ಶೀಘ್ರ ಹೌಸಿಂಗ್ ಫಾರ್‌ ಆಲ್ ಯೋಜನೆ ಫಲಾನುಭವಿಗಳಿಗೆ ಸೂರು : ಶಾಸಕ ಕೆ.ಎಂ ಶಿವಲಿಂಗೇಗೌಡ

KannadaprabhaNewsNetwork |  
Published : Feb 04, 2025, 12:34 AM ISTUpdated : Feb 04, 2025, 11:37 AM IST
ಹೌಸಿಂಗ್ ಫಾರ್ ಆಲ್ ಯೋಜನೆ ಆಯ್ಕೆಯಾಗಿರುವ ಫಲಾನುಭವಿಗಳು ತಮ್ಮ ಪಾಲಿನ ಒಂದು ಲಕ್ಷದ ಹಣ ಕಟ್ಟಲಾಗದೆ ಪರಿತಪಿಸುತ್ತಿರುವವರಿಗೆ ಎಲ್ ಎಲ್ ಎಫ್ ಸಿ ಬ್ಯಾಂಕ್ ವತಿಯಿಂದ ಸಾಲ ಕೊಡಿಸುವ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು | Kannada Prabha

ಸಾರಾಂಶ

ಅಧಿಕಾರ ಶಾಶ್ವತವಲ್ಲ, ತಮಗೆ ಸಿಕ್ಕ ಅವಕಾಶದ ಸಂದರ್ಭದಲ್ಲಿ ಮಾಡುವ ಜನಪರ ಕೆಲಸ ಕಾರ್ಯಗಳೇ ಶಾಶ್ವತ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

  ಅರಸೀಕೆರೆ : ಅಧಿಕಾರ ಶಾಶ್ವತವಲ್ಲ, ತಮಗೆ ಸಿಕ್ಕ ಅವಕಾಶದ ಸಂದರ್ಭದಲ್ಲಿ ಮಾಡುವ ಜನಪರ ಕೆಲಸ ಕಾರ್ಯಗಳೇ ಶಾಶ್ವತ ಎಂದು ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ಹೌಸಿಂಗ್ ಫಾರ್‌ ಆಲ್ ಯೋಜನೆ ಆಯ್ಕೆಯಾಗಿರುವ ಫಲಾನುಭವಿಗಳು ತಮ್ಮ ಪಾಲಿನ ಒಂದು ಲಕ್ಷದ ಹಣ ಕಟ್ಟಲಾಗದೆ ಪರಿತಪಿಸುತ್ತಿರುವವರಿಗೆ ಎಲ್‌ಎಲ್‌ಎಫ್‌ಸಿ ಬ್ಯಾಂಕ್ ವತಿಯಿಂದ ಸಾಲ ಕೊಡಿಸುವ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ನಗರದಲ್ಲಿ ಹತ್ತಾರು ವರ್ಷಗಳಿಂದ ವಾಸವಿದ್ದು ಸ್ವಂತ ಮನೆ ಕನಸು ಕಾಣುತ್ತಿದ್ದ ವಸತಿರಹಿತರಿಗೆ ಹೌಸಿಂಗ್ ಫಾರ್ ಆಲ್ ಯೋಜನೆ ವರದಾನವಾಗಿದ್ದರೂ ಈ ಜನಪರ ಕಾಮಗಾರಿಗೂ ಹಲವು ವಿಘ್ನಗಳು ಹಾಗೂ ಅಡೆತಡೆಗಳು ಎದುರಾಗುತ್ತಾ ಬಂದಿದ್ದು, ಈಗ ಆ ಎಲ್ಲವನ್ನು ದಾಟಿ ಮೊದಲ ಹಂತದಲ್ಲಿ 298 ಫಲಾನುಭವಿಗಳಿಗೆ ಮುಂದಿನ ಒಂದೂವರೆ ತಿಂಗಳ ಒಳಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ನೀಡಿದರೆ ಸಾಲದು, ಇಲ್ಲಿ ವಾಸಿಸುವವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಟ್ಟಾಗ ಮಾತ್ರ ಇದೊಂದು ಮಾದರಿ ಬಡಾವಣೆಯಾಗಿ ನಿರ್ಮಾಣವಾಗುತ್ತದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೂ ಹಾಗೂ ವಸತಿ ಸಚಿವರಾದ ಜಮೀರ್ ಖಾನ್ ಅವರೊಂದಿಗೂ ಮಾತನಾಡಿ, 18 ಕೋಟಿ ವಿಶೇಷ ಅನುದಾನ ತಂದಿದ್ದು, ಈ ಅನುದಾನದ ಮೂಲಕ ನೂತನ ಬಡಾವಣೆಯಲ್ಲಿ ರಸ್ತೆ, ಚರಂಡಿ ಮತ್ತು ಒಳಚರಂಡಿ ಕಾಮಗಾರಿಗಳು ಸಹ ಮಾಡಿಕೊಡಲಾಗುತ್ತಿದೆ. ದಶಕಗಳಿಂದ ಸ್ವಂತ ಮನೆ ಮಾಡಿಕೊಳ್ಳಬೇಕೆಂದು ಕನಸು ಕಾಣುತ್ತಿದ್ದ ಫಲಾನುಭವಿಗಳು ಹೊಸ ಮನೆಯೊಂದಿಗೆ ಹೊಸ ಬದುಕು ರೂಪಿಸಿಕೊಡುವ ಹಂಬಲ ನನ್ನದು ಎಂದು ಭಾವುಕರಾಗಿ ನುಡಿದರು.

ನಗರಸಭೆ ಅಧ್ಯಕ್ಷ ಎಂ ಸಮೀವುಲ್ಲಾ ಮಾತನಾಡಿ, ಶಾಸಕ ಶಿವಲಿಂಗೇಗೌಡರ ವಿಶೇಷ ಆಸಕ್ತಿ ಮತ್ತು ಇಚ್ಛಾಶಕ್ತಿಯಿಂದಾಗಿಯೇ ಹೌಸಿಂಗ್ ಫಾರ್ ಆಲ್ ಯೋಜನೆ ಅಡಿ ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಿಸಲಾಗುತ್ತಿದೆಯಲ್ಲದೆ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಮನೆಗಳು ತಲುಪುತ್ತಿದೆ ಒಂದೇ ಒಂದು ಮನೆ ಸಹ ಫಲಾನುಭವಿ ಅಲ್ಲದವರ ಪಾಲಾಗುತ್ತಿಲ್ಲ. ಅಷ್ಟು ಪಾರದರ್ಶಕವಾಗಿ ಶಾಸಕರೇ ಖುದ್ದು ವಾರ್ಡ್‌ವಾರು ಸಭೆ ನಡೆಸಿ ಜನರ ಸಮ್ಮುಖದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ನಗರಸಭೆಯ ಪೌರಾಯುಕ್ತ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಜಿ.ಟಿ. ಗಣೇಶ್, ನಗರಸಭೆ ಸದಸ್ಯರಾದ ಕೇಬಲ್ ರಾಜು, ಅನ್ನಪೂರ್ಣ, ಶಮಾಬಾನು, ಭಾಸ್ಕರ್‌, ನಗರಸಭೆಯ ನಾಮನಿರ್ದೇಶನ ಸದಸ್ಯರಾದ ಕಿರಣ್ ಕುಮಾರ್, ಸಂತೋಷ್, ಮಾರುತಿ, ಆಶ್ರಯ ಸಮಿತಿ ಸದಸ್ಯ ಅಮ್ಜದ್ ಪಾಂಡು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ