ಹನ್ಯಾಳು ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಚಂದ್ರು ಹೆಸರಿನಲ್ಲಿ ಸಭಾಭವನ

KannadaprabhaNewsNetwork | Published : Apr 24, 2025 12:05 AM

ಸಾರಾಂಶ

ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿ ನೂತನವಾಗಿ ೩೬ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಪಂ ನೂತನ ಕಟ್ಟಡ ಮತ್ತು ಸಭಾ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಊರಿನಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಜಾಗವೇ ಇರಲಿಲ್ಲ. ದೂರದೃಷ್ಠಿಯಿಂದ ಗ್ರಾಮದಿಂದ ಸ್ವಲ್ಪದೂರದಲ್ಲಿ ನೂತನ ಕಟ್ಟಡ ಆಗಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿಯಾಗಲಿದೆ. ಕಟ್ಟಡ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದಕ್ಕೆ ಎಲ್ಲಾ ಸದಸ್ಯರು, ಪಿಡಿಒ, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಬಹುತೇಕ ಗ್ರಾಮಗಳ ಅಭಿವೃದ್ಧಿ ಬಗ್ಗೆ ಆಯಾ ಗ್ರಾಮಗಳ ಕೆಲವು ಮುಖಂಡರುಗಳೇ ಇಷ್ಟಪಡುವುದಿಲ್ಲ. ಆದರೆ ಹನ್ಯಾಳು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ರಾಮಚಂದ್ರ ಅವರು ಸದಾ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು.ಇಂದು ಅವರಿಲ್ಲ. ಅವರ ಹೆಸರಿನಲ್ಲಿ ಗ್ರಾಪಂ ನೂತನ ಕಟ್ಟಡವನ್ನು ಉದ್ಘಾಟಿಸಲಾಗುತ್ತಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಎ.ಮಂಜು ತಿಳಿಸಿದರು.

ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿ ನೂತನವಾಗಿ ೩೬ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗ್ರಾಪಂ ನೂತನ ಕಟ್ಟಡ ಮತ್ತು ಸಭಾ ಭವನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಊರಿನಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಜಾಗವೇ ಇರಲಿಲ್ಲ. ದೂರದೃಷ್ಠಿಯಿಂದ ಗ್ರಾಮದಿಂದ ಸ್ವಲ್ಪದೂರದಲ್ಲಿ ನೂತನ ಕಟ್ಟಡ ಆಗಿದೆ. ಇದರಿಂದ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿಯಾಗಲಿದೆ. ಕಟ್ಟಡ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇದಕ್ಕೆ ಎಲ್ಲಾ ಸದಸ್ಯರು, ಪಿಡಿಒ, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.ಹನ್ಯಾಳು ನನಗೆ ಜನ್ಮನೀಡಿದ ಭೂಮಿ ಇದು. ಇಡೀ ಗ್ರಾಮದ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಯಾವುದೇ ರೀತಿಯ ಮುಜುಗರ ಇಟ್ಟುಕೊಳ್ಳಬೇಡಿ, ನೀವು ನನಗೆ ಮತ್ತು ಇಲ್ಲಿನ ಗ್ರಾಪಂ ಸದಸ್ಯರುಗಳಿಗೆ ಒಂದೇ ರೀತಿಯ ಮತವನ್ನು ಹಾಕಿದ್ದೀರಿ, ಎಲ್ಲರೂ ಕೂಡ ಮಾನವರಾಗಿ ಬದುಕೋಣ, ಅದೇ ನಮ್ಮ ಜೀವನದಲ್ಲಿ ಗಳಿಸುವ ಮಹಾನ್ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.ಹನ್ಯಾಳು ಗ್ರಾಮದಲ್ಲಿ ಉತ್ತಮವಾದ ಸರಕಾರಿ ಪ್ರೌಢಶಾಲೆ, ಮಕ್ಕಳ ಮನೆ, ಗ್ರಂಥಾಲಯ ಸೇರಿದಂತೆ ಇತರೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಎಲ್ಲವೂ ಕೂಡ ಹೈಟೆಕ್ ಸೌಕರ್ಯದಿಂದ ಕೂಡಿವೆ. ಸಾವಿರಾರು ರುಪಾಯಿ ಹಣವನ್ನು ತೆತ್ತು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಬದಲು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಮನೆ, ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಪ್ರಯೋಜನಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಮಂಜುನಾಥ್, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ವೇಣುಗೋಪಾಲ್, ಮಂಜುನಾಥ್, ಪಾರ್ವತಮ್ಮ ರಮೇಶ್, ಅನುಸೂಯ ಸ್ವಾಮೀಗೌಡ, ರಾಮಯ್ಯ, ಭಾಗ್ಯಮ್ಮ ರಮೇಶ್, ಸುನಂದ ಸುಲೇಂದ್ರ, ರೋಜಾ ಕೃಷ್ಣಮೂರ್ತಿ, ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಕಾರ್ಯದರ್ಶಿ ರವಿ ಹಾಗೂ ಗ್ರಾಮದ ಮುಖಂಡರು ಇದ್ದರು.

Share this article