ಶಾಲಾ ಮಕ್ಕಳಲ್ಲಿ ವಚನ ಸಾಹಿತ್ಯದ ಅರಿವು

KannadaprabhaNewsNetwork |  
Published : Feb 24, 2026, 02:45 AM IST
23ಎಚ್ಎಸ್ಎನ್7 :  | Kannada Prabha

ಸಾರಾಂಶ

ಶಾಲಾ ಮಕ್ಕಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸಿ, ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಿತ್ಯ ಬದುಕಿನಲ್ಲಿ ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳು ವಿಷಯದಡಿ ವಚನ ಗಾಯನ, ವಚನ ನೃತ್ಯ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಚನ್ನಪಟ್ಟಣದಲ್ಲಿ ಆಯೋಜಿಸಲಾಗಿತ್ತು. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಬಸವಣ್ಣ ಅವರ ವಚನವನ್ನು ಮಕ್ಕಳಿಗೆ ಹೇಳಿಕೊಟ್ಟು, ನುಡಿಯಲ್ಲೂ ನಡೆದಲ್ಲೂ ಸತ್ಯತೆ ಇರಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಶಾಲಾ ಮಕ್ಕಳಲ್ಲಿ ವಚನ ಸಾಹಿತ್ಯದ ಅರಿವು ಮೂಡಿಸಿ, ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ನಿತ್ಯ ಬದುಕಿನಲ್ಲಿ ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳು ವಿಷಯದಡಿ ವಚನ ಗಾಯನ, ವಚನ ನೃತ್ಯ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಚನ್ನಪಟ್ಟಣದಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು, ಹಾಸನ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಹಾಸನ ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚನ್ನಪಟ್ಟಣ ಇವರ ಸಹಯೋಗದಲ್ಲಿ ನೆರವೇರಿಸಲಾಯಿತು. ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಶರಣೆ ಸೌಭಾಗ್ಯ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕದಳಿ ಮಹಿಳಾ ವೇದಿಕೆ, “ನಿತ್ಯ ಬದುಕಿನಲ್ಲಿ ವಚನ ಸಾಹಿತ್ಯ ಮತ್ತು ನೈತಿಕ ಮೌಲ್ಯಗಳು” ಕುರಿತು ಮಕ್ಕಳಿಗೆ ಮನಮುಟ್ಟುವ ಉಪನ್ಯಾಸ ನೀಡಿದರು. ಅಕ್ಕಮಹಾದೇವಿ ಅವರ “ತನು ಕರಗದವರಲ್ಲಿ ಪುಷ್ಪವನ್ನೊಲ್ಲಯ್ಯ ನೀನು” ಎಂಬ ವಚನವನ್ನು ಉಲ್ಲೇಖಿಸಿ, ಮಕ್ಕಳಲ್ಲಿ ವಚನಗಳನ್ನು ರೂಢಿಸಿಕೊಳ್ಳುವ ಮಹತ್ವವನ್ನು ವಿವರಿಸಿದರು. ಗುರು-ಹಿರಿಯರಿಗೆ ಗೌರವ, ತಂದೆ-ತಾಯಿಗೆ ನಮಸ್ಕಾರ, ದಿನನಿತ್ಯ ಮಾಡಿದ ಒಳ್ಳೆಯ ಕಾರ್ಯಗಳನ್ನು ಮೆಲುಕು ಹಾಕುವ ಅಭ್ಯಾಸ ಇವುಗಳೇ ನೈತಿಕ ಮೌಲ್ಯಗಳ ಮೂಲ ಎಂದು ತಿಳಿಸಿದರು.ಪ್ರಾಸ್ತಾವಿಕ ನುಡಿಯನ್ನು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶರಣ ಕುಮಾರಸ್ವಾಮಿ ನುಡಿದು, ಪರಿಷತ್ತಿನ ೪೦ನೇ ಸಂಭ್ರಮವನ್ನು ನೆನಪಿಸಿದರು. ಶರಣರ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಉದ್ಘಾಟನಾ ಭಾಷಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಶರಣ ಕಟ್ಟಾಯ ಶಿವಕುಮಾರ್‌ ಮಾತನಾಡಿ, “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಬಸವಣ್ಣ ಅವರ ವಚನವನ್ನು ಮಕ್ಕಳಿಗೆ ಹೇಳಿಕೊಟ್ಟು, ನುಡಿಯಲ್ಲೂ ನಡೆದಲ್ಲೂ ಸತ್ಯತೆ ಇರಬೇಕು ಎಂದು ತಿಳಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶರಣೆ ಗಿರಿಜ ನಿರ್ವಾಣಿ, ಅಕ್ಕಮಹಾದೇವಿ ಅವರ ಜೀವನ ಚರಿತ್ರೆ, ವೈರಾಗ್ಯ ಮತ್ತು ಭಕ್ತಿ ಪರಂಪರೆಯನ್ನು ವಿವರಿಸಿದರು. ಕದಳಿ ಎಂಬ ಸ್ಥಳವು ಅಕ್ಕಮಹಾದೇವಿಯವರ ಐಕ್ಯಸ್ಥಳವಾಗಿದ್ದು, ೧೨ನೇ ಶತಮಾನದ ಮೊದಲ ಕವಯಿತ್ರಿಯಾಗಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು. “ಬೆಟ್ಟದ ಮೇಲೊಂದು ಮನೆಯ ಮಾಡಿ”, “ಹಸಿವಾದರೆ ಭಿಕ್ಷಾನ್ನಗಳುಂಟು” ಮುಂತಾದ ಪ್ರಸಿದ್ಧ ವಚನಗಳನ್ನು ಉದಾಹರಿಸಿದರು.ಕಾರ್ಯಕ್ರಮದಲ್ಲಿ ಸುಮಾರು ೩೦ ವಿದ್ಯಾರ್ಥಿಗಳು ವಚನ ವಾಚನ, ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಿದರು. ಉತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಎಲ್ಲ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯದ ಪುಸ್ತಕಗಳನ್ನು ನೀಡಲಾಯಿತು.ಕಾರ್ಯಕ್ರಮದ ನಿರೂಪಣೆಯನ್ನು ಶರಣೆ ಅನುಪಮಾ, ಪ್ರಾರ್ಥನೆಯನ್ನು ಶರಣಿ ಭಾರತಿ, ಸ್ವಾಗತವನ್ನು ಶರಣ ಹರೀಶ್ ಕಲ್ಲಹಳ್ಳಿ ಹಾಗೂ ವಂದನಾರ್ಪಣೆಯನ್ನು ಶರಣೆ ರುಕ್ಮಿಣಿ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ನಾಯಕರ ಜತೆ ಒಂದೇ ಕಾರಿನಲ್ಲಿ ಕಾಣಿಸಿಕೊಂಡ ಪ್ರೀತಂ ಗೌಡ
ಇಂದಿನಿಂದ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆ