ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ನಾಡಿಗೆ ಮಾದರಿ

KannadaprabhaNewsNetwork |  
Published : Feb 13, 2024, 12:50 AM IST
ಪೋಟೊ ಶಿರ್ಷಿಕೆ : 10 ಐಗಳಿ 01 : ಸಮೀಪದ ಕಕಮರಿಯ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ಅಭಿನವ ಗುರುಲಿಂಗ ಜಂಗಮ ಸ್ವಾಮಿಜೀಯವರ ಗುರುವಂದನಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.  | Kannada Prabha

ಸಾರಾಂಶ

ಪೂಜ್ಯರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸುಮಾರು 50 ಮಠಗಳನ್ನು ಕಟ್ಟುವ ಜೊತೆಗೆ ಜನರನ್ನು ಕಟ್ಟುವ ಕಾರ್ಯ ಹಾಗೂ ಒಳ್ಳೆಯ ಸಂಸ್ಕಾರ ಕೊಡುವ ಕಾರ್ಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಐಗಳಿ

ಸಾಧಕರಿಗೆ ಸೇವಾ ರತ್ನಶ್ರೀ ಪ್ರಶಸ್ತಿ ಮತ್ತು ಅಭಿನವ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಭಕ್ತರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳನ್ನ ಆಲಿಸುವ ಒಳ್ಳೆಯ ಕಾರ್ಯ ಮಾಡುತ್ತಿರುವ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ನಾಡಿಗೆ ಮಾದರಿ ಎಂದು ನೇಲೋಗಿಯ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಅವರು ಸಮೀಪದ ಕಕಮರಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಹುಟ್ಟು ಹಬ್ಬ ಹಾಗೂ ಗುರು ವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪೂಜ್ಯರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸುಮಾರು 50 ಮಠಗಳನ್ನು ಕಟ್ಟುವ ಜೊತೆಗೆ ಜನರನ್ನು ಕಟ್ಟುವ ಕಾರ್ಯ ಹಾಗೂ ಒಳ್ಳೆಯ ಸಂಸ್ಕಾರ ಕೊಡುವ ಕಾರ್ಯ ಮಾಡಿದ್ದಾರೆ. ಗಡಿಯಲ್ಲಿ ತ್ರಿವಿಧ ದಾಸೋಹ ಮಾಡಿದ್ದು, ಅದರಲ್ಲಿ ಅಕ್ಷರ ಕ್ರಾಂತಿ ಮಾಡಿ ಕನ್ನಡ ಕಟ್ಟುವ ಹಾಗೂ ಬೆಳೆಸುವ ಕಾರ್ಯ ಮಾಡಿದ್ದಾರೆ. ತಾಯಿ- ತಂದೆ ತಮ್ಮ ಮಕ್ಕಳನ್ನು ಇಂಜನಿಯರ್‌, ವೈದ್ಯರು, ಸೈನಿಕರು, ಶಿಕ್ಷಕರನ್ನಾಗಿ ಮಾಡುತ್ತಾರೆ. ನಾವು ಸ್ವಾಮೀಜಿ ಮಾಡುತ್ತೇವೆ ಎಂದು ಯಾರೂ ಮುಂದೆ ಬರುವದಿಲ್ಲ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕರು ಉನ್ನತ ಹುದ್ದೆಯ ಸೇವೆ ಮಾಡುತ್ತಿದ್ದಾರೆ ಎಂದರು.

ಮನಗೂಳಿಯ ಬಾಬಾ ಹಾಗೂ ವೈದ್ಯರು ಮಾತನಾಡಿದರು. ಸಾಧಕರಿಗೆ ಸೇವಾ ರತ್ನಶ್ರೀ ಹಾಗೂ ಅಭಿನವಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಪೂಜ್ಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಅವರಾದಿ ಮಠದ ಪರ ಮಲ್ಲಿಕಾರ್ಜುನ ಮಹಾರಾಜರು, ತುಲಾಭಾರ ನೆರವೇರಿಸಿದರು. ಅಮ್ಮಾಜೇಶ್ವರಿ ದೇವಿ ಟ್ರಸ್ಟ ಅಧ್ಯಕ್ಷ ಅಪ್ಪುಗೌಡ ಪಾಟೀಲ, ಶ್ರೀಮಠದ ಕಾರ್ಯದರ್ಶಿ ಗಿರೀಶ ಮಹಾರಾಜರು, ಪ್ರಕಾಶ ಪಾಟೀಲ, ಅವಿನಾಶ ಪಾಟೀಲ ಸೇರಿದಂತೆ ಅನೇಕರು ಇದ್ದರು. ನಂತರ ಶಾಲಾ ಮಕ್ಕಳಿಂದ ಪಿರ್ಯಾಮಿಡ್‌ ಜನ ಮನ ಸೆಳೆದರು. ಮುಖ್ಯ ಶಿಕ್ಷಕ ಬಸರಗಿ ಸ್ವಾಗತಿಸಿ ವಂದಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌