ರಾಜ್ಯಲ್ಲಿ ಎಲ್ಲ ಭಾಷಿಕರೂ ಹಬ್ಬದಂತೆ ರಾಜ್ಯೋತ್ಸವ ಆಚರಿಸಬೇಕು

KannadaprabhaNewsNetwork |  
Published : Nov 02, 2025, 02:15 AM IST
1ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಬಂಗಾರಪೇಟೆ ಗಡಿ ಭಾಗದ ತಾಲೂಕಾಗಿದ್ದರೂ ಸಹ ಕನ್ನಡ ಭಾಷೆ ಬೆಳೆವಣಿಗೆಗೆ ಯಾವುದೇ ಧಕ್ಕೆ ಭಾರದಂತೆ ಎಲ್ಲ ಭಾಷಿಗರೂ ಒಂದಾಗಿ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲಾಗಿದೆ ಇಂತಹ ತಾಲೂಕಿನಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಬಿಟ್ಟು ಹೋಗಿರುವವರನ್ನು ಮತ್ತೆ ಪಟ್ಟಣದ ಕಡೆ ಮುಖ ಮಾಡುವಂತೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕರ್ನಾಟದಲ್ಲಿ ಹುಟ್ಟಿ ಬೆಳೆದಿರುವವರು ಹಾಗೂ ಅನ್ಯ ರಾಜ್ಯಗಳಿಂದ ಬಂದು ಇಲ್ಲಿ ವಾಸ ಮಾಡುತ್ತಿರುವ ಎಲ್ಲರೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಮನೆ ಹಬ್ಬದಂತೆ ಆಚರಣೆ ಮಾಡಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಇಲ್ಲಿಯ ಪುರಸಭೆ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಉತ್ಸವ ಅಲ್ಲ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನ ಎಂದರು.

ಬದ್ಧತೆಯ ಆತ್ಮಾವಲೋಕನ

ಇಂತಹದೊಂದು ಕನ್ನಡದ ಕನಸು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಸ್ಮರಿಸುವ ದಿನಕೂಡ ಹೌದು. ಕನ್ನಡ ರಾಜ್ಯೋತ್ಸವ ಎನ್ನುವುದು ನಾಡು ನುಡಿ ಬಗ್ಗೆ ನಮಗಿರುವ ಬದ್ಧತೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವೂ ಹೌದು ಅಂದರು.ಹಿರಿಯರು ಕಟ್ಟಿ ಬೆಳೆಸಿರುವ ಕನ್ನಡವನ್ನು ಬರೀ ನವೆಂಬರ್ ತಿಂಗಳಲ್ಲಿ ಮಾತ್ರ ಆಚರಣೆಗೆ ಸೀಮಿತವಾಗದೆ ಕನ್ನಡವನ್ನು ಉಳಿಸಿ ಬೆಳೆಸುವ ನಮ್ಮ ಬದುಕಿನ ಭಾಗವಾಗಿ ನಿರಂತವಾಗಿ ನಡೆಯುತ್ತಲೇ ಇರಬೇಕು. ೨೫೦೦ ವರ್ಷಗಳ ಇತಿಹಾಸವಿರುವ ಭಾಷೆಯಾಗಿರುವ ಕನ್ನಡ ಕಲಿಯಲು ಸುಲಭವಾಗಿದೆ ಎಂದರು.

ತಾಲೂಕಿನಲ್ಲಿ ಭಾಷಾ ಸಾಮರಸ್ಯ

ನಮ್ಮದು ಗಡಿ ಭಾಗದ ತಾಲೂಕಾಗಿದ್ದರೂ ಸಹ ಕನ್ನಡ ಭಾಷೆ ಬೆಳೆವಣಿಗೆಗೆ ಯಾವುದೇ ಧಕ್ಕೆ ಭಾರದಂತೆ ಎಲ್ಲ ಭಾಷಿಗರೂ ಒಂದಾಗಿ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲಾಗಿದೆ ಇಂತಹ ತಾಲೂಕಿನಲ್ಲಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಬಿಟ್ಟು ಹೋಗಿರುವವರನ್ನು ಮತ್ತೆ ಪಟ್ಟಣದ ಕಡೆ ಮುಖ ಮಾಡುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಕನ್ನಡ ಸಂಘದ ಅಧ್ಯಕ್ಷ ಡಾ.ಪಲ್ಲವಿಮಣಿ ಮಾತನಾಡಿ ಕರ್ನಾಟವು ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿರುವ ರಾಜ್ಯ, ಜಾನಪದ,ಕಲೆ ವಾಸ್ತುಶಿಲ್ಪಗಳ ಮೂಲಕ ಜಗತ್ತಿನ ಶ್ರೇಷ್ಠ ನಾಗರಿಕತೆಗಳ ಸಾಲಿನಲ್ಲಿ ನಿಂತಿರುವ ಭವ್ಯವಾದ ನಾಡು ನಮ್ಮ ಕರುನಾಡು. ಇಂತಹ ರಾಜ್ಯೋತ್ಸವವನ್ನು ಸರಳವಾಗಿ ಆಚರಣೆ ಮಾಡುವ ಬದಲು ಮುಂದಿನ ವರ್ಷ ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಇತರೇ ಭಾಷಿಗರಿಗೆ ಮಾದರಿಯಾಗಬೇಕೆಂದು ಹೇಳಿದರು.ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಕನ್ನಡದಲ್ಲಿ ೧೨೫,೧೨೫ ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ತಹಸೀಲ್ದಾರ್ ಸುಜಾತ,ಪುರಸಭೆ ಅಧ್ಯಕ್ಷ ಗೋವಿಂದ,ಉಪಾಧ್ಯಕ್ಷೆ ಚಂದ್ರವೇಣಿ,ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ,ಶಂಷುದ್ದೀನ್ ಬಾಬು,ತಾಪಂ ಇಒ ರವಿಕುಮಾರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಕಸಾಪ ಅಧ್ಯಕ್ಷ ಆರ್.ಅಶ್ವಥ್,ಅ.ನಾ.ಹರೀಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌