ತನಗಿಂತಲೂ ಸುಂದರಿ ಎಂದು 6ರ ಬಾಲಕಿಯ ಕೊಂದ ಮಹಿಳೆ!

KannadaprabhaNewsNetwork |  
Published : Dec 04, 2025, 03:15 AM IST
crime arrest

ಸಾರಾಂಶ

ತನಗಿಂತ ಸುಂದರವಾಗಿದ್ದಾಳೆಂದು 6 ವರ್ಷದ ಸೊಸೆಯ ಮೇಲೆ ಮತ್ಸರ ಮೂಡಿಸಿಕೊಂಡ ಮಹಿಳೆಯೊಬ್ಬಳು, ಆಕೆಯನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಹರ್ಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ಪಾಣಿಪತ್‌: ತನಗಿಂತ ಸುಂದರವಾಗಿದ್ದಾಳೆಂದು 6 ವರ್ಷದ ಸೊಸೆಯ ಮೇಲೆ ಮತ್ಸರ ಮೂಡಿಸಿಕೊಂಡ ಮಹಿಳೆಯೊಬ್ಬಳು, ಆಕೆಯನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಹರ್ಯಾಣದ ಪಾಣಿಪತ್‌ನಲ್ಲಿ ನಡೆದಿದೆ.

3 ಮಕ್ಕಳನ್ನು ಕೊಲೆ ಮಾಡಿದ್ದಳು

ಜತೆಗೆ, ಆರೋಪಿ ಪೂನಂ ಈ ಮೊದಲು ತನ್ನ ಮಗ ಸೇರಿ 3 ಮಕ್ಕಳನ್ನು ಕೊಲೆ ಮಾಡಿದ್ದಳು ಎಂದೂ ತಿಳಿದುಬಂದಿದೆ. ಕಾರ್ಯಕ್ರಮಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಪುಟ್ಟ ವಿಧಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಹುಡುಕಿ ಹೊರಟ ಅಜ್ಜಿಗೆ ಮೊದಲ ಮಹಡಿಯಲ್ಲಿದ್ದ ಉಗ್ರಾಣದಲ್ಲಿ ನೀರಿನ ಟಬ್‌ನಲ್ಲಿ ಮುಳುಗಿದ್ದ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಅದಾಗಲೇ ಮೃತಪಟ್ಟಿದ್ದಳು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗಿಳಿದಿದ್ದಾರೆ.

ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ  ಪೂನಂ

ವಿಚಾರಣೆ ವೇಳೆ ಪೂನಂ, 2 ವರ್ಷದ ಹಿಂದೆಯೇ ತನಗಿಂತ ಸುಂದರವಾಗಿದ್ದ ಇಬ್ಬರು ಹುಡುಗಿಯರನ್ನು ಕೊಂದಿದ್ದಾಗಿ ಹಾಗೂ ಈ ಬಗ್ಗೆ ಯಾರಿಗೂ ಸಂಶಯ ಬಾರದಿರಲಿ ಎಂದು ಮಗನನ್ನೂ ನೀರಲ್ಲಿ ಮುಳುಗಿಸಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ನೀಟ್‌, ಅಯೋಧ್ಯೆ ವಿವಾದಕ್ಕೆಸೋಮವಾರವೂ ಕಲಾಪ ಬಲಿ
ನನ್ನ ಪುತ್ರಿ ದತ್ತು ತೆಗೆದುಕೊಳ್ಳಿ ; ಮೋದಿಗೆ ರುಚಿತಾ ತಾಯಿ ಕರೆ