ಶರ್ಮಿಳಾ ಪಕ್ಷ ಕಾಂಗ್ರೆಸ್ಸಲ್ಲಿ ವಿಲೀನ: ಇಂದು ಘೋಷಣೆ ಸಾಧ್ಯತೆ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ರಾಹುಲ್‌, ಖರ್ಗೆ ಜತೆ ಇಂದು ಶರ್ಮಿಳಾ ಮಾತುಕತೆ ನಡೆಸಲಿದ್ದು, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸ್ಥಾಪಕ ಜಗನ್‌ ಮೋಹನ್‌ ರೆಡ್ಡಿ ಸೋದರಿಗೆ ರಾಷ್ಟ್ರಮಟ್ಟದಲ್ಲಿ ಸ್ಥಾನಮಾನ ಸಾಧ್ಯತೆಯಿದೆ ಎನ್ನಲಾಗಿದೆ.

ಹೈದರಾಬಾದ್‌: ಜ.25ರಿಂದ 60 ದಿನಗಳ ಕಾಲ ಮಹಾ ಸಂಪರ್ಕ ಅಭಿಯಾನ ನಡೆಸಲು ಬಿಜೆಪಿ ಉದ್ದೇಶಿಸಿದ್ದು, ಅದರ ಭಾಗವಾಗಿ ಅಯೋಧ್ಯೆಗೆ ಪ್ರತಿದಿನ 35 ರೈಲುಗಳ ಸಂಚಾರ ನಡೆಸುವಂತೆ ಮನವಿ ಮಾಡಲಾಗುವುದು. ಅಲ್ಲದೆ ಪ್ರತಿದಿನ 50 ಸಾವಿರ ಜನರಿಗೆ ದರ್ಶನ ಮಾಡಿಸಲು ಪಣತೊಡಬೇಕು. ಪ್ರಯಾಣ ವೆಚ್ಚ ಭಕ್ತರದ್ದು, ಅನುಕೂಲ ಕಲ್ಪಿಸುವ ಹೊಣೆ ಬಿಜೆಪಿಗರದ್ದು ಎಂಬ ಸಹಕಾರ ತತ್ವದ ಮೂಲಕ ಹೆಚ್ಚು ಜನರಿಗೆ ರಾಮನ ದರ್ಶನ ಮಾಡಿಸಲು ಬಿಜೆಪಿ ನಿರ್ಣಯ ತೆಗೆದುಕೊಂಡಿದೆ. ಮಂಗಳವಾರ ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಹೋದರಿ ಹಾಗೂ ವೈಎಸ್‌ಆರ್‌ ತೆಲಂಗಾಣ ಸಂಸ್ಥಾಪಕಿ ವೈ.ಎಸ್‌. ಶರ್ಮಿಳಾ ಅಧ್ಯಕ್ಷತೆಯ ವೈಎಸ್ಆರ್‌ ತೆಲಂಗಾಣ ಪಕ್ಷವು ಕಾಂಗ್ರೆಸ್‌ನಲ್ಲಿ ವಿಲೀನವಾಗುವ ಸಾಧ್ಯತೆ ಇದ್ದು, ಈ ಕುರಿತು ಬುಧವಾರ ಘೋಷಣೆ ಆಗುವ ನಿರೀಕ್ಷೆಯಿದೆ.

ಮಂಗಳವಾರ ಶರ್ಮಿಳಾ ಅಧ್ಯಕ್ಷತೆಯಲ್ಲಿ ಪಕ್ಷದ ಮಹತ್ವದ ಸಭೆ ನಡೆದಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ ‘ಒಂದೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ದಯವಿಟ್ಟು ತಾಳ್ಮೆಯಿಂದಿರಿ’ ಎಂದರು.

ಶರ್ಮಿಳಾ ಬುಧವಾರ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ನಾಯಕರನ್ನು ಶರ್ಮಿಳಾ ಭೇಟಿಯಾಗಲಿದ್ದಾರೆ. ಬಳಿಕ ಪಕ್ಷ ವಿಲೀನದ ಕುರಿತು ನಿರ್ಣಾಯಕ ಘೋಷಣೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ವಿಲೀನವು ಮಹತ್ವದ್ದಾಗಿದೆ.

ಇನ್ನು ಪಕ್ಷ ವಿಲೀನದ ಬಳಿಕ ಶರ್ಮಿಳಾ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನಲ್ಲಿ ಸ್ಥಾನ ನೀಡಲಾಗುವುದು ಎನ್ನಲಾಗಿದೆ. ಇತ್ತೀಚೆಗೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ ಶರ್ಮಿಳಾ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.ಜಾರ್ಖಂಡ್‌ ಸಿಎಂ ಬದಲು ವದಂತಿ: ಇಂದು ಜೆಎಂಎಂ ಮೈತ್ರಿಕೂಟದ ಸಭೆರಾಂಚಿ: ಭ್ರಷ್ಟಾಚಾರ ಆರೋಪ ಹೊತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಶೀಘ್ರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳ ನಡುವೆಯೇ ಬುಧವಾರ ಆಡಳಿತ ಮೈತ್ರಕೂಟದ ಶಾಸಕರ ಸಭೆ ಕರೆಯಲಾಗಿದೆ. ತಪ್ಪದೇ ಎಲ್ಲಾ ಶಾಸಕರು ಸಂಜೆ 4.30ಕ್ಕೆ ಮುಖ್ಯಮಂತ್ರಿ ನಿವಾಸದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಬೇಕು ಎಂದು ಸೂಚಿಸಲಾಗಿದೆ. ಸೊರೇನ್‌ ಅವರ ವಿರುದ್ಧ ಇ.ಡಿ. ಸಮನ್ಸ್‌ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ರಾಜಕೀಯ ನಿರ್ಧಾರಗಳ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೇಮಂತ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪತ್ನಿಯನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂದು ಬಿಜೆಪಿ ಸೋಮವಾರ ಹೇಳಿತ್ತು. ಈ ನಡುವೆ, ಪತ್ನಿಗೆ ಅಧಿಕಾರ ಹಸ್ತಾಂತರ ಬರೀ ಊಹಾಪೋಹ ಎಂದು ಹೇಮಂತ್‌ ಸ್ಪಷ್ಟಪಡಿಸಿದ್ದಾರೆ.

Share this article