ರಾಜೀವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಡಾನ್-2023

KannadaprabhaNewsNetwork |  
Published : Oct 28, 2023, 01:15 AM IST
26ಎಚ್ಎಸ್ಎನ್5 : ಹಾಸನ ನಗರದ ರಾಜೀವ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಉಡಾನ್್‌-2023 ಕಾರ್ಯಕ್ರಮವನ್ನು ಉದ್ಉ್ಟಿಸುತ್ತಿರುವುದು. | Kannada Prabha

ಸಾರಾಂಶ

"ಉಡಾನ್ ೨೦೨೩ "ರ ಶೀರ್ಷಿಕೆಯ ಅಡಿಯಲ್ಲಿ ರಾಜೀವ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಹಾಸನ "ಉಡಾನ್ ೨೦೨೩ "ರ ಶೀರ್ಷಿಕೆಯ ಅಡಿಯಲ್ಲಿ ರಾಜೀವ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ರಾಜೀವ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಿನಿವರ್ಗೀಸ್ ಹಾಗೂ ಇದರ ಸಂಶೋಧನಾ ಮಾರ್ಗದರ್ಶಕರಾದ ಡಾ. ಚಂದ್ರಶೇಖರ್ ಯು.ಪಿ.ರವರು ಬರೆದಿರುವ ಪುಸ್ತಕವನ್ನು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಂತಹ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ರತ್ನರಾಜೀವ್ ಬಿ.ಎನ್. ಹಾಗೂ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಸಿ.ಬಿ. ವಿಕ್ರಮ್‌ರವರು ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಮಾಡಿ ಪುಸ್ತಕದ ವಿಮರ್ಶಾತ್ಮಕ ಮಾಹಿತಿಯನ್ನು ಹಂಚಿಕೊಂಡಂತಹ ಡಾ. ಸಿ.ಬಿ. ವಿಕ್ರಮ್‌ರವರು ಈ ಪುಸ್ತಕಲ್ಲಿರುವಂತೆ ವೃತ್ತಿಸಾಮರ್ಥ್ಯ ಮತ್ತು ಉತ್ತಮ ನಾಯಕತ್ವದ ಗುಣ ಇದನ್ನು ತಮ್ಮ ವೃತ್ತಿ ಬದುಕಿನಲ್ಲಿ ಅವಡಿಸಿಕೊಳ್ಳಿ ಎಂಬ ಮಾತನ್ನು ಅಲ್ಲಿ ನೆರೆದಿದ್ದ ಎಲ್ಲಾ ಬಿ.ಎಡ್. ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಹಾಗೆಯೇ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ರತ್ನ ರಾಜೀವ್‌ರವರು ಮಾತನಾಡುತ್ತಾ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕಿ ಎಂಬುದಾಗಿ ಮಾರ್ಗದರ್ಶನ ಮಾಡಿದರು. ಡಾ. ಚಂದ್ರಶೇಖರ್ ಯು.ಪಿ. ಅವರು ಮಾಡನಾಡುತ್ತಾ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ತಮ್ಮ ಗುರಿಯೆಡೆಗೆ ಹೆಚ್ಚಿನ ಅವಧಾನವನ್ನು ಕೇಂದ್ರಿಕರಿಸಬೇಕು ಎಂಬುದಾಗಿ ಹೇಳಿದರು. ಪ್ರಾಂಶುಪಾಲರಾದ ಡಾ. ಮಿನಿವರ್ಗೀಸ್‌ ಅವರು ಮಾತನಾಡುತ್ತಾ ವೃತ್ತಿಯಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಮಾದರಿ ವ್ಯಕ್ತಿಗಳಾಗಿ ಜೀವಿಸಿ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ