ಕನ್ನಡದ ಬೆಳವಣಿಗೆಗೆ ತೋಂಟದ ಶ್ರೀಗಳ ಕೊಡುಗೆ ಅಪಾರ

KannadaprabhaNewsNetwork |  
Published : Feb 24, 2025, 12:32 AM IST
23ಜಿಡಿಜಿ6 | Kannada Prabha

ಸಾರಾಂಶ

ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತ ಗೊಳಿಸುವ ಕೈಂಕರ್ಯಕ್ಕೆ ಮುನ್ನಡಿ ಇಟ್ಟು, ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಪುಸ್ತಕ ಪ್ರಕಟಣೆಯನ್ನು ಪ್ರಾರಂಭಿಸಿ ಮರೆತು ಹೋಗಬಹುದಾದ ಮಹನೀಯರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

ಗದಗ: ತೋಂಟದ ಸಿದ್ಧಲಿಂಗ ಶ್ರೀಗಳು ಗೋಕಾಕ ಚಳವಳಿಗೆ ಸಿಂದಗಿಯಲ್ಲಿ ಮುನ್ನುಡಿ ಬರೆಯುವ ಮೂಲಕ ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತ ಗೊಳಿಸುವ ಕೈಂಕರ್ಯಕ್ಕೆ ಮುನ್ನಡಿ ಇಟ್ಟು, ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಪುಸ್ತಕ ಪ್ರಕಟಣೆಯನ್ನು ಪ್ರಾರಂಭಿಸಿ ಮರೆತು ಹೋಗಬಹುದಾದ ಮಹನೀಯರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದಾರೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು. ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜರುಗಿದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹಾಗೂ ಸದಾನಂದ ಪಿಳ್ಳಿ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಡಾ. ತೋಂಟದ ಸಿದ್ಧಲಿಂಗ ಶ್ರಿಗಳ ಕೊಡುಗೆ ಕುರಿತಾಗಿ ಮಾತನಾಡಿದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ 600ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಮಠವನ್ನು ಜ್ಞಾನ ದಾಸೋಹದ ಕೇಂದ್ರವನ್ನಾಗಿಸಿದರು. ಲೇಖಕರನ್ನು, ಸಂಶೋಧಕರನ್ನು ಪ್ರೋತ್ಸಾಹಿಸಿದರು. ಈ ಕಾರ್ಯದಿಂದಲೇ ಅವರನ್ನು ಪುಸ್ತಕ ಸ್ವಾಮೀಜಿ, ಕನ್ನಡ ಜಗದ್ಗುರು ಎಂದು ಕರೆಯುತ್ತಾರೆ ಎಂದರು.

ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಸದಾನಂದ ಪಿಳ್ಳಿ ಅವರು ಜನಸೇವೆಗೆ ಅರ್ಪಿಸಿಕೊಂಡ ಅಪರೂಪದ ರಾಜಕಾರಣಿ ಆಗಿದ್ದರು. ನಗರಸಭೆಯ ವಿರೋಧ ಪಕ್ಷದ ನಾಯಕರಾಗಿ ಸಮಸ್ಯೆಗಳಿಗೆ ಸ್ಪಂದಿಸಿ ನಗರದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸಮಾಜಮುಖಿ, ಜನಪರ ಕಾಳಜಿಯ ಸದಾನಂದ ಅವರು ತಮ್ಮ ಸೇವೆಯ ಮೂಲಕ ಅಜರಾಮರರಾಗಿದ್ದಾರೆಂದು ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮುಂತಾದವರು ಮಾತನಾಡಿದರು. ಶಿಕ್ಷಣ ಸಂವರ್ಧನೆಗೆ ನೀಡಿದ ಕೊಡುಗೆಯನ್ನು ಅನುಲಕ್ಷಿಸಿ ಪ್ರೊ. ಶಿವಾನಂದ ಪಟ್ಟಣಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ದತ್ತಿದಾನಿಗಳಾದ ಸುರೇಖಾ ಸದಾನಂದ ಪಿಳ್ಳಿ, ಬಸವರಾಜ ಪಿಳ್ಳಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.

ಡಾ. ಅನಂತ ಶಿವಪುರ, ಸಿ.ಕೆ.ಎಚ್. ಶಾಸ್ತ್ರಿ(ಕಡಣಿ), ಡಾ. ಶಿವಪ್ಪ ಕುರಿ, ಜೆ.ಎ. ಪಾಟೀಲ, ಡಾ. ಧನೇಶ ದೇಸಾಯಿ, ಅ.ದ.ಕಟ್ಟಿಮನಿ, ಅಂದಾನೆಪ್ಪ ವಿಭೂತಿ, ಪ್ರ.ತೋ.ನಾರಾಯಣಪುರ, ಯಲ್ಲಪ್ಪ ಹಂದ್ರಾಳ, ಬಿ.ಎಸ್. ಹಿಂಡಿ, ಮಂಜುಳಾ ವೆಂಕಟೇಶಯ್ಯ, ಡಾ. ರಶ್ಮಿ ಅಂಗಡಿ, ಎಸ್.ಎಸ್.ಪಿಳ್ಳೆ, ಪಾರ್ವತಿ ಬೇವಿನಮರದ, ರತ್ನಾ ಪುರಂತ, ಷಡಕ್ಷರಿ ಮೆಣಸಿನಕಾಯಿ, ಸತೀಶಕುಮಾರ ಚನ್ನಪ್ಪಗೌಡರ, ಅಮರೇಶ ರಾಂಪುರ, ಗುರುಪಾದ ಕಟ್ಟಿಮನಿ, ಬಸವರಾಜ ಗಣಪ್ಪನವರ, ಎಸ್.ಪಿ.ಹೊಂಬಳ, ಸಹನಾ ಪಿಳ್ಳಿ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ