ಕನ್ನಡಪ್ರಭ ವಾರ್ತೆ ಕೋಲಾರಕ್ಷಯರೋಗ (ಟಿಬಿ) ಮುಕ್ತ ಕೋಲಾರ ಜಿಲ್ಲೆಗಾಗಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ "ನೂರು ದಿನಗಳ ಜಾಗೃತಿ ಅಭಿಯಾನ "ಕ್ಕೆ ಚಾಲನೆ ನೀಡಲಾಯಿತು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ ’ಆರೋಗ್ಯದ ಬಗ್ಗೆ ಇರಲಿ ಗಮನ- ಟಿಬಿ ಮುಕ್ತ ಭಾರತ ಅಭಿಯಾನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಬಿಯ ಪರಿಣಾಮ, ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ತಿಳಿಸಿಕೊಡಲಾಯಿತು. ಮುಂದಿನ ೧೦೦ ದಿನಗಳಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಶಪಥವನ್ನೂ ಮಾಡಲಾಯಿತು.100 ದಿನಗಳ ಕಾರ್ಯಕ್ರಮ
ಕ್ಷಯ ಶೂನ್ಯಕ್ಕೆ ತರಬೇಕು
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ. ಶ್ರೀನಿವಾಸ್ ಮಾತನಾಡಿ, ’೨೦೦೫-೦೬ರಿಂದ ಒಂದು ಲಕ್ಷಕ್ಕೆ ೨೦೪ ಕ್ಷಯ ರೋಗದ ಪ್ರಕರಣ ಪತ್ತೆ ಹಚ್ಚುತ್ತಿದ್ದೆವು. ಈಗ ಅಂತಹ ರೋಗಿಗಳ ಪ್ರಮಾಣವನ್ನು ೫೦ಕ್ಕಿಂತ ಕಡಿಮೆಗೆ ತರಬೇಕು, ಶೂನ್ಯಕ್ಕೆ ತಂದು ದೇಶವನ್ನು ಟಿಬಿ ಮುಕ್ತ ಮಾಡಬೇಕೆಂಬ ಗುರಿ ಹೊಂದಲಾಗಿದೆ ಎಂದು ಹೇಳಿದರು.ಸೌಲಭ್ಯ ಕಲ್ಪಿಸಬೇಕು’ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ೧೨೦೨ ಪ್ರಕರಣ ಪತ್ತೆ ಹಚ್ಚಬೇಕು ಎಂದು ಗುರಿ ನೀಡಲಾಗಿತ್ತು. ಉಳಿದದ್ದನ್ನು ಈ ೧೦೦ ದಿನಗಳಲ್ಲಿ ಮಾಡಬೇಕು. ಎಲ್ಲ ಗ್ರಾಮಗಳಿಗೂ ಕಡ್ಡಾಯವಾಗಿ ಭೇಟಿ ನೀಡಬೇಕು. ರೋಗಿಗಳನ್ನು ಪತ್ತೆ ಹಚ್ಚಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಬೇಕು’ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರಚಿಕ್ಸಿತೆ ವೈದ್ಯರಾದ ಮಮತ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ಎನ್.ಟಿ.ಇ.ಪಿ.ಬಿ ಸಿಬ್ಬಂದಿ ಅಮರೇಶ್, ಮದುಕೇಶ್, ಮಹೇಶ್, ವಿನಯಾ ಇದ್ದರು.