಸಾಲಲ್ಲಿ ನಿಲ್ಲುವ ಭಕ್ತರಿಗೆ ಪ್ರಸಾದ ವಿತರಣೆ ಪ್ರಕ್ರಿಯೆ ಸುಲಭಗೊಳಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಹೊಸ ಐಡಿಯಾ ಜಾರಿಗೆ ತಂದಿದೆ. ಪ್ರಸಾದ (ಊಟ) ಕೌಂಟರ್‌ನಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಭಕ್ತರಿಗೆ ಪ್ರಸಾದವನ್ನು ತ್ವರಿತವಾಗಿ ತಲುಪಿಸಲು ‘ಮೂವಿಂಗ್-ಟೇಬಲ್’ ವ್ಯವಸ್ಥೆ ಪರಿಚಯಿಸಿದೆ.

ತಿರುಮಲ: ಪ್ರತಿದಿನ ಲಕ್ಷಾಂತರ ಭಕ್ತರು ತಿರುಮಲಕ್ಕೆ ದರ್ಶನ ಪಡೆಯಲು ಆಗಮಿಸುತ್ತಿರುವುದರಿಂದ, ದರ್ಶನಕ್ಕೆ ಸರದಿ ಸಾಲಲ್ಲಿ ನಿಲ್ಲುವ ಭಕ್ತರಿಗೆ ಪ್ರಸಾದ ವಿತರಣೆ ಪ್ರಕ್ರಿಯೆ ಸುಲಭಗೊಳಿಸಲು ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ಹೊಸ ಐಡಿಯಾ ಜಾರಿಗೆ ತಂದಿದೆ. ಪ್ರಸಾದ (ಊಟ) ಕೌಂಟರ್‌ನಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಮತ್ತು ಭಕ್ತರಿಗೆ ಪ್ರಸಾದವನ್ನು ತ್ವರಿತವಾಗಿ ತಲುಪಿಸಲು ‘ಮೂವಿಂಗ್-ಟೇಬಲ್’ ವ್ಯವಸ್ಥೆ ಪರಿಚಯಿಸಿದೆ.

ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಈ ಯೋಜನೆ

ಸುಮಾರು 10 ಲಕ್ಷ ರು. ವೆಚ್ಚದಲ್ಲಿ ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ, 7 ಮೀಟರ್ ಉದ್ದದ ಮೇಜು ಕನ್ವೇಯರ್ ಬೆಲ್ಟ್‌ನಂತೆ ನಿರಂತರವಾಗಿ ಚಲಿಸುತ್ತದೆ. ಸಿಬ್ಬಂದಿ ಪ್ರಸಾದ ತಟ್ಟೆಗಳನ್ನು ಅದರ ಮೇಲೆ ಇರಿಸಿದ ನಂತರ, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ಸುಲಭವಾಗಿ ತಾವು ನಿಂತಲ್ಲೇ ಪ್ರಸಾದ ಪಡೆಯಬಹುದು.

ಯಶಸ್ಸಿನ ನಂತರ, ಟಿಟಿಡಿ ಈ ಮೂವಿಂಗ್-ಟೇಬಲ್ ವ್ಯವಸ್ಥೆ

ಮೊದಲು ಇದರ ಪ್ರಯೋಗಗ ನಡೆಸಲಾಗಿತ್ತು. ಇದರ ಯಶಸ್ಸಿನ ನಂತರ, ಟಿಟಿಡಿ ಈ ಮೂವಿಂಗ್-ಟೇಬಲ್ ವ್ಯವಸ್ಥೆಯನ್ನು ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್‌ ಹಾಗೂ ಮುಖ್ಯ ಸರತಿ ಸಾಲುಗಳಿಗೆ ವಿಸ್ತರಿಸಲು ನಿರ್ಧರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಚ್ಛೇದನ ಅರ್ಜಿ ಹಿಂಪಡೆದ ವಿಜಯ್‌ ಪತ್ನಿ ಸಂಗೀತಾ
ಜಿರಳೆ ಪಾರ್ಟಿಯಿಂದ ‘ಜನ ಏನ್‌ ಹೇಳ್ತಾರೆ’ ಅಭಿಯಾನ