ವೈಜ್ಞಾನಿಕ ಮನೋಭಾವ ಅತ್ಯಗತ್ಯ: ರಂಗಪ್ಪ

KannadaprabhaNewsNetwork |  
Published : Feb 24, 2025, 12:32 AM IST
21ಶಿರಾ1: ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಿಆರ್ಪಿ ರಂಗಪ್ಪ ಉದ್ಘಾಟಿಸಿದರು. ವಿಜ್ಞಾನ ಶಿಕ್ಷಕಿ ಭಾಗ್ಯಲಕ್ಷಿö್ಮÃ.ಹೆಚ್, ಮುಖ್ಯ ಶಿಕ್ಷಕಿ ಕೆಂಚಮ್ಮ, ಸೇರಿದಂತೆ ಹಲವರು ಹಾಜರಿದ್ದರು. | Kannada Prabha

ಸಾರಾಂಶ

ಮಕ್ಕಳ ಸರ್ವತೋಮುಖ ಬೆಳವಣಿಗೆಯ ಭಾಗವಾಗಿ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಅತಿ ಮುಖ್ಯ ಎಂದು ಸಿಆರ್‌ಪಿ ರಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಭಾಗವಾಗಿ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಅತಿ ಮುಖ್ಯ ಎಂದು ಸಿಆರ್‌ಪಿ ರಂಗಪ್ಪ ತಿಳಿಸಿದರು.ತಾಲೂಕಿನ ಕೊಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜಿಸಿದ್ದ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಸ್ತು ಪ್ರದರ್ಶನದಲ್ಲಿ ಸ್ವತಃ ಮಕ್ಕಳೇ ವಿಜ್ಞಾನ ಮಾದರಿ ಸಿದ್ಧಪಡಿಸಿ, ಪ್ರದರ್ಶಿಸಿ, ಅವುಗಳ ಬಗ್ಗೆ ವಿವರಣೆ ನೀಡಿದ್ದು ಉತ್ತಮವಾಗಿದ್ದು, ಈ ರೀತಿ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ಮಾಡಿ, ಕ್ರಿಯಾಶೀಲತೆ ತುಂಬಿರುವ ವಿಜ್ಞಾನ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು ಬಿ.ಆರ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳ ಪ್ರತಿಭೆ ಅಗಾಧವಾದುದು, ಅದನ್ನು ಜಾಗೃತಗೊಳಿಸುವ ಕೆಲಸ ನಮ್ಮ ಶಿಕ್ಷಕರು ಮಾಡುತ್ತಿದ್ದು, ಈ ಕಾರ್ಯಕ್ರಮವೇ ಸಾಕ್ಷಿ ಎಂದರು.ಕಾರ್ಯಕ್ರಮದಲ್ಲಿ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನದ ಮಾರ್ಗದರ್ಶಕಿ, ಶಾಲೆಯ ವಿಜ್ಞಾನ ಶಿಕ್ಷಕಿ ಭಾಗ್ಯಲಕ್ಷ್ಮೀ ಎಚ್, ಮುಖ್ಯ ಶಿಕ್ಷಕಿ ಕೆಂಚಮ್ಮ, ಸಹ ಶಿಕ್ಷಕರಾದ ಮಂಜಮ್ಮ ಯು, ನೇತ್ರಾವತಿ, ರೇಣುಕಮ್ಮ, ಸಿ.ಆರ್.ಪಿ ನಾರಾಯಣ ನಾಯ್ಕ, ಸಂಘದ ನಿರ್ದೇಶಕರಾದ ಹಿಮಂತರಾಜು ಎಚ್, ದೇವರಾಜು, ಮಲ್ಲೇಶ್, ಕಲ್ಲಪ್ಪ, ಶ್ರೀಶೈಲ, ಸುರೇಶ್, ಜಯಚಂದ್ರ, ನಾಗರತ್ನ, ಪದ್ಮ, ಗ್ರಾಪಂ ಅಧ್ಯಕ್ಷೆ ಮಂಜುಳ, ಎಸ್‌ಡಿಎಂಸಿ ಅಧ್ಯಕ್ಷೆ ವರಲಕ್ಷ್ಮೀ, ಪಿಡಿಒ ವೆಂಕಟೇಶ್ ಹಾಗೂ ಶಿಕ್ಷಕರಾದ ಸುರೇಶ್, ರಾಮು, ಗಿರೀಶ್, ರಮೇಶ್, ಮಂಜುನಾಥ್, ಮಂಜುಳ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ